ಸೌತ್ ಇಂಡಸ್ಟ್ರೀಗೆ ಎಂಟ್ರಿ ಕೊಡಲು ರೆಡಿ ಆರ್ತಿ ಬೇಡಿ…ಯಾರು ಗೊತ್ತಾ ಈ ಬ್ಯೂಟಿ
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಹೈ ಸ್ಕೋರ್ ಪಂದ್ಯ ಅಭಿಮಾನಿಗಳನ್ನು ಸೀಟಿನ ತುದಿಗೆ ತಂದು ಕುರಿಸಿತ್ತು. ಈ ಪಂದ್ಯದ ಮಧ್ಯೆ ಎಲ್ಲರ ಗಮನಸೆಳೆದಿದ್ದು ಆ ಬ್ಯೂಟಿ. ಅವ್ರೇ ಆರ್ತಿ ಬೇಡಿ. ಈ ಪಂದ್ಯದಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಆರ್ತಿ ಬೇಡಿ ರಾತ್ರೋ ರಾತ್ರಿ ಸೆನ್ಸೇಷನಲ್ ಸ್ಟಾರ್ ಆಗಿಬಿಟ್ಟರು. ಇಂಟರ್ ನೆಟ್ ಜಗತ್ತಿನಲ್ಲಿ ಎಲ್ಲೆಡೆ ಆರ್ತಿ ಬೇಡಿ ಪಟಗಳು ವೈರಲ್ ಆದ ನಂತ್ರ ಈಕೆ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಆಗಿಬಿಟ್ಟರು.
ಆರ್ತಿ ಬೇಡಿ ಖ್ಯಾತಿ ಈಗ ದುಪ್ಪಟ್ಟಾಗಿದೆ. ಈ ನಡುವೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲು ಈ ಬ್ಯೂಟಿ ತಯಾರಾಗ್ತಿದ್ದಾಳೆ. ಹಲವು ನಿರ್ಮಾಪಕರು, ನಿರ್ದೇಶಕರನ್ನು ಅಪ್ರೋಚ್ ಆಗಿರುವ ಆರ್ತಿ ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದು, ಈಗಾಗಲೇ ಕೆಲ ಕಥೆಗಳನ್ನು ಓದುತ್ತಿದ್ದು, ಆ ಕಥೆಗಳು ಇಷ್ಟವಾದಲ್ಲಿ ಬಣ್ಣ ಹಚ್ಚಿ ಕ್ಯಾಮೆರಾ ಎದುರು ಹಾಜರಾಗಲಿದ್ದಾರೆ.
ಆರ್ತಿ ಬೇಡಿ ಹಿಮಾಲಯ, ಒಲಾ, ಐಸಿಐಸಿಐ ಬ್ಯಾಂಕ್, ವೈಲ್ಡ್ ಸ್ಟೋನ್ ನಂತಹ 35-40ಕ್ಕೂ ಜಾಹೀರಾತುಗಳಲ್ಲಿ ನಟಿಸ್ತಿದ್ದಾರೆ. ಸದ್ಯ ಆರ್ತಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗಲು ಅಖಾಡ ಸಿದ್ಧ ಮಾಡಿಕೊಳ್ತಿದ್ದು, ಯಾವ ರೀತಿ ಸಿನಿಮಾವನ್ನು ಚ್ಯೂಸ್ ಮಾಡ್ತಾರೆ ಅನ್ನೋದು ಸದ್ಯಕ್ಕಿರುವ ಕುತೂಹಲ.