ಅಮೀರ್ ಖಾನ್ ಮತ್ತೊಮ್ಮೆ ಲವ್ವಲ್ಲಿ ಬಿದ್ದಿದ್ದಾರೆ ಎಂದು ಮುಂಬೈ ಸದ್ಯ ಮಾತನಾಡಿಕೊಳ್ಳುತ್ತಿದೆ. ಅಮೀರ್ ಖಾನ್‌ಗೆ ಈಗ 59ರ ಹರೆಯ. ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎದೆಯೆತ್ತರಕ್ಕೆ ಬೆಳೆದಿದ್ದಾರೆ.
ಅಮೀರ್ ಖಾನ್ ಹೆಸರು ಹಿಂದೆ ದಂಗಲ್ ಚಿತ್ರದ ನಾಯಕಿ ಫಾತಿಮಾ ಸನಾ ಶೇಖ್ ಜೊತೆ ಥಳುಕು ಹಾಕಿಕೊಂಡಿತ್ತು. ಕಿರಣ್ ರಾವ್ ಅವರಿಂದ ಅಮೀರ್ ದೂರವಾಗಲು ಇದೇ ಕಾರಣವೆಂದು ಕೂಡ ಹೇಳಲಾಗಿತ್ತು. ಹೀಗಾಗಿಯೇ ಫಾತಿಮಾ ಸನಾ ಶೇಖ್ ಅವರ ಜೊತೆ ಅಮೀರ್ ಮದುವೆಯಾಗಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅಮೀರ್ ಖಾನ್ ಮದುವೆಯಾಗಲು ಸಿದ್ಧವಾಗಿರುವುದು ಫಾತಿಮಾ ಸನಾ ಶೇಖ್ ಅವರ ಜೊತೆ ಅಲ್ಲ ಬದಲಿಗೆ ಬೆಂಗಳೂರಿನ ಚೆಲುವೆಯ ಜೊತೆ
ಮೀರ್ ಖಾನ್ ತೀರಾ ಇತ್ತೀಚೆಗೆ ತಮ್ಮ ಹೊಸ ಪ್ರಿಯತಮೆಯನ್ನು ತನ್ನ ಇಬ್ಬರು ಮಾಜಿ ಪತ್ನಿಯರಿಗೆ ಮತ್ತು ತಮ್ಮ ಮೂವರು ಮಕ್ಕಳಿಗೆ ಪರಿಚಯಿಸಿದ್ದಾರೆ, ಎಲ್ಲರೂ ಜೊತೆಯಲ್ಲಿಯೇ ಕುಳಿತು ಭರ್ಜರಿ ಭೋಜನವನ್ನು ಮಾಡಿದ್ದಾರೆ ಎಂದು ಫಿಲ್ಮ್ ಫೇರ್ ವರದಿ ಮಾಡಿದೆ.