ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹೊಸ ಉದ್ಯಮ ಪ್ರಾರಂಭಿಸಿದ್ದಾರೆ. ಸಿನಿಮಾ ನಿರ್ಮಾಣ, ತಂದೆ ಒಡೆತನದ Aha ಒಟಿಟಿಯಲ್ಲಿಯೂ ಪಾಲುದಾರಾಗಿರುವ ಅಲ್ಲು ಅರ್ಜುನ್, ಹೊಸ ಸ್ಟುಡಿಯೋ ಕೂಡ ಶುರು ಮಾಡಿದ್ದಾರೆ. ಈ ಉದ್ಯಮಗಳ ಜೊತೆಯಲ್ಲಿ ಬನ್ನಿ ಐಶಾರಾಮಿ ಮಲ್ಟಿಪ್ಲೆಕ್ಸ್ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಯಶ್ ಮನೆಗೆ ಬಂದಾಯ್ತು ದುಬಾರಿ ಅತಿಥಿ! ಬೆಲೆ ಎಷ್ಟು ಗೊತ್ತಾ?
ಈ ಚಿತ್ರಮಂದಿರಕ್ಕೆ ಎಎಎ ಸಿನಿಮಾಸ್ ಎಂದು ಹೆಸರಿಡಲಾಗಿದೆ. ಏಷ್ಯನ್ ಸಿನಿಮಾಸ್ ಸಹಭಾಗಿತ್ವದಲ್ಲಿ ಹೈದ್ರಾಬಾದ್ ನ ಅಮೀರ್ ಪೇಟೆಯಲ್ಲಿ ಎಎಸ್ ಸಿನಿಮಾಸ್ ನಿನ್ನೆ ಅದ್ಧೂರಿಯಾಗಿ ಶುಭರಾಂಭಗೊಂಡಿದೆ. ಅಲ್ಲು ಅರವಿಂದ್, ಸುನೀಲ್ ನಾರಂಗ್ ಹಾಗೂ ಅಲ್ಲು ಅರ್ಜುನ್ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಡೇರ್ ಡೆವಿಲ್ ಮುಸ್ತಾಫಾ ಚಿತ್ರದ ಪರವಾಗಿ ಸಿ.ಎಂ ಸಿದ್ದರಾಮಯ್ಯ ಡೇರ್ ನಿರ್ಧಾರ!
ಎಎಎ ಸಿನಿಮಾಸ್ ಒಟ್ಟಾರೆಯಾಗಿ ಮೂರು ಲಕ್ಷ ಚದರ ಅಡಿ ಇದ್ದು, ಮೂರನೇ ಮಹಡಿಯಲ್ಲಿ 35 ಸಾವಿರ ಚದರ ಅಡಿಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ನಾಲ್ಕನೇ ಫ್ಲೋರ್ನಲ್ಲಿ ಐದು ಸ್ಕ್ರೀನ್ಗಳ ಎಎಎ ಚಿತ್ರಮಂದಿರವಿದೆ. ಸ್ಕ್ರೀನ್ 2ರಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿದೆ. ದಕ್ಷಿಣ ಭಾರತದದಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿರುವ ಏಕೈಕ ಮಲ್ಟಿಪ್ಲೆಕ್ಸ್ ಇದಾಗಿದೆ. ಅತ್ಯುತ್ತಮ ಸೌಂಡ್ ಸಿಸ್ಟಂ, ಸ್ಕ್ರೀನ್ ಹಾಗೂ ಆಸನ ವ್ಯವಸ್ಥೆಯನ್ನೂ ಎಎಎ ಸಿನಿಮಾಸ್ ಕಲ್ಪಿಸಿದೆ. ವಿಶ್ವ ದರ್ಜೆಯ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿರುವ ಎಎಎಸ್ ಮಲ್ಟಿಪ್ಲೆಕ್ಸ್ ನಲ್ಲಿ ಪ್ರಭಾಸ್ ಆದಿಪುರುಷ ಸಿನಿಮಾ ಮೊದಲು ಪ್ರದರ್ಶನಗೊಳ್ತಿದೆ.