ಕಂಟೆ0ಟ್‌ಗೋಸ್ಕರ ತರಾವರಿ ಸರ್ಕಸ್ ಮಾಡುತ್ತಾ, ವೀವ್ಸ್ಗಾಗಿ ಯಾವ ಮಟ್ಟಕ್ಕೂ ಹೋಗುವ ಯೂಟ್ಯೂಬ್ರ‍್ಸ್ ಮಧ್ಯೆ ಇಲ್ಲೊಬ್ಬರು ಸಾವಿನ ಅಂಚಿನಲ್ಲಿದ್ದ ಕಲಾವಿದನೊಬ್ಬರ ಬದುಕಿಗೆ ಬೆಳಕಾಗಿದ್ದಾರೆ. ಹೌದು, ಅವರೇ ಯೂಟ್ಯೂಬರ್ ಮತ್ತು ಸಿನಿಮಾ ಪ್ರಚಾರಕರ್ತರಾಗಿರುವ ಸೂರಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಧಿಕ್ಕಾರಕ್ಕಿಂತ ಆಧಿಕಾರ ಮುಖ್ಯ ಎಂದು “ವಾರ್ನರ್” ಮೂಲಕ ಹೇಳಿದ ರಿಯಲ್ ಸ್ಟಾರ್ .
ಇತ್ತೀಚಿಗೆ ಹಾಸ್ಯ ಕಲಾವಿದ ಹರೀಶ್ ಕಡಂದಲೆ ಇವರು ಅನಾರೋಗ್ಯದಿಂದ ಬಳಲುತ್ತಿದ್ದ ಸುದ್ದಿ ತಿಳಿದು ತನ್ನ ಚಾನೆಲ್ ಮೂಲಕ ಅವರ ಸಂಕಷ್ಟಕ್ಕೆ ಸಹಾಯ ಕೋರಿ ಆಪರೇಶನ್‌ಗೆ ಬೇಕಾದ ಹಣದ ಸಹಾಯವನ್ನು ದಾನಿಗಳಿಂದ 5 ಲಕ್ಷಕ್ಕೂ ಹೆಚ್ಚು ಹೊಂದಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಅಸ್ಪತ್ರೆ ವೆಚ್ಚ ಭರಿಸುವಷ್ಟು ಹಣ ಸಂಗ್ರಹವಾದ ಮೇಲೆ, `ಇನ್ನು ಹಣ ಹಾಕುವುದು ಬೇಡ’ ಎಂದು ಹಣ ಕೊಟ್ಟವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಹಿಂದೆಯೂ ಸೂರಜ್ ಸೂರಿಲ್ಲದ ಕಲಾವಿದರಿಗೆ ತಮ್ಮ ಕೈಲಾದ ಸಹಾಯಮಾಡಿದವರು. ಸಂದರ್ಶನಗಳ ಮೂಲಕ ತೆರೆಮರೆಯಲ್ಲಿದ್ದ ಕಲಾವಿದರನ್ನು ಲೈಮ್ ಲೈಟಿಗೆ ತರುವಲ್ಲಿಯೂ ಇವರ ಶ್ರಮವಿದೆ. ಯೂಟ್ಯೂಬ್ ಚಾನೆಲ್ ಮುಖಾಂತರ ಹಲವಾರು ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಿನಿಮಾ ರಂಗವನ್ನು ಕಟ್ಟುವ ಕೆಲಸವನ್ನು ತಮ್ಮದೇ ರೀತಿಯಲ್ಲಿ ಮಾಡುತ್ತಿರುವವರು ಇವರು.
ಇಂದಿನ ಡಿಜಿಟಲ್ ಕ್ರಾಂತಿಯನ್ನು ಕೇವಲ ಹಣ ಸಂಪಾದಿಸುವುದಕ್ಕಷ್ಟೇ ಸೀಮಿತಗೊಳಿಸಿರುವವರ ಮಧ್ಯೆ ಸೂರಜ್ ವಿಭಿನ್ನವಾಗಿ ನಿಲ್ಲುತ್ತಾರೆ. ಅವರ ಈ ಸಮಾಜಮುಖೀ ಕೆಲಸ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ ಎಂಬುದೇ ಆಶಯ.