Sandalwood Leading OnlineMedia

“ಖೇಲಾ” ಚಿತ್ರದ “ಪುಣ್ಯಾತ್ ಗಿತ್ತೀ” ಹಾಡಿಗೆ ಪ್ರಶಂಸೆಯ ಸುರಿಮಳೆ

  • “ಖೇಲಾ” ಚಿತ್ರದ “ಪುಣ್ಯಾತ್ ಗಿತ್ತೀ” ಹಾಡಿಗೆ ಪ್ರಶಂಸೆಯ ಸುರಿಮಳೆ .”  A shower of praise for the song “Punyat Gitti” from the film “Khela”./rc
  • *ಇದು ಭರತ್ ವಿ.ಜೆ ನಿರ್ಮಾಣ ಹಾಗೂ ನಿರ್ದೇಶನದಲ್ಲಿ “ಶ್ರಾವಣಿ ಸುಬ್ರಹ್ಮಣ್ಯ” ಹಾಗೂ “ಮೈನಾ” ಧಾರಾವಾಹಿಗಳ ಖ್ಯಾತಿಯ ವಿಹಾನ್ ಪ್ರಭಂಜನ್ ನಾಯಕನಾಗಿ ನಟಿಸಿರುವ ಚಿತ್ರ * .

ಭರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ “ಖೇಲಾ” ಚಿತ್ರಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ “ಪುಣ್ಯಾತ್ ಗಿತ್ತೀ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಎಂ.ಎಸ್ ತ್ಯಾಗರಾಜ್ ಸಂಗೀತ ನೀಡಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಆಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ‌ಚಿತ್ರತಂಡದ ಸದಸ್ಯರು ಸಿನಿಮಾ ಕುರಿತು‌ ಮಾತನಾಡಿದರು.

ನಾನು ಕನ್ನಡದ ಹಿರಿಯ ನಿರ್ಮಾಪಕ ಹಾಗೂ ನಿರ್ದೇಶಕ ವಿಷ್ಣುಕಾಂತ್ ಅವರ ಪುತ್ರ. ಅಪ್ಪನ ಮಾರ್ಗದರ್ಶನದಲ್ಲಿ ಚೊಚ್ಚಲ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಪ್ರಮುಖವಾಗಿ ಇದೊಂದು ಪ್ರೇಮ ಕಥಾನಕವಾಗಿದ್ದರೂ, ತಾಯಿ – ಮಗನ ಬಾಂಧವ್ಯ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ತಾಯಂದಿರ ದಿನದಂದು ಮೊದಲ ಹಾಡು ಬಿಡುಗಡೆಯಾಗಿತ್ತು. ಇಂದು “ಪುಣ್ಯಾತ್ ಗಿತ್ತೀ” ಹಾಡನ್ನು ಬಿಡುಗಡೆ ಮಾಡಿದ್ದೇವೆ. ಎಂ.ಎಸ್ ತ್ಯಾಗರಾಜ್ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ವಿಹಾನ್ ಪ್ರಭಂಜನ್, ಆಶಿಕ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಸಂಗೀತ ಭಟ್ ಸಹ ಅಭಿನಯಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಒಂದು ಹಾಡು ಹಾಗು ಒಂದು ಫೈಟ್ ನ‌ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ‌ ಭರತ್ ವಿ.ಜೆ ತಿಳಿಸಿದರು.

ತಾಯಂದಿರ ದಿನದಂದು ಬಿಡುಗಡೆಯಾದ ತಾಯಿ – ಮಗನ ಬಾಂಧವ್ಯದ ಹಾಡು ಈಗಾಗಲೇ ಜನಪ್ರಿಯವಾಗಿದೆ. ಇಂದು ಬಿಡುಗಡೆಯಾಗಿರುವ “ಪುಣ್ಯಾತ್ ಗಿತ್ತೀ” ಹಾಡು ಕೂಡ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.‌ ನಾನು ಈ ಚಿತ್ರದ ನಾಯಕ .‌ಚಿತ್ರದಲ್ಲಿ ಕಾಲೇಜು ಹುಡುಗ ಎಂದು ನಾಯಕ ವಿಹಾನ್ ಪ್ರಭಂಜನ್ ತಿಳಿಸಿದರು.

ನಮ್ಮ ಚಿತ್ರದಲ್ಲಿ ಐದು ಹಾಡುಗಳಿದ್ದು, ಈ ಹಾಡು ಸೇರಿದಂತೆ ಎರಡು ಹಾಡುಗಳನ್ನು ಪ್ರಮೋದ್ ಜೋಯಿಸ್ ಬರೆದಿದ್ದಾರೆ. ವೇಲ್ ಮುರುಗನ್ “ಪುಣ್ಯಾತ್ ಗಿತ್ತೀ” ಹಾಡನ್ನು ಹಾಡಿದ್ದಾರೆ ಎಂದು ಹಾಡುಗಳ ಹಾಗೂ ಹಾಡಿರುವವರ ಬಗ್ಗೆ ಸಂಗೀತ ನಿರ್ದೇಶಕ ಎಂ.ಎಸ್.ತ್ಯಾಗರಾಜ್ ಮಾಹಿತಿ ನೀಡಿದರು.

ನಾಯಕಿ ಆಶಿಕಾ ರಾವ್, ಪ್ರಮುಖ ಪಾತ್ರಧಾರಿ ಯುವರಾಜ್ ಗೌಡ, ಹಾಡು ಬರೆದಿರುವ ಪ್ರಮೋದ್ ಜೋಯಿಸ್ ಹಾಗೂ ಛಾಯಾಗ್ರಾಹಕ ಸ್ವಾಮಿ ಮೈಸೂರು ಮುಂತಾದ ಚಿತ್ರತಂಡದ ಸದಸ್ಯರು “ಖೇಲಾ” ಚಿತ್ರದ ಕುರಿತು ಮಾತನಾಡಿದರು.

 

 

 

Share this post:

Translate »