Sandalwood Leading OnlineMedia

ನಿರ್ದೇಶಕರ ಸಂಘದಿಂದ ಅಪರೂಪದ ಕಾರ್ಯಕ್ರಮ

ಸಾಕಷ್ಟು ಗೊಂದಲ, ವಿವಾದಗಳ ನಂತರ  ಚುನಾವಣೆ ನಡೆದು ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ)  ಮುಂಬರುವ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

 

ನವೆಂಬರ್ 18ರಿಂದ ರಾಜ್ಯಾದ್ಯಂತ `ಅಬ್ಬರ’!

ಸಂಘದ ನೂತನ ಅಧ್ಯಕ್ಷರಾದ ಎನ್.ಆರ್. ನಂಜುಂಡೇಗೌಡರು ಇತ್ತೀಚಿಗೆ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ಕಾನ್ಫಿಡಾ)ಗೆ ಒಂದು ದೊಡ್ಡ ಪರಂಪರೆಯ ಇತಿಹಾಸವಿದೆ. ಪುಟ್ಟಣ್ಣ ಕಣಗಾಲ್, ರಾಜೇಂದ್ರಸಿಂಗ್ ಬಾಬು ಅಂಥವರು ಕಟ್ಟಿ ಬೆಳೆಸಿದ 4 ದಶಕಗಳ ಇತಿಹಾಸವಿರುವ ಈ ಸಂಘ ರಾಜ್ಯಪ್ರಶಸ್ತಿಗಿಂತ ಕಮ್ಮಿ ಇಲ್ಲದ ಹಾಗೆ ಕಾನ್ಫಿಡಾ ಅವಾರ್ಡ್ ಸಮಾರಂಭವನ್ನು ನಡೆಸಿಕೊಂಡು ಬಂದಿತ್ತು.  ಆದರೆ ಈ ನಡುವೆ ಕಾರಣತರಗಳಿಂದ ಅದು ನಿಂತುಹೋಗಿತ್ತು. ಈಗ ನನ್ನ ಜೊತೆಗಿರುವ ತಂಡ ಎನರ್ಜಿಟಿಕ್ ಆಗಿದೆ. ಅದನ್ನು ಮತ್ತೆ ಮುಂದುವರೆಸಿಕೊಂಡು ಹೋಗುತ್ತೇವೆ. ಅಲ್ಲದೆ ಇದೇ ತಿಂಗಳ ೩೦ ರಂದು ಕಳೆದ ೪ ದಶಕಗಳಿಗೂ ಮೇಲ್ಪಟ್ಟು ಚಿತ್ರರಂಗದಲ್ಲಿ  ಸೇವೆ ಸಲ್ಲಿಸಿರುವ ಹಿರಿಯ ನಿರ್ದೇಶಕರುಗಳನ್ನು ಗೌರವಿಸುವ ಕಾರ್ಯಕ್ರಮವನ್ನು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸ್ಕೌಟ್ ಭವನದಲ್ಲಿ ಹಮ್ಮಿಕೊಂಡಿದ್ದೇವೆ.

 

 

“ತಿಮ್ಮಯ್ಯ & ತಿಮ್ಮಯ್ಯ” ಚಿತ್ರದಲ್ಲಿ ಅನಂತನಾಗ್ ಹಾಗೂ ದಿಗಂತ್

 

 

 

ಸದ್ಯ ಸಂಘದಲ್ಲಿ ಯಾವುದೇ ಬಂಡವಾಳ ಇಲ್ಲದಿದ್ದರೂ ಈ ಕಾರ್ಯಕ್ರಮ ಮಾಡಬೇಕು ಎಂದಾಗ ಸಾಕಷ್ಟು ಜನ ಕಲಾವಿದರು, ನಿರ್ಮಾಪಕರುಗಳು ಕೈ ಜೋಡಿಸುತ್ತಿದ್ದಾರೆ. ಅದೇ ಧೈರ್ಯದ ಮೇಲೆ ನಾವು ಈ ಸಾಹಸ ಮಾಡುತ್ತಿದ್ದೇವೆ, ಸದ್ಯ ಸಂಘದ ತಾತ್ಕಾಲಿಕ ಕಛೇರಿಯನ್ನು ಶೇಷಾದ್ರಿಪುರಂನಲ್ಲಿ ತೆರೆದಿದ್ದೇವೆ. ಅಲ್ಲದೆ ಸಂಘಕ್ಕೆ ಹೊಸದಾಗಿ ಸದಸ್ಯರನ್ನು ಸೇರಿಕೊಳ್ಳುವಂತೆ ಪ್ರೋತ್ಸಾಹಿಸುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ರಾಮಮೂರ್ತಿ , ನಾಗೇಂದ್ರ ಅರಸ್, ಎನ್ನಾರ್.ಕೆ.ವಿಶ್ವನಾಥ್, ಮಂಜು ಮಸ್ಕಲ್‌ಮಟ್, ಕಾರಂಜಿ ಶ್ರೀಧರ್ ಹಾಗೂ ಇತರರು ಉಪಸ್ಥಿತರಿದ್ದರು.

 

 

Share this post:

Translate »