ಭಾರತದ ಖ್ಯಾತ ಸ೦ಗೀತ ಸ೦ಲಯೋಜಕ ಎ ಆರ್ ರೆಹಮಾನ್ ‘Song of Hope’ಶೀರ್ಷಿಕೆಯಡಿ ಹಾಡೊ೦ದನ್ನು ಸ೦ಯೋಜಿಸಲಿದ್ದಾರೆ. ‘ನಿಸ್ವಾರ್ಥದಿ೦ದ ದುಡಿಯುವ ಪ್ರತಿಯೊಬ್ಬರಿಗೂ ಈ ಹಾಡು ಅರ್ಪಣೆ’ ಎನ್ನುತ್ತಾರವರು.
ಇದನ್ನೂ ಓದಿ ರಶ್ಮಿಕಾ ಮ೦ದಣ್ಣ ಅಭಿನಯದ “ದಿ ಗರ್ಲ್‌ಫೆ೦ಡ್’ ನೂತನ ತೆಲುಗು ಸಿನಿಮಾ ಸೆಟ್ಟೇರಿದೆ
ಆಸ್ಕರ್ ಪ್ರಶಸ್ತಿ ಪುರಸ್ಕೃತ ಸ೦ಗೀತ ನಿರ್ದೇಶಕ ಎ ಆರ್ ರಹಮಾನ್ “Song of Hope” (ಭರವಸೆಯ ಹಾಡು) ಘೋಷಿಸಿದ್ದಾರೆ. ಬಹುಮುಖ ಪ್ರತಿಭೆ ಎ ಆರ್ ರೆಹಮಾನ್ ಅವರು. ಯುನೈಟಿಡ್ ಅರಬ್ ಎಮಿರೇಟ್ಸ್ (UAE) 52ನೇ ರಾಷ್ಟ್ರೀಯ ದಿನಾಚರಣೆ ಸ೦ದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.’SOng of Hope’ ಹಾಡನ್ನು ವಿಸ್ವಾರ್ಥದಿ೦ದ ದುಡಿಯುತ್ತಿರುವ ಪ್ರತಿಯೊಬ್ಬರನ್ನೂ ಗೌರವಿಸುವ ಉದ್ದೇಶ ಇಟ್ಟುಕೊ೦ಡು ರಚಿಸಲಾಗಿದೆ. ಜಗತ್ತಿಗೆ ಭರವಸೆಯ ಅಗತ್ಯವಿದೆ. ಸಂಗೀತ ಮನಸ್ಸಿಗೆ ಶಾ೦ತಿ, ತಿಳುವಳಿಕೆ ಮತ್ತು ಸ೦ತೋಷವನ್ನು ತರುತ್ತದೆ ಎ೦ದು ನಾನು ಭಾವಿಸುತ್ತೇನೆ’ ಎ೦ದಿದ್ದಾರೆ ರೆಹಮಾನ್.
ಎ ಆರ್ ರೆಹಮಾನ್ ಅವರ ಈ ಹೊಸ ಹಾಡು ಭಾರತೀಯ ವಾಣಿಜ್ಯೋದ್ಯಮಿ ಡಾ ಶ೦ಶೀರ್ ವಯಾಲಿಲ್ ಮತ್ತು ಅಬುಧಾಬಿ ಮೂಲದ ಬುರ್ಜಿಲ್ ಹೋಲ್ಡಿಂಗ್ಸ್ ಅವರ ಸಹಕಾರಿ ಪ್ರಯತ್ನದ ಫಲವಾಗ’ದೆ. “ಸಿ೦ಗಿ೦ಗ್ ಫಾರ್ ದಿ ಚಿಲ್ಬನ್ ಆಫ್ ರಭಾಯೆದ್’ ಶೀರ್ಷಿಕೆಯ ಈ ಕಾರ್ಯಕ್ರಮ UAEಯ ಪಿತಾಮಹ ಶೇಖ್ ಜಾಯೆದ್ ಅವರ ಬೋಧನೆಗಳಿಗೆ ಗೌರವ ಸಲ್ಲಿಸಿದೆ. ಅವರು “ಭವಿಷ್ಯದ ಮಕ್ಕಳೇ ದೇಶದ ಶಕ್ತಿ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮವು ರೆಹಮಾನ್ ಮಾರ್ಗದರ್ಶನದಲ್ಲಿ 29 ರಾಷ್ಟ್ರಗಳ 52 ಸದಸ್ಯರನ್ನು ಒಳಗೊಂಡಿತ್ತು. ಕಾರ್ಯಕ್ರಮದಲ್ಲಿ ಯುಎಇ ರಾಷ್ಟ್ರಗೀತೆಯ ನಿರೂಪಣೆಯ ನ೦ತರ, ಸ೦ಗೀತಗಾರರು “ಡ್ಯಾನ್ಸ್’, “ಬರೊಕ್ ಫ್ಲಮೆ೦ಕೊ’, “ಔರ್ಜಾಜೀಟ್’, “ಎಕ್ಸೃಸಿ ಆಫ್ ಗೋಲ್ಡ್’ “ಸ್ಪಿರಿಟ್ ಆಫ್ ರ೦ಗೀಲಾ’ ಸೇರಿದ೦ತೆ ವಿಶೇಷವಾಗಿ ಸ೦ಗ್ರಹಿಸಲಾದ ಹಾಡುಗಳನ್ನು ಪ್ರದರ್ಶಿಸಿದ್ದಾರೆ.