ಬೆಂಗಳೂರು: ಪೋರ್ಟಿಸ್ ಆಸ್ಪತ್ರೆ ಈಗಾಗಲೇ ದೇಶದೆಲ್ಲೆಡೆ ಉತ್ತಮ ಹೆಸರನ್ನು ಹೊಂದಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದೆ. ಒಳ್ಳೆ ಹೆಸರನ್ನು ಹೊಂದಿರುವ ಪೋರ್ಟಿಸ್ ಆಸ್ಪತ್ರೆ ಈ ಮೊದಲು ನಾಗರಭಾವಿಯಲ್ಲಿ ಇತ್ತು. ಆದರೆ ಅದನ್ನು ಅತ್ಯಾಧುನಿಕಗೊಳಿಸಿ ಈಗ ಮರು ಉದ್ಘಾಟನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ನಟ, ನಿರ್ದೇಶಕ ಉಪೇಂದ್ರ ಅವರು ಆಸ್ಪತ್ರೆಯ ಮರು ಉದ್ಘಾಟನೆ ಮಾಡಿದ್ದಾರೆ.
ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ನಟ ಉಪೇಂದ್ರ, ಇತ್ತೀಚಿನ ದಿನಗಳಲ್ಲಿ ನಾಗರಭಾವಿ ಸಾಕಷ್ಟು ಬೆಳೆದಿದೆ. ಈ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಫೋರ್ಟಿಸ್ ಮೇಲ್ದರ್ಜೆಗೇರಿಸಿರುವುದು ಜನಸಾಮಾನ್ಯರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇನ್ನಷ್ಟು ಹೆಚ್ಚು ಸೇವೆಯನ್ನು ಜನಸಾಮಾನ್ಯರು ಈ ಆಸ್ಪತ್ರೆಯಿಂದ ಪ್ರಯೋಜನ ಪಡೆದುಕೊಳ್ಳಲಿ ಎಂದು ಆಶಿಸುವೆ ಎಂದರು.
ಫೋರ್ಟಿಸ್ ಹೆಲ್ತ್ ಕೇರ್ ಲಿಮಿಟೆಡ್ನ ಗ್ರೂಪ್ ಸಿಒಒ ಅನಿಲ್ ವಿನಾಯಕ್ ಮಾತನಾಡಿ, ಸತತ 35 ವರ್ಷಗಳಿಂದ ಜನರಿಗೆ ಆರೋಗ್ಯ ಸೇವೆ ಸಲ್ಲಿಸುತ್ತಾ ಬಂದಿರುವ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯನ್ನು, ಇನ್ನಷ್ಟು ಮೇಲ್ದರ್ಜೆಗೇರಿಸುವ ಗುರಿಯನ್ನು ತಲುಪಿದ್ದೇವೆ. 24/7 ತುರ್ತು ಮತ್ತು ಟ್ರಾಮಾ ಕೇರ್, ICU & ಕ್ರಿಟಿಕಲ್ ಕೇರ್, ಹೃದಯ ಆರೈಕೆ, ಮಹಿಳಾ ಮತ್ತು ಮಕ್ಕಳ ಆರೈಕೆ, ಯುರೋ-ಆಂಕೊಲಾಜಿ ಸೇರಿದಂತೆ ಎಲ್ಲಾ ವಿಭಾಗದ ತಂತ್ರಜ್ಞಾನವು ಇಲ್ಲಿ ಲಭ್ಯವಿದೆ. ಯಾವುದೇ ತುರ್ತು ಚಿಕಿತ್ಸೆಗೂ ಇಲ್ಲಿ ಚಿಕಿತ್ಸೆ ಸಿಗಲಿದೆ.
ಇದಷ್ಟೇ ಅಲ್ಲದೆ, ವಿದೇಶಗಳಿಂದ ಸಾಕಷ್ಟು ಅತ್ಯಾಧುನಿಕ ಯಂತ್ರೋಪಕರಣ ಹಾಗೂ ರೋಬೋಟಿಕ್ ತಂತ್ರಜ್ಞಾನವನ್ನು ಸಹ ಹೊಂದಿದ್ದು, ಇದು ಎಂತಹ ಗಂಭೀರ ಹಾಗೂ ಸಂಕೀರ್ಣದಂತಹ ಶಸ್ತ್ರಚಿಕಿತ್ಸೆಯನ್ನೂ ಸಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಷ್ಟೇ ಅಲ್ಲದೆ, ಮುಖ್ಯವಾಗಿ 100 ಹೆಚ್ಚು ಪರಿಣಿತ ಹಾಗೂ ತಜ್ಞ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರು ಪಶ್ಚಿಮ ಭಾಗದಲ್ಲಿ ಇಂತಹ ಅತ್ಯಾಧುನಿಕ ಆಸ್ಪತ್ರೆ ಹೊಂದಿರುವ ಆಸ್ಪತ್ರೆಯಲ್ಲಿ ನಾಗರಭಾವಿ ಫೋರ್ಟಿಸ್ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.
ಫೋರ್ಟಿಸ್ ಹಾಸ್ಪಿಟಲ್ಸ್ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, “ಬೆಂಗಳೂರಿನ ನಾಗರಭಾವಿಯಲ್ಲಿ ನಮ್ಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಲು ಹೆಮ್ಮೆ ಎನಿಸುತ್ತದೆ. ಈಗ ಆರೋಗ್ಯ ಸೇವೆಗಳನ್ನು ಬಯಸುವ ದೊಡ್ಡ ವರ್ಗದ ಜನರು ಈ ಸೇರ್ಪಡೆಯಿಂದ ಪ್ರಯೋಜನ ಪಡೆಯುತ್ತಾರೆ.
ಇದು ನಮ್ಮ ರೋಗಿಗಳಿಗೆ ಸೂಕ್ತ ಆಯ್ಕೆ ನೀಡುವ ಜೊತೆಗೆ, ಅತ್ಯುತ್ತಮ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ಫೋರ್ಟಿಸ್ನಲ್ಲಿ, ನಮ್ಮ ರೋಗಿಗಳು ತಮ್ಮ ಪ್ರಯಾಣದ ಪ್ರತಿ ಹಂತದಲ್ಲೂ ಗುಣಮಟ್ಟದ ಆರೈಕೆ ಪಡೆಯಲಿದ್ದಾರೆ ಎಂದು ಹೇಳಿದರು.