Sandalwood Leading OnlineMedia

ಮಿಲ್ಕಿ ಬ್ಯೂಟಿ ತಮನ್ನ ಭಾಟಿಯಾಗೆ ಹರ್ಷ ತಂದ ಹೊಸ ಇಮೇಜ್

ಈ ಚೆಲುವೆಗೆ ಅವಕಾಶಗಳ ಸಂಖ್ಯೆ ಕಡಿಮೆ ಆಯ್ತು ಎಂದೇ ಹೇಳಬಹುದಾಗಿದೆ. ಆದರೆ ಆಡಿಕೊಳ್ಳುವವರ ಬಾಯಿ ಮುಚ್ಚುವಂತೆ ಈಕೆಗೆ ಅವಕಾಶಗಳು ಹುಡುಕಿಕೊಂಡು ಬಂದವು. 2023ರಲ್ಲಿ ಈಕೆ ಐದು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ತಮನ್ನ ಭಾಟಿಯಾಳನ್ನು ದಕ್ಷಿಣ ಭಾರತದ ಚಿತ್ರ ಪ್ರೇಮಿಗಳು ಮಿಲ್ಕಿ ಬ್ಯೂಟಿ ಎನ್ನುವ ಹೆಸರಿನಿಂದ ಕರೆಯುವುದು. ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿದ್ದ ತಮನ್ನಗೆ 2023 ಅತ್ಯಂತ ಖುಷಿ ಕೊಟ್ಟಿದೆಯಂತೆ.ಈಕೆಗೆ ತೆಲುಗು ಹಾಗೂ ಹಿಂದಿಯಲ್ಲಿ ಅವಕಾಶಗಳಿವೆ. ಆದರೆ ಮುಂದಿನ ಚಿತ್ರಗಳಲ್ಲಿ ಆಕೆಗೆ ಅವಕಾಶ ನೀಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಹೆಚ್ಚು ಚಿತ್ರಗಳಲ್ಲಿ ಇತ್ತೀಚಿಗೆ ಅಭಿನಯಿಸಿದರೂ ಸಹಿತ ಒಂದರ ಹಿಂದೆ ಒಂದರಂತೆ ಎದುರಾದ ಸೋಲಿನ ಕಾರಣದಿಂದ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ನಿರ್ಮಾಪಕರು. ಕೆಲವರು ನೇರವಾಗಿ ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಿಲ್ಲ ಎಂದು ಸಹ ಹೇಳಿದ್ದಾರಂತೆ. ಬಣ್ಣದ ಲೋಕದ ಅನಾಹುತಗಳಲ್ಲಿ ಇದು ಸಹ ಒಂದು.

Share this post:

Related Posts

To Subscribe to our News Letter.

Translate »