‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಶಿ, ಗಣಪತಿ ಪೊಡುವಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸೌಬಿನ್ ಶಾಹಿರ್ ಅವರು ನಿರ್ಮಾಣ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.
ಕಳೆದ ತಿಂಗಳು ಫೆಬ್ರವರಿ 22ರಂದು ರಿಲೀಸ್ ಆದ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ (Manjummel Boys) 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಸಿನಿಮಾ ಈ ಸಾಧನೆ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ 200 ಕೋಟಿ ರೂಪಾಯಿ. ಕ್ಲಬ್ ಸೇರಿದ ಮೊದಲ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ ಅನ್ನೋದು ವಿಶೇಷ. ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಜನರಿಗೆ ಇಷ್ಟ ಆಗಿದೆ.
2006ರಲ್ಲಿ ಕೇರಳದ ಮಂಜುಮ್ಮೇಲ್ ಗ್ರಾಮದ ಗೆಳೆಯರು ಕೊಡೈಕ್ಕೆನಲ್ನಲ್ಲಿರುವ ಗುಣ ಗುಹೆಗೆ ಪ್ರವಾಸ ತೆರಳುತ್ತಾರೆ. ಗ್ರೂಪ್ನಲ್ಲಿ ಇರುವ ಎಲ್ಲರೂ ಪ್ರಯಾಣದುದ್ದಕ್ಕೂ ಕೂಗಾಟ, ಚೀರಾಟ ಮಾಡುತ್ತಿರುತ್ತಾರೆ. ಈ ಗುಹೆಯಲ್ಲಿರುವ ಆಳದ ಕಂದಕದಲ್ಲಿ ಇವರ ಗುಂಪಿನ ಸುಭಾಷ್ ಎನ್ನುವ ಯುವಕ ಬೀಳುತ್ತಾನೆ. ಆತನ ಹೇಗೆ ಹೊರ ತರಲಾಗುತ್ತದೆ ಎನ್ನುವುದೇ ಸಿನಿಮಾದ ಕಥೆ. ಈ ಚಿತ್ರವನ್ನು ಸಾಕಷ್ಟು ನೈಜವಾಗಿ ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕ ಚಿದಂಬರಮ್ ಅವರು ಮಾಡಿದ್ದಾರೆ.
‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮಲಯಾಳಂ ಮಾತ್ರವಲ್ಲದೆ ತಮಿಳಿನಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ವಿಶವಾದ್ಯಂತ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳುನಾಡಿನಿಂದಲೇ ಈ ಚಿತ್ರಕ್ಕೆ 50 ಕೋಟಿ ರೂಪಾಯಿ ಹರಿದು ಬಂದಿದೆ. ಇದೇ ರೀತಿ ‘ಬ್ರಮಾಯುಗಂ’ ಹಾಗೂ ‘ಪ್ರೇಮಲು’ ಸಿನಿಮಾ ಕೂಡ ಮೆಚ್ಚುಗೆ ಪಡೆದಿದೆ.