Sandalwood Leading OnlineMedia

“ಅವತಾರ ಪುರುಷ 2” ಚಿತ್ರದಲ್ಲೊಂದು ಭರ್ಜರಿ ರಾಪ್ ಸಾಂಗ್ : ಏಪ್ರಿಲ್ 5ಕ್ಕೆ ಬಿಡುಗಡೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸಿಂಪಲ್ ಸುನಿ ನಿರ್ದೇಶನದ ಹಾಗೂ ಶರಣ್ ನಾಯಕರಾಗಿ ನಟಿಸಿರುವ “ಅವತಾರ ಪುರುಷ 2” ಚಿತ್ರದಿಂದ “ಇವನೇ ಅವತಾರ ಪುರುಷ” ಎಂಬ ಭರ್ಜರಿ ರಾಪ್ ಸಾಂಗ್ ಬಿಡುಗಡೆಯಾಗಿದೆ. ರಾಪ್ ಸಾಂಗ್ ನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಎಂ.ಸಿ.ಬಿಜ್ಜು ಈ ಹಾಡನ್ನು ಹಾಡಿದ್ದಾರೆ. ಔರಾ ಹಾಗೂ ಅಭಿನಂದನ್ ಕಶ್ಯಪ್ ಕೂಡ ಗಾಯನಕ್ಕೆ ಬಿಜ್ಜು ಅವರ ಜೊತೆಯಾಗಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಅದ್ದೂರಿಯಾಗಿ ನೆರವೇರಿತು. ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಿರ್ಮಾಪಕರು ಈ ಹಾಡನ್ನು ಮಾಡೋಣ ಎಂದಾಗ, ಮೊದಲು ಬೇಡ ಅಂದಿದ್ದೆ. ನಿರ್ಮಾಪಕರು ಪಟ್ಟು ಹಿಡಿದು ಮಾಡೋಣ ಎಂದರು. ಕೆಲವೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣವಾಯಿತು. ಶಿಶುನಾಳ ಶರೀಫರ “ತರವಲ್ಲ ತಂಗಿ ನಿನ್ನ ತಂಬೂರಿ” ಹಾಡಿನ ಮೊದಲ ಸಾಲಿನಿಂದ ಈ ಹಾಡು ಆರಂಭವಾಗುತ್ತದೆ. ರಾಪ್ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿರುವ ಎಂ.ಸಿ.ಬಿಜ್ಜು ಈ ಹಾಡನ್ನು ಬರೆದಿದ್ದಾರೆ. ಎಂ.ಸಿ.ಬಿಜ್ಜು, ಔರಾ ಹಾಗೂ ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್ ಹಾಡಿದ್ದಾರೆ. ನಟಿ ಸಾತ್ವಿಕ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಏಪ್ರಿಲ್ 5 ರಂದು ಚಿತ್ರ ತೆರೆಗೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಸಿಂಪಲ್ ಸುನಿ.

 

ಮೊದಲು ಮಾರ್ಚ್ 22 ರಂದು ನಮ್ಮ ಚಿತ್ರ ಬಿಡುಗಡೆ ಎಂದು ತಿಳಿಸಲಾಗಿತ್ತು. ಈಗ ನಮ್ಮ ಚಿತ್ರ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ. ಆ ದಿನಗಳಲ್ಲಿ ಸಾಲುಸಾಲು ರಜೆ ಇರುವುದರಿಂದ ಈ ನಿರ್ಧಾರ ಮಾಡಿದ್ದೇವೆ. ಈ ಸಮಯದಲ್ಲಿ ನನ್ನಗೊಂದು ಹಾಡು ಮಾಡೋಣ ಎನಿಸಿತು. ನಿರ್ದೇಶಕರು ಬೇಡ ಎಂದರು. ನಂತರ ಅವರನ್ನು ಒಪ್ಪಿಸಿದ್ದೆವು. ಈಗ ಹಾಡು ಸಿದ್ದಾವಾಗಿ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಾಡು ಚೆನ್ನಾಗಿ ಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

ನನ್ನ ಯಾವುದೇ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಮುನ್ನ ಕೆಲವು ದಿನಗಳ ಅಭ್ಯಾಸ ಮಾಡುತ್ತೇನೆ ಎಂದು ಮಾತನಾಡಿದ ನಟ ಶರಣ್, ಈ ಹಾಡನ್ನು ತಕ್ಷಣ ಚಿತ್ರೀಕರಣ ಮಾಡೋಣ ಎಂದಾಗ ಹೂ ಅಂದು ಬಿಟ್ಟೆ. ನಂತರ ಅಭ್ಯಾಸವಿಲ್ಲದೆ ತಕ್ಷಣ ಚಿತ್ರೀಕರಣ ಹೇಗೆ ಮಾಡುವುದು ಹೇಗೆ? ಅಂದುಕೊಂಡು, ನಿರ್ಮಾಪಕರನ್ನು ಕೇಳಿದೆ. ಅವರು ನನಗೆ ಈ ಹಾಡಿನಲ್ಲಿ ಹೆಚ್ಚು ಕುಣಿಯುವುದು ಇಲ್ಲ ಅಂದರು. ಆನಂತರ ಹಾಡುತ್ತಿರುವುದು ಬಿಜ್ಜು‌ ಹಾಗೂ ತಂಡದವರು ಎಂದು ತಿಳಿಸಿದರು. ಆಗ ನನಗೆ ಧೈರ್ಯ ಬಂತು. ಬೇಗ ಚಿತ್ರೀಕರಣವಾದರೂ ಈ ಹಾಡು ತುಂಬಾ ಚೆನ್ನಾಗಿ ಬಂದಿದೆ. ಎಂ.ಸಿ.ಬಿಜ್ಜು ಅವರು ತಮ್ಮದೇ ಆದ ರಾಪ್ ಶೈಲಿಯಲ್ಲಿ ಮಧುರವಾಗಿ ಹಾಡಿದ್ದಾರೆ. ಅವರ ಜೊತೆಗೆ ಔರಾ ಹಾಗೂ ಸಂಗೀತ ನಿರ್ದೇಶಕ ಅಭಿನಂದನ್ ಕೂಡ ಹಾಡಿಗೆ ದನಿಯಾಗಿದ್ದಾರೆ. ಏಪ್ರಿಲ್ 5. ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು.

 

 

ಹಾಡು ಬರೆದು, ಹಾಡಿರುವ ಎಂ.ಸಿ.ಬಿಜ್ಜು, ಔರಾ, ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್, ಹಾಡಿನಲ್ಲಿ ಅಭಿನಯಿಸಿರುವ ನಟಿ ಸಾತ್ವಿಕ, ನೃತ್ಯ ನಿರ್ದೇಶಕ ಹಾಗೂ ಸಹ ನಿರ್ದೇಶಕ ಮಧು ಮುಂತಾದವರು ಈ ರಾಪ್ ಹಾಡಿನ ಕುರಿತು ಮಾತನಾಡಿದರು. ವಿತರಕ ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share this post:

Related Posts

To Subscribe to our News Letter.

Translate »