Sandalwood Leading OnlineMedia

ವಿರಾಟಪುರ ವಿರಾಗಿ ರಥಯಾತ್ರೆಗೆ ರಾಜ್ಯಾದ್ಯಂತ ಅಭೂತಪೂರ್ವ ಸ್ವಾಗತ

 
ಕನ್ನಡ ನಾಡು ಕಂಡ, ಎರಡನೇ ಬಸವಣ್ಣ ಎಂದೇ ಭಕ್ತಾದಿಗಳಾ ಮನದಲ್ಲಿ ನೆಲೆಸಿರುವ ಹಾನಗಲ್ಲ ಕುಮಾರಸ್ವಾಮಿಗಳ ಜೀವನವನ್ನು ಆಧರಿಸಿದ ವಿರಾಟಪುರ ವಿರಾಗಿ ಸಿನಿಮಾದ ‘ರಥಯಾತ್ರೆ’ ರಾಜ್ಯದ ಆರು ದಿಕ್ಕುಗಳಲ್ಲಿ ಸಂಚರಿಸುತ್ತಿದೆ. ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿಯಿಂದ ರಥಯಾತ್ರೆಗೆ ಚಾಲನೆ ನೀಡಿದ್ದರೆ, ಉಳಿದ ಐದು ಕಡೆಗಳಲ್ಲಿ ವಿವಿಧ ಮಠಾಧೀಶರು ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ರಥಯಾತ್ರೆಗೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ.
 
  
 
ಹಾನಗಲ್ಲ ಶ್ರೀಗಳ ಭಕ್ತರು ಮತ್ತು ಕನ್ನಡ ಸಿನಿ ಪ್ರೇಮಿಗಳು ಊರಹಬ್ಬ ಎನ್ನುವಂತೆ ರಥಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಾನಪದ ವಾದ್ಯ, ಕುಣಿತ, ಪೂರ್ಣ ಕುಂಭ ಸ್ವಾಗತ ಹಾಗೂ ತಮ್ಮ ಭಕ್ತಿಯ ಅನುಸಾರ ಅದನ್ನು ಸಂಭ್ರಮಿಸುತ್ತಿದ್ದಾರೆ. ರಥಯಾತ್ರೆ ಹೋದ ಕಡೆಯಲ್ಲಾ ಅಪಾರ ಮೆಚ್ಚುಗೆ ಮತ್ತು ಬೆಂಬಲ ಸಿಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲಾ, ತಾಲ್ಲೂಕು ಮತ್ತು ಪ್ರಮುಖ ನಗರಗಲ್ಲಿ ಈ ರಥ ಸಂಚರಿಸಿ ಜನವರಿ 1 ರಂದು ಗದಗಿನಲ್ಲಿ ಇದು ಮುಕ್ತಾಯಗೊಳ್ಳಲಿದೆ.
 
 
ಇದೇ ಸಂದರ್ಭದಲ್ಲಿ ವಿರಾಟಪುರ ವಿರಾಗಿ ಸಿನಿಮಾದ ಮಣಿಕಾಂತ ಕದ್ರಿ ಸಂಗೀತ ಸಂಯೋಜನೆಯ, ರವೀಂದ್ರ ಸೊರಗಾಂವಿ ಅವರ ಧ್ವನಿಯಲ್ಲಿ ಮೂಡಿಬಂದ ‘ನೋಡಲಾಗದೆ ದೇವಾ’ ಹಾಡು ಕೂಡ ಬಿಡುಗಡೆ ಆಗಿದ್ದು, ಅಪಾರ ಸಂಖ್ಯೆಯ ಕೇಳುಗರು ಈ ಗೀತೆಯನ್ನು ಮೆಚ್ಚಿಕೊಂಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಮತ್ತೊಂದು ಗೀತೆ ಕೂಡ ಬಿಡುಗಡೆಯಾಗಲಿದೆ.
 
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಸುಚೇಂದ್ರಪ್ರಸಾದ್ ಸೇರಿದಂತೆ ಹಲವು ಕಲಾವಿದರು ಮತ್ತು ಮಠಾಧೀಶರು ಕೂಡ ತಾರಾಗಣದಲ್ಲಿ ಇದ್ದಾರೆ. ಸಮಾಧಾನ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಹಾನಗಲ್ಲ ಶ್ರೀಗಳ ಭವ್ಯ ಚರಿತ್ರೆಯನ್ನು ಈ ಸಿನಿಮಾ ಒಳಗೊಂಡಿದೆ.

Share this post:

Translate »