ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿದ್ದರೂ ಥಿಯೇಟರ್‌ಗಳಲ್ಲಿ ‘ಕಾಟೇರ’ ಆರ್ಭಟ ನಿಂತಿಲ್ಲ. 38ನೇ ದಿನವೂ ಕೆಲವೆಡೆ ಸಿನಿಮಾ ಹೌಸ್‌ಫುಲ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ಭಟಕ್ಕೆ ಹಳೇ ಸಿನಿಮಾ ದಾಖಲೆಗಳೆಲ್ಲಾ ಧೂಳಿಪಟವಾಗಿದೆ. ಬರೀ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ‘ಕಾಂತಾರ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ.ಡಿಸೆಂಬರ್ 29ಕ್ಕೆ ಬಿಡುಗಡೆಯಾಗಿದ್ದ ‘ಕಾಟೇರ’ ಸಿನಿಮಾ ಅದ್ಭುತ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ನಿಧಾನವಾಗಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಆರಂಭಿಸಿತು. ಕೋಟಿ ಕೋಟಿ ಕೊಳ್ಳೆ ಹೊಡೆದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈಗಾಗಲೇ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ತರುಣ್ ಸುಧೀರ್ ನಿರ್ದೇಶನ, ಕಲಾವಿದರ ಅಭಿನಯ, ಜಡೇಶ್- ತರುಣ್ ಕತೆ ಚಿತ್ರಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.70ರ ದಶಕದ ಕರ್ನಾಟಕದ ಹಳ್ಳಿಗಳ ಕಥೆಗಳನ್ನು ತೆರೆಗೆ ತಂದು ಚಿತ್ರತಂಡ ಗೆದ್ದಿದೆ. ಕುಲುಮೆಯಲ್ಲಿ ಕೆಲಸ ಮಾಡುವ ಕಾಟೇರನಾಗಿ ದರ್ಶನ್ ಅಭಿಮಾನಿಗಳ ಮನಗೆದ್ದಿದ್ದಾರೆ. ಕಮರ್ಷಿಯಲ್ ಅಂಶಗಳ ಜೊತೆಗೆ ‘ಕಾಟೇರ’ ಸಿನಿಮಾ ಒಳ್ಳೆ ಕಥೆಯನ್ನು ಹೊತ್ತುಬಂದಿದೆ. ಜನರ ಮನಸ್ಸಿಗೆ ಬಹಳ ಹತ್ತಿರವಾಗುವಂತಹ ವಿಚಾರಗಳನ್ನು ಒಳಗೊಂಡು ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಆರ್ಯನ್ ಗರಡಿಯಲ್ಲಿ `ಸತ್ಯಮಂಗಳ’ನಾದ ಕೊಡೆಮುರುಗ!
ಸದ್ಯ ‘ಕಾಟೇರ’ ಸಿನಿಮಾ ಬುಕ್‌ಮೈ ಶೋನಲ್ಲಿ ಹೊಸ ದಾಖಲೆ ಬರೆದಿದೆ. 38 ದಿನಕ್ಕೆ ಬರೀ ಬುಕ್‌ಮೈ ಶೋನಲ್ಲಿ 10 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಈ ದಾಖಲೆ ಬರೆದ ಮೊದಲ ಕನ್ನಡ ಸಿನಿಮಾ ‘ಕಾಟೇರ’ ಎನ್ನಲಾಗುತ್ತಿದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಕನ್ನಡ ಸಿನಿಮಾಗಳು ಎನ್ನುವ ಪಟ್ಟಿಯಲ್ಲಿ ‘KGF’ ಸರಣಿ ‘ಹಾಗೂ ‘ಕಾಂತಾರ’ ಮೊದಲ ಸ್ಥಾನದಲ್ಲಿವೆ. ಆದರೆ ಆ 3 ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಕಂಡಿದ್ದವು. ಆದರೆ ‘ಕಾಟೇರ’ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದೆ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.‘KGF’ ಸರಣಿ ಹಾಗೂ ‘ಕಾಂತಾರ’ ಸಿನಿಮಾ ಕರ್ನಾಟಕದಲ್ಲೂ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಿದ್ದವು. ಆದರೆ ‘ಕಾಟೇರ’ ಬರೀ ಕನ್ನಡದಲ್ಲಿ ಮಾತ್ರ ತೆರೆಕಂಡು ಪ್ರದರ್ಶನ ಕಾಣುತ್ತಿದೆ. ಕೇವಲ ಬುಕ್‌ಮೈ ಶೋನಲ್ಲೇ 10 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿ ‘ಕಾಟೇರ’ ಸಂಚಲನ ಸೃಷ್ಟಿಸಿದೆ ಎಂದು ಚರ್ಚೆ ಆಗುತ್ತಿದೆ. ಈ ಸುದ್ದಿ ಕೇಳಿ ದರ್ಶನ್ ಅಭಿಮಾನಿಗಳು ಕಾಲರ್ ಎಗರಿಸಿದ್ದಾರೆ.
ಇದನ್ನೂ ಓದಿ: ಟ್ರೇಲರ್ ನೋಡಿ ಅಂದ “ಅಬ್ಬಬ್ಬ” ಡಾಲಿ ಧನಂಜಯ!!
‘ಕಾಂತಾರ’ ಹಾಗೂ ‘KGF’-2 ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿಲ್ಲ. ಆದರೆ ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರ 1 ಕೋಟಿ ಟಿಕೆಟ್ಸ್ಮಾರಾಟ ಆಗಿದ್ದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಬರೀ ಬುಕ್‌ಮೈ ಶೋ ಸೈಟ್‌ನಲ್ಲಿ ಮಾತ್ರ ‘ಕಾಟೇರ’ 10 ಲಕ್ಷ ಟಿಕೆಟ್ ಮಾರಾಟವಾಗಿದೆ. ಇನ್ನು ಥಿಯೇಟರ್‌ಗಳಲ್ಲೇ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಕ್ಯೂನಿಂತು ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದಾರೆ. 50 ದಿನ ಪೂರೈಸುವುದಕ್ಕೂ ಮುನ್ನ ‘ಕಾಟೇರ’ ಸಿನಿಮಾ ಓಟಿಟಿಗೆ ಬರ್ತಿದೆ. ಜೀ5ನಲ್ಲಿ ಫೆಬ್ರವರಿ 9ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಅಭಿಮಾನಿಗಳು ಇನ್ನೊಂದು ವಾರ ಮುಂದೂಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಸಿನಿಮಾ ರಿಲೀಸ್ ಆಗಿ 43 ದಿನಗಳ ಬಳಿಕ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದವಾಗಿತ್ತು ಎನ್ನಲಾಗುತ್ತಿದೆ. ‘ಕಾಟೇರ’ ಚಿತ್ರವನ್ನು ತೆಲುಗು, ತಮಿಳಿಗೂ ಡಬ್ ಮಾಡಿ ರಿಲೀಸ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿದ್ದರು. ಈ ಬಗ್ಗೆ ಚಿತ್ರತಂಡ ಸಹ ಪ್ರತಿಕ್ರಿಯಿಸಿತ್ತು. ಇದೀಗ ತೆಲುಗು, ತಮಿಳು ವರ್ಷನ್ ನೇರವಾಗಿ ಓಟಿಟಿಗೆ ಬರುವ ಸುಳಿವು ಸಿಗುತ್ತಿದೆ.