Sandalwood Leading OnlineMedia

ಈವಾರ ತೆರೆಗೆ ವಿಭಿನ್ನ ಹಾರರ್‌ ಚಿತ್ರ `ಓ’

ಇದುವರೆಗೆ ಬಂದಿರುವ ಎಲ್ಲಾ ಹಾರರ್ ಸಿನಿಮಾಗಳಿಗಿಂತ ನಮ್ಮದು ಬೇರೆ ಥರದ ಚಿತ್ರ. ಆರಂಭದ 20 ನಿಮಿಷ ಪಾತ್ರಗಳ ಪರಿಚಯ ಮಾಡಿ. ಅಲ್ಲಿಂದ ಕೊನೆಯ ಸೀನ್‌ವರೆಗೆ ಹಾರರ್ ಕಥೆ ಸಾಗುತ್ತದೆ ಎಂದು  ಓ ಚಿತ್ರದ ನಿರ್ದೇಶಕ ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ಅವರು ಈಚೆಗೆ ನಡೆದ ಚಿತ್ರದ ಬಿಡುಗಡೆಪೂರ್ವ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು. ವಾಮಾಚಾರದ ಜೊತೆಗೆ ಹಾರರ್ ಕಂಟೆಂಟ್ ಒಳಗೊಂಡ ಓ ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಸಹೋದರಿಯರಾಗಿ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ಸಿದ್ದು ಮೂಲಿಮನಿ ಅಭಿನಯಿಸಿದ್ದಾರೆ. ಹಾರರ್, ಥ್ರಿಲ್ಲರ್ ಕಥೆಯಿರುವ ಈ ಚಿತ್ರಕ್ಕೆ ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ಅವರು ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್‌ಕಟ್ ಹೇಳಿದ್ದಾರೆ. ಈ ಚಿತ್ರದ ಹಾಡೊಂದಕ್ಕೆ ಪುನೀತ್‌ರಾಜ್‌ಕುಮಾರ್ ಅವರು  ದನಿ ನೀಡಿದ್ದಾರೆ. ಕಿರಣ್ ತಲಕಾಡು ಅವರು ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

 

ರಶ್ಮಿಕಾ ಅವರ ಮನಸ್ಸಿಗೆ ಕೆಲ ದಿನಗಳಿಂದ ನೋವಾಗ್ತಿದೆಯಂತೆ:ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೊಡಗಿನ ಕುವರಿ

 

 

ಒಂದು ಮನೆಯಲ್ಲಿ ಅಕ್ಕತಂಗಿಯರ ನಡೆಯುವ ಕಥಾಹಂದರ ಇದಾಗಿದ್ದು, ಚಿತ್ರದಲ್ಲಿ ವಾಮಾಚಾರ ಮಾಡುವುದು ತಪ್ಪು ಎಂದು ತೋರಿಸಿದ್ದೇವೆ. ಒಂದೊಳ್ಳೇ ಸಿನಿಮಾ ಮಾಡಬೇಕೆಂದು ನಾವೆಲ್ಲ ಟೀಮ್ ಕೂತು ಈ ಸ್ಕ್ರಿಪ್ಟ್ ರೆಡಿ ಮಾಡಿದೆವು. ಆದರೆ ಇಲ್ಲಿ ಹೊಸಬರಿಗೆ ಯಾರೂ ಬೆಂಬಲ ನೀಡುತ್ತಿಲ್ಲ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದರು,  ನಂತರ ಮಾತನಾಡಿದ ನಿರ್ಮಾಪಕ ಕಿರಣ್ ತಲಕಾಡು ಚಿತ್ರವನ್ನು ಯುಎಫ್‌ಓನಲ್ಲಿ ನೋಡಿದಾಗ ಎಫೆಕ್ಟ್ ಅದ್ಭುತವಾಗಿತ್ತು. ಚಿತ್ರ ನೋಡುವಾಗ ಎಲ್ಲರೂ ಎಂಜಾಯ್ ಮಾಡುತ್ತಾರೆ, ಈ ವರ್ಷದ ಉತ್ತಮ ಹಾರರ್ ಚಿತ್ರ ಇದಾಗಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು. 

 

 

ನಾಯಕಿ ಮಿಲನಾ ನಾಗರಾಜ್ ಮಾತನಾಡಿ ಈ ಜಾನರ್ ಸಿನಿಮಾ ನೋಡಲೆಂದೇ ಒಂದಷ್ಟು ಜನ  ಇರ‍್ತಾರೆ, ಅಂಥವರಿಗೆ ಈ ಚಿತ್ರ ತುಂಬಾನೇ ಇಷ್ಟವಾಗುತ್ತದೆ. ಅದ್ಭುತ ಅನಿಸುತ್ತೆ, ಒಂದೊಳ್ಳೇ ಉದ್ದೇಶ ಇಟ್ಟುಕೊಂಡು ಮಾಡಿದಂಥ ಚಿತ್ರ. ಹಾರರ್ ಸಿನಿಮಾದಲ್ಲಿ ಮಾಡೋದು ತುಂಬಾ ಕಷ್ಟ ಎಂದು ಹೇಳಿದರು.  ಮತ್ತೊಬ್ಬ ನಾಯಕಿ ಅಮೃತಾ ಅಯ್ಯಂಗಾರ್ ಮಾತನಾಡಿ ಎಲ್ಲಾ ಎಮೋಷನ್ಸ್ ಕ್ಯಾರಿ ಮಾಡುವಂಥ ಪಾತ್ರ ನನ್ನದು. ಬ್ಲಾಕ್‌ಮ್ಯಾಜಿಕ್, ಹಾರರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂಥ ಚಿತ್ರಗಳನ್ನು ಥೇಟರ್‌ನಲ್ಲೇ ಕೂತು ನೋಡಬೇಕು  ಎಂದು ಹೇಳಿದರು.

 

ನಿರ್ದೇಶಕ ಮಹೇಶ್ ಸಿ & ನಿರ್ಮಾಪಕ ಕಿರಣ್ ತಲಕಾಡು

 

ನಂತರ ತಾಯಿಯ ಪಾತ್ರ ಮಾಡಿರುವ ಹಿರಿಯನಟಿ ಸಂಗೀತಾ  ಮಾತನಾಡಿ ಈ ಜಾಸ್ತಿಚಿತ್ರದಲ್ಲಿ ಇಬ್ಬರು ಬ್ಯೂಟಿ ಸ್ಟಾರ್‌ಗಳಿದ್ದಾರೆ. ಶೂಟಿಂಗ್ ಮಾಡುವಾಗ ಇಷ್ಟೊಂದು ಹಾರರ್ ಇದೆ ಅಂತ ಗೊತ್ತಾಗಲೇ ಇಲ್ಲ, ಟ್ರೈಲರ್ ನೋಡಿದಾಗ ನನಗೇ ಭಯವಾಯಿತು ಎಂದರು. ದಿಲೀಪ್ ಚಕ್ರವರ್ತಿ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದ್ದು, ರಮೇಶ್ ಪಂಡಿತ್, ಸುಚೇಂದ್ರಪ್ರಸಾದ್, ಶ್ರಾವ್ಯಗಣಪತಿ. ದಶಾವರ ಚಂದ್ರು ಮಾಸ್ಟರ್ ಅಲಾಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

 

Share this post:

Related Posts

To Subscribe to our News Letter.

Translate »