ಸ್ಯಾಂಡಲ್‌ವುಡ್ ʼಚುಟು ಚುಟು ಬೆಡಗಿʼ ಆಶಿಕಾ ರಂಗನಾಥ್ ಸದ್ಯ ಟಾಲಿವುಡ್ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್ ನಟನೆಯ ʼಅಮಿಗೋಸ್ʼ ಸಿನಿಮಾದಲ್ಲಿ ಕ್ಯೂಟ್ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಫೆ.10ರಂದು ತೆರೆಗೆ ಬರಲಿದೆ.ಇತ್ತೀಚೆಗೆ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಲ್ಲಿ ನಟ ಜೂ.ಎನ್.ಟಿ.ಆರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ತಾರಕ್ ಸರ್ ನಿಮ್ಮನ್ನ ಇಲ್ಲಿ ನೋಡಿದಕ್ಕೆ ತುಂಬಾ ಖುಷಿಯಾಯ್ತು ಈ ಈವೆಂಟ್ ಭಾಗವಾಗಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು, ನಮ್ಮ ದೇಶ ಹೆಮ್ಮೆ ಪಡುವಂತ ಆರ್ ಆರ್ ಆರ್ ಸಿನಿಮಾ ಕೊಟ್ಟಿದ್ದಕೆ ನಿಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು, ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಕ್ಕೆ ಮತ್ತು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವುದಕ್ಕೆ ನಿಮಗೆ ಅಭಿನಂದನೆಗಳು, ನಾಟು ನಾಟು ಸಾಂಗ್ ನೋಡಿ ನಾನು ಕಳೆದು ಹೋದೆ ನೀವು ತುಂಬಾ ಅದ್ಬುತವಾಗಿ ಅಭಿನಯಿಸಿದ್ದೀರಿ ಇದೆ ತರ ನಮಗೆ ಇನ್ಸ್ಪೈರ್ ಮಾಡ್ತಾ ಇರಿ ಹಾಗೂ ನಮ್ಮನ್ನೆಲ್ಲ ಮನರಂಜಿಸುತ್ತ ಇರಿ ಎಂದು ಜೂ. ಎನ್ ಟಿ ಆರ್ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿದ್ದಾರೆ ನಟಿ ಆಶಿಕಾ ರಂಗನಾಥ್.