ಸ್ಟಾರ್‌ಗಿರಿಯನ್ನೂ ಮೀರಿ ನಿಂತ ಚಾರ್ಲಿಗಿರಿ!
ಇದು ಕಿರಣ್‌ರಾಜ್ ಮೋಡಿ
ಈ ಜಗತ್ತಿಗೂ ನನಗೂ ಸಂಬoಧವಿಲ್ಲ ಎಂಬoತೆ ಬದುಕುತ್ತಿದ್ದವನು ಧರ್ಮ.. ಅವನ ಬಾಳಿಗೆ `ಚಾರ್ಲಿ’ ಎಂಟ್ರಿ ಆದಾಗ ಹೇಗೆ ತನಗರಿವಿಲ್ಲದೇ ಜಗತ್ತಿಗೆ ಧರ್ಮ ಹತ್ತಿರವಾಗುತ್ತಾ ಹೋಗುತ್ತಾನೆ ಅನ್ನೋದೆ `7777 ಚಾರ್ಲಿ’ ಚಿತ್ರದ ಪ್ಲಾಟ್. ಕರಾವಳಿಯ ಪ್ರತಿಭೆ ರಕ್ಷಿತ್ ಶೆಟ್ಟಿ ಈ ಹಿಂದೆಯೂ ಈ ಹೊಸ ರೀತಿಯ ಸಿನಿಮಾಗಳನ್ನು ಮಾಡುತ್ತಲೇ ಗಮನಸೆಳೆದ ಈ ನೆಲದ ಅಸಲಿ ಪ್ರತಿಭೆ. ಈ ಪ್ರತಿಭೆಯ ಜೊತೆ ಇನ್ನೊಬ್ಬರು ಅಸಾಮಾನ್ಯ ಪ್ರತಿಭೆ, ಕಿರಣ್‌ರಾಜ್ ಜೊತೆಯಾದರೆ ಏನಾಗಬಹುದು ಅನ್ನೋದಕ್ಕೆ ಉತ್ತರವೇ `777 ಚಾರ್ಲಿ’! ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆದಾಗಿನಿಂದಲೂ `777 ಚಾರ್ಲಿ’ ಒಂದು ವಿಶೇಷ ಚಿತ್ರವಾಗಲಿದೆ ಎಂದು ನಿರೀಕ್ಷೆ ಹುಟ್ಟಿಸಿದ್ದು ಸುಳ್ಳಲ್ಲ. ಈಗ ಧರ್ಮ ಮತ್ತು ಚಾರ್ಲಿ ಒಡನಾಟದ ಕುರಿತ `777 ಚಾರ್ಲಿ’ ತೆರೆಕಂಡು ಪ್ರೇಕ್ಷಕನ ನಿರೀಕ್ಷೆಯನ್ನು ಸತ್ಯವಾಗಿಸಿದೆ.
ಹಾಗಿದ್ದರೆ ವಿಶೇಷ ಜಾನರ್‌ನ `777 ಚಾರ್ಲಿ’ನಲ್ಲಿ ಅಸಲಿಗೆ ಇರುವುದಾದರೂ ಏನು?.. ಧರ್ಮ (ರಕ್ಷಿತ್ ಶೆಟ್ಟಿ) `ಅನಾಥ ಮಗುವಾದೇ..’ ಅನ್ನುತ್ತಲೆ ಇಡ್ಲೀ.. ಬಿಯರ್‌ಗೆ ಫಿಕ್ಸ್ ಆಗಿರುವವನು. ಅವನು ಅನಾಥನಾಗುವುದಕ್ಕೂ ಒಂದು ನಿರ್ದಿಷ್ಟ ರಿಸನ್ ಇದೆ. ಇದನ್ನು ಇಲ್ಲಿ ಹೇಳುವುದು ಬೇಡ. ಅಶಿಸ್ತಿನ ರಾಯಭಾರಿಯಂತಿರುವ ಈ ಧರ್ಮನಿಗೆ ಯಂತ್ರಗಳ ಜೊತೆಗೆ ಕೆಲಸ ಮಾಡಿ.. ಮಾಡಿ.. ತಾನು ಯಂತ್ರದAತಾಗಿ, ಸಾಕಷ್ಟು ವರ್ಷಗಳಾದ್ರೂ ಅವನ ಮನೆ ಕ್ಯಾಲೆಂಡರ್ ಬದಲಾಗಿರುವುದಿಲ್ಲ!
ಒಂದು ಹಂತದಲ್ಲಿ `ಹಿಟ್ಲರ್’ ಎಂಬ ಬಿರುದನ್ನು ಪಡೆದುಕೊಳ್ಳುವ ಧರ್ಮನಿಗೆ, ಇಡೀ ಎರಿಯಾದಲ್ಲಿ ಯಾರನ್ನು ಕಂಡರೂ ಅಷ್ಟಕಷ್ಟೆ. ಇಂತಹ ಧರ್ಮನ ಬಾಳಿಗೆ ಅಚಾನಕ್ಕಾಗಿ `ಚಾರ್ಲಿ’ ಎಂಟ್ರಿ ಕೊಡ್ತಾಳೆ.. ಅಸಲಿಗೆ ಚಿತ್ರ ಸೂಪರ್‌ಫಾಸ್ಟ್ ಆಗಿ ಓಡುವುದು ಇಲ್ಲಿಂದಲೇ. ತನ್ನಷ್ಟಕ್ಕೇ ತಾನೇ ತನ್ನೊಳಗಿನ ಶಾಂತಿಯನ್ನುಕಂಡುಕೊಳ್ಳುವ ಹಂಬಲದಲ್ಲಿದ್ದ ಧರ್ಮನ ಬದುಕನ್ನ ಚಾರ್ಲಿ `ಸರ್ವ ಜನಾಂಗದ ಅಶಾಂತಿಯ ತೋಟ’ವಾಗಿ ಮಾರ್ಪಡಿಸುತ್ತಾಳೆ! ಅಲ್ಲಿಂದ ಸಾಕಷ್ಟು ಅಸಾಮಾನ್ಯ ಸರ್ಕಸ್‌ಗಳ ನಂತರ, ಧರ್ಮ ಮತ್ತು ಚಾರ್ಲಿಯ ಬದುಕು ಬಹುದೊಟ್ಟ ಟರ್ನಿಂಗ್ ಪಾಯಿಂಟ್‌ಗೆ ಬಂದು ನಿಲ್ಲುತ್ತದೆ, ಆ ಟರ್ನಿಂಗ್ ಪಾಯಿಂಟ್ ಏನು? ಈ ಒಂದು ಬಹುದೊಡ್ಡ ತಿರುವು ಅವರಿಬ್ಬರನ್ನು ಕಾಶ್ಮೀರದ ಕೊರೆವ ಚಳಿಯ ಕಣಿವೆಯವರೆಗೆ ಕರೆತರುವುದ್ಯಾಕೆ? ಕಾಶ್ಮೀರವನ್ನು ತಲುಪುವ ಹಾದಿಯಲ್ಲಿ ಧರ್ಮ ಮತ್ತು ಚಾರ್ಲಿಗೆ ಎದುರಾಗುವ ಸವಾಲುಗಳೇನು?.. ಈ ಪ್ರಶ್ನೆಗಳಿಗೆ `777 ಚಾರ್ಲಿ’ ಎಂಬ ದೃಶ್ಯ ಕಾವ್ಯವನ್ನು ತೆರೆಯಮೇಲೆ ನೋಡಿಯೇ ಉತ್ತರಕಂಡುಕೊಳ್ಳುವುದು ಉತ್ತಮ.
ನಿರ್ದೇಶಕ ಕಿರನ್‌ರಾಜ್ ತಮ್ಮ ಮೊದಲ ಪ್ರಯತ್ನದಲ್ಲೇ ಒಂದು ಚಾಲೆಂಜಿAಗ್ ಸಬ್ಜೆಕ್ಟ್ ಆರಿಸಿಕೊಂಡರೂ, ಸಿನಿಮಾದ ಎಲ್ಲಾ ವಿಭಾಗಳನ್ನೂ ಸಮರ್ಥವಾಗಿ ಸಿರ್ವಹಿಸಿವಲ್ಲಿ ಸಮರ್ಥರಾಗಿದ್ದಾರೆ. ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಚಾರ್ಲಿಯನ್ನೇ ಸ್ಟಾರ್ ಆಗಿಟ್ಟುಕೊಂಡು, ಚಾರ್ಲಿಗೆ ಜೋಡಿಯಾಗಿ ಇನ್ನೊಬ್ಬ ಸಿಂಪಲ್‌ಸ್ಟಾರ್ ಅನ್ನು ಸೇರಿಸಿ ಕಥೆ ಮಾಡಿರೋದೆ ಕಿರಣ್ ಅವರದ್ದು ದೊಡ್ಡ ಸಾಹಸ. ಒಬ್ಬ ಸಮರ್ಥ ನಟ ಒಂದು ಸೀನ್‌ನ perfectionಗಾಗಿ ಸಾಕಷ್ಟು ಟೇಕ್‌ಗಳನ್ನು ತೆಗೆದುಕೊಳ್ಳಬೇಕಾದರೆ, ಚಾರ್ಲಿಯ ನಟನೆಯನ್ನು ಸಮರ್ಥವಾಗಿ ತೆರೆಯ ಮೇಲೆ ಕಟ್ಟಿಕೊಡುವುದರ ಹಿಂದಿರುವ ಇಡೀ ತಂಡದ ತಾಳ್ಮೆ ಮತ್ತು ಅಮೋಘವಾದ ಸಿನಿಮಾ ಪ್ರೀತಿಗೆ Hatsoff. ಕಿರಣ್‌ರಾಜ್ ಬರೆದಿರುವ ಕಥೆ ಸರಳ ಅನ್ನಿಸಿದರೂ, ವಿರಳ ಅನ್ನವುದು ಇಲ್ಲಿ ಬಹುಮುಖ್ಯ. ಒಂದು ಅಪರೂಪದ ಕಥಗೆ ಸಮರ್ಥವಾದ ಚಿತ್ರಕಥೆ ಬರೆದು, ಮನಸ್ಸಿಗೆ ತಾಕುವ ಸಂಭಾಷಣೆಯ ಮೂಲಕ `ಚಾರ್ಲಿ’ಯನ್ನು ಪ್ರೇಕ್ಷಕನಿಗೆ ಹತ್ತಿರವಾಗಿಸಿದ್ದಾರೆ ಕಿರಣ್. ಟೆಕ್ನಿಕಲೀ ಯಾವುದೇ ಕಾಂಪ್ರಮೈಸ್ ಇಲ್ಲದೇ `ಚಾರ್ಲಿ’ಯನ್ನು ಕಟ್ಟಿಕೊಟ್ಟಿರುವ ರೀತಿ ಅತ್ಯದ್ಭುತ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ನೋಬಿನ್ ಪೌಲ್ ಹಿನ್ನೆಲೆ ಸಂಗೀತ ನಿರ್ದೇಶಕ ಕಿರಣ್‌ರಾಜ್ ಹೆಣೆದ ಕಥೆಗೆ ಸಿಕ್ಕ ಬಹುದೊಡ್ಡ ಶಕ್ತಿ.
ಚಿತ್ರದ ಓಘದ ಬಗ್ಗೆ ಹೇಳುವಾದರೆ, ಪಸ್ಟ್ಆಫ್ ಸೂಪರ್‌ಫಾಸ್ಟ್.. ಆದರೆ ಸೆಕಂಡ್ ಆಫ್ ಕೊಂಚ ಸ್ಲೋ ಅನ್ನಿಸಬಹುದೇನೋ.. ಆದರೆ, ಕಿರಣ್‌ರಾಜ್ ಹೇಳಲು ಹೊರಟಿರುವ ಕಥೆಗೆ ಸೆಕಂಡ್ ಆಫ್‌ನಲ್ಲಿ ಸ್ವಲ್ಪ ಡಿಟೈಲ್ ಹೇಳುವ ಅಗತ್ಯವಿತ್ತು. ಇನ್ನು, ಸಿನಿಮಾ ನೋಡಿ ಹೊರಬಂದು ಸಾಕಷ್ಟು ಸಮಯದ ನಂತರ `ಸಿನಿಮಾದ ಡ್ಯೂರೇಶನ್ ಕೊಂಚ ಜಾಸ್ತಿ ಆಯ್ತೇನೋ’ ಅಂತ ಅನ್ನಿಸಿಬಹುದು.. ಆದರೆ ಸಿನಿಮಾ ನೋಡುವಾಗ ಒಂದು ಕ್ಷಣವೂ ಬೋರ್ ಅನ್ನಿಸಿವುದಿಲ್ಲ.
ನಟನೆಯ ವಿಚಾರಕ್ಕೆ ಬರುವುದಾದರೆ.. ಶೆಟ್ರು ಈ ಬಾರಿ ತಾನೊಬ್ಬ ಸ್ಟಾರ್ ಅನ್ನುವುದನ್ನು ಮರೆತು, ಚಾರ್ಲಿಗಿರಿಗೆ ತಲೆಬಾಗಿ ನಟಿಸಿದ್ದಾರೆ. ಧರ್ಮನ ಮೂಲಕ ಅಭಿನಯದ Secretಗಳನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದಾರೆ. ಇಮೋಷನ್ಸೇ ಇಲ್ಲದ ಮತ್ತು ಹೃದಯ ತುಂಬಾ ಇಮೋಷನ್ಸ್ ತುಂಬಿರುವ.. ಎರಡೂ ಶೇಡ್‌ನ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ನಾಯಕಿ ಸಂಗೀತಾ ಶೃಂಗೇರಿಯ ಪಾತ್ರ ಚಿಕ್ಕದಾದರೂ, ಚೊಕ್ಕವಾಗಿ ಅಭಿನಯಿಸಿದ್ದಾರೆ. ವೆಟರ್‌ನರೀ ಡಾಕ್ಟರ್ ಆಗಿ ರಾಜ್.ಬಿ.ಶೆಟ್ಟಿ ಸಾಕಷ್ಟು ನಗಿಸುತ್ತಾರೆ. ಬೇಬಿ ಶಾರ್ವರಿಯನ್ನು ಸಮರ್ಥ ಬಾಲನಟಿಯಾಗಿಸುವಲ್ಲಿ ಕಿರಣ್ ಗೆದ್ದಿದ್ದಾರೆ. ಇನ್ನು, ತಮಿಳಿನ ಬಾಬಿ ಸಿಂಹ, ದಾನೀಶ್ ಶೇಠ್, ಗೋಪಾಲ ಕೃಷ್ಣ ದೇಶಪಾಂಡೆ, ಭಾರ್ಗವಿ ನಾರಾಯಣ್, ಎಚ್.ಜಿ.ಸೋಮಶೇಖರ್ ..ಹೀಗೆ ಇಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಕೊನೆಯದಾಗಿ, ಸಿನಿಮಾದ ಅಸಲಿ ಸ್ಟಾರ್ ಚಾರ್ಲಿಯ ಬಗ್ಗೆ ಇನ್ನಷ್ಟು ಹೇಳದೆ ಇದ್ದರೆ ಈ ವಿಮರ್ಶೆ ಇನ್‌ಕಂಪ್ಲೀಟ್ ಆಗುತ್ತದೆ. ಸಿನಿಮಾವನ್ನು ಕಮರ್ಶಿಯಲ್ ಆಗಿ ಗೆಲ್ಲಿಸಿರುವ ಚಾರ್ಲಿ, ಇಡೀ ತಂಡದೊAದಿಗೆ ತಾನು ಬರೆತು-ಕಲಿತು ತರೆಯಮೇಲೆ ಮೋಡಿ ಮಾಡಿದ್ದು ಒಂದು ಅಸಮಾನ್ಯ ಸಂಗತಿ. ಈ ಅಸಮಾನ್ಯ ಸಂಗತಿಯ ಹಿಂದಿರುವ ಚಾರ್ಲಿ ಟ್ರೆöÊನರ್‌ಗಳ ಅವಿರತ ಪರಿಶ್ರಮಕ್ಕೆ ಏನೆನ್ನಬೇಕೋ.. ಪದವಿಲ್ಲ. ಒಟ್ಟಿನಲ್ಲಿ `ಚಾರ್ಲಿ’ ಮೂಲಕ ಚಂದನವನದಲ್ಲಿ ಒಂದು ಹೊಸ `ಕಿರಣ’ ಉದಯಿಸಿ, ತಮ್ಮ ಮುಂದಿನ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ.
by B.NAVEENKRISHNA