Left Ad
60 ಕೋಟಿ ವಂಚನೆ ಪ್ರಕರಣ: ಬಿಪಾಶಾ–ನೇಹಾ ಹೆಸರು ಎಳೆದ ರಾಜ್ ಕುಂದ್ರಾ - Chittara news
# Tags

60 ಕೋಟಿ ವಂಚನೆ ಪ್ರಕರಣ: ಬಿಪಾಶಾ–ನೇಹಾ ಹೆಸರು ಎಳೆದ ರಾಜ್ ಕುಂದ್ರಾ

ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ 60 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ನಡೆದಿದೆ. ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ನಡೆಸಿದ ವಿಚಾರಣೆಯಲ್ಲಿ ರಾಜ್ ಕುಂದ್ರಾ ನಟಿಯರಾದ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ವಿಚಾರಣೆ ವೇಳೆ ಕುಂದ್ರಾ, 60 ಕೋಟಿ ರೂ.ಗಳಲ್ಲಿ ಕೆಲವು ಮೊತ್ತವನ್ನು ಬಿಪಾಶಾ ಮತ್ತು ನೇಹಾಗೆ ಶುಲ್ಕವಾಗಿ ನೀಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ತನಿಖೆಯಿಂದ ಕಂಪನಿಯ ಖಾತೆಯಿಂದ ನೇರವಾಗಿ ಇವರ ಖಾತೆಗಳಿಗೆ ಹಣ ವರ್ಗಾವಣೆ ನಡೆದಿರುವುದು ಬಹಿರಂಗವಾಗಿದೆ. ಶಿಲ್ಪಾ ಶೆಟ್ಟಿ ಸೇರಿದಂತೆ ನಾಲ್ವರು ನಟಿಯರ ಖಾತೆಗಳಿಗೆ ಒಟ್ಟಾರೆ ಸುಮಾರು 25 ಕೋಟಿ ರೂ. ನೇರ ವರ್ಗಾವಣೆ ನಡೆದಿರುವುದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

ನೋಟು ಅಮಾನ್ಯೀಕರಣದ ಅವಧಿಯಲ್ಲಿ ಕಂಪನಿಯ ಹಣಕಾಸು ವಹಿವಾಟುಗಳಲ್ಲಿ ನಗದು ಕೊರತೆ ಉಂಟಾಗಿದ್ದ ಕಾರಣ, ಕೆಲವು ಮೊತ್ತವನ್ನು ಅನುಮಾನಾಸ್ಪದ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬುದೂ ತನಿಖೆಯಿಂದ ಬೆಳಕಿಗೆ ಬಂದಿದೆ. ಇದರ ಸಾಕ್ಷ್ಯಗಳನ್ನೂ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ ಕುಂದ್ರಾವನ್ನು ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಈ ವಂಚನೆ ಪ್ರಕರಣವನ್ನು ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ನಿರ್ದೇಶಕ ದೀಪಕ್ ಕೊಠಾರಿ ದೂರು ದಾಖಲಿಸಿದ್ದರು. 2015ರಿಂದ 2023ರ ಅವಧಿಯಲ್ಲಿ 60 ಕೋಟಿ ರೂ.ಗೂ ಹೆಚ್ಚು ವಂಚನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವ್ಯವಹಾರ ವಿಸ್ತರಣೆ ಹೆಸರಿನಲ್ಲಿ ಹಣ ಪಡೆದು, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ ಎಂಬುದು ದೂರುದಾರರ ಆರೋಪ.

Spread the love
Translate »
Right Ad