Left Ad
ಯುಗಾದಿ ಹಬ್ಬದಂದು(ಮಾರ್ಚ್ 30) ಅನಾವರಣವಾಗಲಿದೆ ಬಹು ನಿರೀಕ್ಷಿತ ಮಲ್ಟಿಸ್ಟಾರರ್ "45" ಚಿತ್ರದ ಟೀಸರ್. . - Chittara news
# Tags

ಯುಗಾದಿ ಹಬ್ಬದಂದು(ಮಾರ್ಚ್ 30) ಅನಾವರಣವಾಗಲಿದೆ ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ ಟೀಸರ್. .

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ “ಸೂರಜ್ ಪ್ರೊಡಕ್ಷನ್ ” ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚಿಗೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯನ್ನು ಸಹ ವಿಭಿನ್ನವಾಗಿ ಮಾಡಲಾಗಿತ್ತು. ಆಗಸ್ಟ್ 15 ರಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮಾರ್ಚ್ 30, ವಸಂತ ಋತುವಿನ ಮೊದಲ ದಿನ, ಯುಗಾದಿ ಹಬ್ಬದ ಶುಭದಿನದ ಸಂಜೆ 6.45ಕ್ಕೆ “45” ಚಿತ್ರದ ಟೀಸರ್ ಅನಾವರಣವಾಗಲಿದೆ.

ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರ ಅಭಿನಯ, ಸಂಗೀತ ನಿರ್ದೇಶನದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅರ್ಜುನ್ ಜನ್ಯರ ಮೊದಲ ನಿರ್ದೇಶನ ಹಾಗೂ ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ರಮೇಶ್ ರೆಡ್ಡಿ ಅವರ ನಿರ್ಮಾಣ‌ವಿರುವ ಈ ಚಿತ್ರದಲ್ಲಿ ಇಲ್ಲಿನ ನುರಿತ ತಂತ್ರಜ್ಞರ ಜತೆಗೆ ಹಾಲಿವುಡ್ ನ ಪ್ರಸಿದ್ದ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ವಿಶೇಷಗಳನ್ನೊಳಗೊಂಡಿರುವ “45” ಚಿತ್ರದ ಟೀಸರ್ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

 

 

 

Spread the love
Translate »
Right Ad