ಅಚಾನಕ್ ದಟ್ಟ ಅರಣ್ಯದಲ್ಲಿ ಬಂಧಿಯಾದಾಗ, ಆಗುವ ತಲ್ಲಣಗಳನ್ನು ಕಟ್ಟಿಕೊಡುತ್ತಲೇ, ಹುಟ್ಟು-ಸಾವಿನ ರಹಸ್ಯವನ್ನು ಭೇದಿಸುವ ವಿಭಿನ್ನ ಕಥೆ ಹೊತ್ತ ಚಿತ್ರವೇ `3ದೇವಿ’. ಮಲಯಾಳಂನಲ್ಲಿ ಸಾಕಷ್ಟು ಹೆಸರು ಮಾಡಿರುವ ಅಶ್ವಿನ್ ಮ್ಯಾಥ್ಯು ಈ ಚಿತ್ರದ ನಿರ್ದೇಶಕರು. ಮೂವರು ಮಹಿಳೆ ಹೊಡೆದಾಟದ ದೃಶ್ಯಗಳಲ್ಲಿ ಪಾಲ್ಗೊಂಡು ತಮ್ಮ ರಕ್ಷಣೆ ಮಾಡಿಕೊಳ್ಳುವುದು ಚಿತ್ರದ ಮುಖ್ಯಾಂಶಗಳಲ್ಲಿ ಒಂದು. ಶುಭಾ ಪೂಂಜ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಸಂಧ್ಯಾ ಲಕ್ಷ್ಮೀನಾರಾಯಣ ಹಾಗೂ ಜ್ಯೋತ್ನಾ ಬಿ.ರಾವ್ ಉಳಿದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶುಭಾ ಪೂಂಜಾಗೆ ಅತ್ಯಂತ ವಿರಳವಾಗಿ ಸಾಹಸ ಮೆರೆಯುವ ಪಾತ್ರ ಸಿಕ್ಕಿದೆಯಂತೆ.. ಬಬ್ಲಿಯಂತಹ ಪಾತ್ರಗಳನ್ನು ಹೆಚ್ಚು ಮಾಡಿರುವೆ. ಆದರೆ ಇದು ವಿಭಿನ್ನ ಪಾತ್ರ. ಕಾಡಿನಲ್ಲಿ ಸಾಹಸ ಮೆರೆಯುವುದು ಸಾಮಾನ್ಯ ವಿಷಯವೇ ಅಲ್ಲ. ಅದೊಂದು ಥ್ರಿಲ್ಲಿಂಗ್ ಕ್ಷಣ. ಈ ರೀತಿಯ ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕರಿಗೆ ಕೃತಜ್ಞತೆ ಅರ್ಪಿಸುವೆ ಎಂದರು ಶುಭಾ ಪೂಂಜಾ.
Pentagon’ Kannada Movie Review : ಪಂಚ ಕಥೆಗಳ ಪವರ್‌ಫುಲ್ ಪಂಚ್!`
ನಾನು ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದರೂ ಸಿನಿಮಾಸಕ್ತಿ ಇರಲಿಲ್ಲ. ನಿರ್ದೇಶಕರು ನನ್ನನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಹಾಗಾಗಿ ಈ ಪಾತ್ರ ಮಾಡುವುದು ಸಾಧ್ಯವಾಯಿತು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದು ಸಂಧ್ಯಾ ಲಕ್ಷ್ಮಿ ನಾರಾಯಣ. ಇವರಿಬ್ಬರ ಜೊತೆ ಪಾತ್ರ ನಿರ್ವಹಿಸಿರುವ ಜ್ಯೋತ್ಸ್ನಾ ಬಿ. ರಾವ್ ಮೂಲತಃ ರಂಗ ಕಲಾವಿದೆ. ಇದು ನನ್ನ ಮೊದಲ ಸಿನಿಮಾ. ಇದರಲ್ಲಿ ನನ್ನದು ಸಲಿಂಗ ಪಾತ್ರ. ಕಲರಿ ಫೈಟ್ ಕಲಿತು ಆಕ್ಷನ್ ಮಾಡಿದ್ದೇನೆ, ಚಿತ್ರದ ಕ್ಲೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯ್ತು ಎಂದರು.
ವಿ.ಮನೋಹರ್ `ದರ್ಬಾರ್’ನಲ್ಲಿ ಉಪ್ಪಿ ಹವಾ!
ಒಂದು ವಿಶೇಷವಾದ ಹಾಡಿಗೆ ಕಾರ್ತಿಕ್ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಚಿತ್ರಕ್ಕೆ ಫಿಡಲ್ ಅಶೋಕ ಹಾಗೂ ಡಾಸ್ಮೋಡ್ ಐ. ಲುಲಿಬಿ ಅವರು ಸಂಗೀತ ಸಂಯೋಜಿಸಿದ್ದಾರೆ ಎಂಬ ಮಾಹಿತಿಗಳು ಬಂದವು. ಚಿತ್ರದ ಹೆಚ್ಚಿನ ಭಾಗದ ಶೂಟಿಂಗ್ ಕಾಡಿನಲ್ಲೇ ನಡೆದಿದ್ದು, ಕಾಡಿನಲ್ಲಿ ಕಳೆದು ಹೋದ ಮೂರು ವ್ಯಕ್ತಿಗಳ ವ್ಯಕ್ತಿತ್ವಗಳನ್ನು ಪ್ರತಿಬಿಂಬಿಸುವ ಸಿನಿಮಾ ಇದಾಗಿದೆ.ಚಿತ್ರದ ಇತರ ತಾರಾಗಣದಲ್ಲಿ ಅಶ್ವಿನ್ ಎ. ಮ್ಯಾಥ್ಯೂ, ಜಯದೇವ ಮೋಹನ್, ನಾಟಕ ಅಮಾನ್, ಅಶ್ವಿನ್ ಕಾಕುಮಾನು, ನಿಖಿಲ್ ಭಾರದ್ವಾಜ್, ಫ್ರೇಯಾ ಕೊಠಾರಿ ಹಾಗೂ ಇತರರಿದ್ದಾರೆ.ಆಲ್ಟರ್ಡ್ ಇಗೋ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಕುಂಜುನ್ನಿ ಎಸ್.ಕುಮಾರ್ ಅವರ ಛಾಯಾಗ್ರಹಣವಿದೆ.