ಹೃತಿಕ್ ರೋಷನ್-ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಫೈಟರ್ ಸಿನಿಮಾ ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲಿಟ್ಟಿದೆ.ಬಿಡುಗಡೆಯಾದ ಮೊದಲ ದಿನವೇ ಫೈಟರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿತ್ತು. ಬುಕ್ ಮೈ ಶೋನಲ್ಲೂ ಉತ್ತಮ ರೇಟಿಂಗ್ ಪಡೆದುಕೊಂಡಿತ್ತು. ಇದೀಗ ಗಣರಾಜ್ಯೋತ್ಸವ ನಿಮಿತ್ತ ಲಾಂಗ್ ವೀಕೆಂಡ್ ಕೂಡಾ ಸಿಕ್ಕಿರುವುದರಿಂದ ಫೈಟರ್ ಸಿನಿಮಾ ಗಳಿಕೆಯೂ ಭಾರೀ ಜೋರಾಗಿದೆ.
ಇದನ್ನೂ ಓದಿ ಎಂಪಿ ಫಿಲಂಸ್ ಕೆ.ಮುನೀಂದ್ರ ನೂತನ ಪ್ರೊಡಕ್ಷನ್ ಹೌಸ್
ಮೊದಲ ದಿನ ಚಿತ್ರ 22.50 ಕೋಟಿ ರೂ. ಗಳಿಕೆ ಮಾಡಿತ್ತು. ಇತ್ತೀಚೆಗಿನ ದಿನಗಳಲ್ಲಿ ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಇದು ಕೊಂಚ ಕಡಿಮೆ ಎನಿಸಿದರೂ ಎರಡನೇ ದಿನ ಭರ್ಜರಿ ಗಳಿಕೆ ಮಾಡಿ ಆ ನಿರಾಸೆ ಮರೆಸಿದೆ. ಎರಡನೇ ದಿನ ಗಣರಾಜ್ಯೋತ್ಸವದಂದು ಚಿತ್ರ ಬರೋಬ್ಬರಿ 39 ಕೋಟಿ ರೂ. ಬಾಚಿಕೊಂಡಿದೆ.ಫೈಟರ್ ಸಿನಿಮಾದಲ್ಲಿ ದೀಪಿಕಾ ಮತ್ತು ಹೃತಿಕ್ ಇಬ್ಬರೂ ವಾಯುಪಡೆ ಪೈಲಟ್ ಗಳಾಗಿ ಕಾಣಿಸಿಕೊಂಡಿದ್ದಾರೆ. ದೇಶ ಪ್ರೇಮ ಕುರಿತ ಕತೆ ಹೊಂದಿರುವ ಸಿನಿಮಾದಲ್ಲಿ ಪಡ್ಡೆ ಹೈಕಗಳಿಗೆ ಇಷ್ಟವಾಗುವಂತೆ ಸಾಕಷ್ಟು ಬೋಲ್ಡ್ ಸೀನ್ ಗಳೂ ಇವೆ. ಇದೀಗ ಚಿತ್ರದ ಒಟ್ಟು ಗಳಿಕೆ 61.50 ಕೋಟಿ ರೂ. ತಲುಪಿದ್ದು, ಇಂದೂ ಇದೇ ರೀತಿ ಕಮಾಯಿ ಮಾಡಿದರೆ 100 ಕೋಟಿ ರೂ. ಕ್ಲಬ್ ಸೇರ್ಪಡೆಯಾಗಲಿದೆ.