Sandalwood Leading OnlineMedia

ಸುದೀಪ್ ಜೀವನದಲ್ಲಿ ಒಂದು ದೊಡ್ಡ ದಿನ

ಕಿಚ್ಚನ ‘ಹುಚ್ಚ’ ಸಿನಿಮಾಗೆ ಭರ್ತಿ 21 ವರ್ಷ. ಇದಲ್ಲದೆ ಕಿಚ್ಚನ ನಟನಾ ಕೌಶಲ್ಯವನ್ನು ಇಡೀ ಪ್ರಪಂಚಕ್ಕೆ ಪರಿಯಿಸಿ, ಸಿಕ್ಕಾಪಟ್ಟೆ ಸದ್ದು ಮಾಡಿದ್ದ ‘ಈಗ’ ಚಿತ್ರಕ್ಕೆ ಇಂದಿಗೆ 10 ವರ್ಷ ಕಂಪ್ಲೀಟ್ ಆಗಿದೆ. ಈ ಖುಷಿಯನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/Cfp_VFFPXZ9/

‘A beautiful day in my life. A big thanks to each one from the team of #huccha and #Eega for giving me those unforgettable moments’ ಅಂತಾ ಕಿಚ್ಚ ಬರೆದುಕೊಂಡಿದ್ದಾರೆ. ಇದರ ಜೊತೆಗೆ ‘one made me, one elevated me’ ಅಂತಾ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಕಿಚ್ಚನ ಸಹಸ್ರಾರು ಅಭಿಮಾನಿಗಳಿಗೆ ದಿಲ್ ಖುಷ್ ಆಗಿದೆ. 

ಕಿಚ್ಚ ಒಂದು ಸಿನಿಮಾದಲ್ಲಿ ನಟನೆ ಮಾಡ್ತಾ ಇದ್ದಾರೆ ಅಂದ್ರೆ ಸಾಕು ಆ ಸಿನಿಮಾ ರಿಲೀಸ್ ಆಗಿ ನೋಡೋ ತನಕವೂ ನಿದ್ದೆ ಬಿಟ್ಟು ಕಾದು ನೋಡೋ ಫ್ಯಾನ್ಸ್ ಫಾಲೋವಿಂಗ್ ಕಿಚ್ಚನಿಗಿದೆ.. ಈಗ ವಿಶ್ವದಲ್ಲಿ ಚಾಲ್ತಿಯಲ್ಲಿರೋ ಒಂದೇ ಒಂದು ಹೆಸ್ರು ಅಂದ್ರೆ ಅದು ‘ವಿಕ್ರಾಂತ್ ರೋಣ’. ಜೂಲೈ 28ಕ್ಕೆ ತೆರೆಗೆ ಅಪ್ಪಳಿಸೋಕೆ ಈ ಫ್ಯಾಂಟಸಿ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ದಿನಕ್ಕೊಂದು ರೀತಿಯ ಮ್ಯಾಟರ್ ರಿವಿಲ್ ಆಗೋ ಮೂಲಕ ನೀರಿಕ್ಷೆಯಂತೂ ಅಗಸದೆತ್ತರಕ್ಕೆ ಏರಿದೆ ಅಂದ್ರೆ ತಪ್ಪಾಗಲ್ಲ. ‘ವಿಕ್ರಾಂತ್ ರೋಣ’ ಸಿನಿಮಾದ ‘ರಾರಾ ರಕ್ಕಮ್ಮ’ ಹಾಡು ಕೊಟ್ಟಿರೋ ಕಿಕ್ಕು ಮಾತ್ರ ಯಾವತ್ತಿಗೂ ಕಡಿಮೆಯಾಗಲ್ಲ.

 

Share this post:

Related Posts

To Subscribe to our News Letter.

Translate »