# Tags

ಡಾ.ರಾಜ್‌ಕುಮಾರ್ ಅಭಿನಯದ `ಲವ-ಕುಶ’ ಸಿನಿಮಾ ಅರ್ಧಕ್ಕೇ ನಿಲ್ಲಲು ಕಾರಣ ಏನು ಗೊತ್ತಾ?

“ಒಂದು ಸಿನಿಮಾ ಉತ್ತಮವಾಗಿ ಮೂಡಿ ಬರಲು ಎಲ್ಲಾ ಕೂಡಿಬರಬೇಕು. ಸಿನಿಮಾ ತಾನಾಗಿಯೇ ತನಗೆ ಏನು ಬೇಕೋ ಅದನ್ನು ಧಕ್ಕಿಸಿಕೊಳ್ಳುತ್ತದೆ. ಯಾವುದೇ ಪಾತ್ರ ಮಾಡಲು ಯೋಗ ಇರಬೇಕು” ಇದು ಡಾ. ರಾಜ್‌ಕುಮಾರ್ ಪದೇ ಪದೆ ಹೇಳುತ್ತಿದ್ದ ಮಾತು. ‘ಭಕ್ತ ಅಂಬರೀಶ’ ಚಿತ್ರ ನಿಂತಾಗಲೂ ಆಪ್ತರ ಬಳಿ ಇದೇ ರೀತಿ ಹೇಳಿಕೊಂಡಿದ್ದರು. ಅಂದಹಾಗೆ ಡಾ. ರಾಜ್‌ಕುಮಾರ್ ನಟಿಸಬೇಕಿದ್ದ ಸಾಕಷ್ಟು ಸಿನಿಮಾಗಳು ನಿಂತು ಹೋಗಿವೆ. ಚಿತ್ರರಂಗದಲ್ಲಿ ಒಂದು ಸಿನಿಮಾ ಪ್ರಾರಂಭ ಆಗುವುದು. ಚಿತ್ರೀಕರಣಗೊಂಡು ಬಿಡುಗಡೆ ಆಗುವುದು ಅಷ್ಟು ಸುಲಭದ ಮಾತಲ್ಲ. ಎಷ್ಟೋ […]

ಟ್ರೇಲರ್ ನಲ್ಲಿ ʼವಿದ್ಯಾಪತಿʼ..ಧನಂಜಯ್ ನಿರ್ಮಾಣದ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್

    ಡಾಲಿ ಪಿಕ್ಚರ್ಸ್ ಮತ್ತೊಂದು ಕೊಡುಗೆ ವಿದ್ಯಾಪತಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮತ್ತೊಮ್ಮೆ ಡಾಲಿ ಧನಂಜಯ್-ನಾಗಭೂಷಣ್ ಮನರಂಜನೆಯ ರಸದೌತಣ ಬಡಿಸಲು ಸಜ್ಜಾಗಿದೆ. ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ನಿನ್ನೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಿದ್ಯಾಪತಿಗೆ ಪ್ರೇರಣಪತಿ ಸಾಥ್ ಕೊಟ್ಟರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿದ್ಯಾಪತಿ ಟ್ರೇಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.     ನಟ ಧ್ರುವ ಸರ್ಜಾ ಮಾತನಾಡಿ, ಈ ಚಿತ್ರ ಸೇಫ್ ಹ್ಯಾಂಡ್ಸಲ್ಲಿದೆ. ಯಾಕಂದರೆ ಯೋಗಿ ಸರ್, ಕಾರ್ತಿಕ್ […]

“ಚಿ;ಸೌಜನ್ಯ”; ಸೌಜನ್ಯ ಕೇಸ್‌ಗೆ ಸಿನಿಮಾ ರೂಪ ಕೊಡ್ತಾರಾ ನಟಿ ಹರ್ಷಿಕಾ ಪೂಣಚ್ಚ ?

  ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಅಷ್ಟೇ ಅಲ್ಲದೆ ಉತ್ತಮ ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಛ ಈಗ ನಿರ್ದೇಶಕಿಯಾಗುತ್ತಿದ್ದಾರೆ. ಕನ್ನಡದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರವಿರುವ ನಿರ್ದೇಶಕಿಯರ ಸಾಲಿಗೆ ಹರ್ಷಿಕಾ ಸೇರ್ಪಡೆಯಾಗಲಿದ್ದಾರೆ. ಇತ್ತೀಚೆಗೆ ಹರ್ಷಿಕಾ ಪೂಣಚ್ಛ ಅವರು ನಿರ್ದೇಶಿಸುತ್ತಿರುವ, ಕಂಸಾಳೆ ಫಿಲಂಸ್ ಹಾಗೂ ಭುವನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಧು ಮರಿಸ್ವಾಮಿ ಮತ್ತು ಭುವನ್ ಪೊನ್ನಣ್ಣ ನಿರ್ಮಿಸುತ್ತಿರುವ, ಬಹುಭಾಷಾ ನಟ ಕಿಶೋರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ದೇಶದಲ್ಲಿ […]

‘ರುದ್ರಾಭಿಷೇಕಂ’ ಕ್ಲೈಮ್ಯಾಕ್ಸ್ ನಲ್ಲಿ ನೂರಾರು ವೀರಗಾಸೆ ಕಲಾವಿದರು ಭಾಗಿ

ನಮ್ಮ ನಾಡು ಹಲವಾರು ಜನಪದ ಕಲೆಗಳ ಇತಿಹಾಸ ಹೊಂದಿದೆ. ಇತ್ತೀಚೆಗೆ ಕಾಂತಾರ ಚಿತ್ರದಲ್ಲಿ ಕರಾವಳಿ ಭಾಗದ ದೈವಾರಾಧನೆ, ಆಚರಣೆ ಬಗ್ಗೆ ಹೇಳಲಾಗಿತ್ತು. ಅದೇರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ವೀರಗಾಸೆ ಕಲೆ ಹಾಗೂ ಅದರ ಅಧಿದೇವರಾದ ವೀರಭದ್ರ ದೇವರ ಇತಿಹಾಸವನ್ನು ಹೇಳುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ. ಅದರ ಹೆಸರು ರುದ್ರಾಭಿಷೇಕಂ. ವೀರಗಾಸೆ ಕುಟುಂಬವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಆ ಕಲೆಯ ಮೂಲ, ಆ ಕಲಾವಿದರ ಇತಿಹಾಸವನ್ನು ಕಮರ್ಷಿಯಲ್ ಕಥೆಯ ಮೂಲಕ ನಿರ್ದೇಶಕ ವಸಂತ್ ಕುಮಾರ್ ಅವರು ರುದ್ರಾಭಿಷೇಕಂ […]

Translate »