# Tags

ಸಖತ್‌ ಮನರಂಜನೆ ನೀಡಿದ ಬಾಯ್ಸ್ V/S  ಗರ್ಲ್ಸ್ ಆಂಡ್‌ ಮಜಾ ಟಾಕೀಸ್

ಬಿಗ್‌ ಬಾಸ್‌ ಮುಗಿದ ಬೆನ್ನಲ್ಲೇ ಕಲರ್ಸ್‌ ಕನ್ನಡ ಎರಡು ಹೊಸ ರಿಯಾಲಿಟಿ ಶೋಗಳನ್ನು ಶುರು ಮಾಡಿದೆ. ‘ಬಾಯ್ಸ್ V/S  ಗರ್ಲ್ಸ್ʼ ಆಂಡ್‌ ‘ಮಜಾ ಟಾಕೀಸ್’. ಈ ಎರಡು ಶೋಗಳನ್ನು ಶನಿವಾರ ಹಾಗೂ ಭಾನುವಾರ ನೋಡಿದ ವೀಕ್ಷಕರು ಫುಲ್‌ ಖುಷಿಯಾಗಿದ್ದಾರೆ. ನಕ್ಕು ನಕ್ಕು ಎಂಜಾಯ್‌ ಮಾಡಿದ್ದಾರೆ. ಬಾಯ್ಸ್ V/S  ಗರ್ಲ್ಸ್ ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಕಲರ್ಸ್ ಕನ್ನಡ ಶುರುಮಾಡುತ್ತಿರುವ ‘ಬಾಯ್ಸ್ V/S  ಗರ್ಲ್ಸ್’ ಒಂದು ರೋಮಾಂಚಕ ಗೇಮ್ ಶೋ. ಹುಡುಗ ಮತ್ತು ಹುಡುಗಿಯರ ಗುಂಪುಗಳು ಜಿದ್ದಾಜಿದ್ದಿಗೆ […]

ರುದ್ರನಾಗಿ ಬಂದ ಡಾರ್ಲಿಂಗ್‌ ಪ್ರಭಾಸ್‌

ಪ್ರಭಾಸ್ ಅವರು ಕಲ್ಕಿ ನಂತರ ಇನ್ನೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿದ್ದಾರೆ. ಅವರು ಕಣ್ಣಪ್ಪ ಸಿನಿಮಾ ಮೂಲಕ ಸಿನಿ ಪ್ರಿಯರ ಮುಂದೆ ಬರಲಿದ್ದಾರೆ. ಕಾಯುವಿಕೆ ಅಂತೂ ಕೊನೆಯಾಗಿದೆ. ಕಣ್ಣಪ್ಪ ಸಿನಿಮಾ ತಂಡ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. ತೆಲುಗಿನ ‘ಕಣ್ಣಪ್ಪ’ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಹುಟ್ಟಾಕ್ಕಿದೆ. ಮಂಚು ವಿಷ್ಣು ಹೀರೋ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ಮಲಯಾಳಂ ನಟ ಮೋಹನ್ […]

ಮದುವೆಗೆ ರೆಡಿಯಾದ ಅರ್ಜುನ್ ಕಪೂರ್

ಅರ್ಜುನ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಯಲ್ಲಿರುವ ನಟ. ಸಿನಿಮಾಗಳಿಗಿಂತ ಜಾಸ್ತಿ ಅವರ ಸಂಬಂಧಗಳು ಮತ್ತು ಮದುವೆಯ ಪ್ಲಾನ್ಸ್ ಸಂಬಂಧವಾಗಿ ನಿರಂತರ ಸುದ್ದಿಯಲ್ಲಿದ್ದಾರೆ. ನಟನ ಮುಂಬರುವ ಚಿತ್ರ ಮೇರೆ ಹಸ್ಬೆಂಡ್ ಕಿ ಬಿವಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅವರು ತನ್ನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ವಿವಾಹದ ಕುರಿತ ಊಹಾಪೋಹಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು ನನ್ನ ಗಮನವು ನನ್ನ ಕೆಲಸದ ಮೇಲೆ ಉಳಿಯಬೇಕು ಎಂದು ಹೇಳಿದರು. ಈ ಮೂಲಕ ಮದುವೆ ಮಾತನ್ನೇ ತಟ್ಟನೆ […]

ಟಾಕ್ಸಿಕ್ ಶೂಟಿಂಗ್ :ಬೆಂಗಳೂರಲ್ಲಿಯೇ ಬೀಡು ಬಿಟ್ಟ ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ

ಟಾಕ್ಸಿಕ್ ಚಿತ್ರದ ಮೂರು ಹಂತದ ಶೂಟಿಂಗ್ ಕಂಪ್ಲೀಟ್  ಆಗಿದೆ. ನಾಲ್ಕನೆ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಈಗಾಗಲೇ ಮುಂಬೈಯಲ್ಲಿ ಅತಿ ದೊಡ್ಡ ಹಂತದ ಶೂಟಿಂಗ್ ಮುಗಿದಿದೆ. ಅಲ್ಲಿಂದ ಗೋವಾಕ್ಕೆ ಬಂದ ಸಿನಿಮಾ ತಂಡ ಇಲ್ಲೂ ಮಹತ್ವದ ದೃಶ್ಯಗಳನ್ನ ಸೆರೆಹಿಡಿದುಕೊಂಡಿದೆ. ಇದೀಗ ನಾಲ್ಕೆಯ ಹಂತದ ಶೂಟಿಂಗ್ ಬೆಂಗಳೂರಿನಲ್ಲಿಯೇ  ನಡೆಯುತ್ತಿದೆ. ಈ ಒಂದು ಹಂತದಲ್ಲಿ ಚಿತ್ರದ ಮಹತ್ವದ ಭಾಗದ ಶೂಟಿಂಗ್ ನಡೆಯುತ್ತದೆ. ಆ ಹಿನ್ನೆಲೆಯಲ್ಲಿ ಸಿನಿಮಾದ ನಾಲ್ವರು ನಟಿಮಣಿಯರು ಬೆಂಗಳೂರಿಗೆ ಬಂದಿದ್ದಾರೆ.   ಚಿತ್ರದ ಇತರ ವಿಚಾರಕ್ಕೆ ಬಂದ್ರೆ, ಸಿನಿಮಾದಲ್ಲಿರೋ […]

`ನ್ಯಾಯಬೆಲೆ ಅಂಗಡಿʼ ; ರಾಗಿಣಿ ದ್ವಿವೇದಿ ಹೊಸಚಿತ್ರಕ್ಕೆ ಟೈಟಲ್‌ ಫಿಕ್ಸ್‌

  ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಹೆಚ್ಚಾಗಿ ಗ್ಲಾಮರಸ್‌ ಪಾತ್ರಗಳಲ್ಲಿ ಮಿಂಚಿದ್ದ ನಟಿ ರಾಗಿಣಿ ದ್ವಿವೇದಿ, ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಬಹುತೇಕ ಸ್ಕ್ರಿಪ್ಟ್‌ ಕಾರ್ಯಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸಿನೆಮಾದ ಟೈಟಲ್‌ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಚಿತ್ರತಂಡ, ಹಾಡುಗಳ ಧ್ವನಿಮುದ್ರಣ ಆರಂಭಿಸುವ ಮೂಲಕ ʼಸರ್ಕಾರಿ […]

ಶರಣ್ ಅಭಿನಯದ “ಛೂಮಂತರ್”ಗೆ 25ದಿನಗಳ ಸಂಭ್ರಮ

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ”‌ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ “ಛೂ ಮಂತರ್” ಚಿತ್ರ ಯಶಸ್ವಿ 25 ದಿನಗಳ ಪ್ರದರ್ಶನ ಕಂಡು, 50 ದಿನಗಳತ್ತ ಮುನ್ನುಗುತ್ತಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ಚಿತ್ರತಂಡ ಸಮಾರಂಭ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ಇಪ್ಪತ್ತೈದು ದಿನಗಳನ್ನು ಪೂರೈಸಿರುವುದು […]

ಸಮರ್ಜಿತ್ ಲಂಕೇಶ್: ಭಾರತೀಯ ಚಿತ್ರರಂಗದ ಉದಯೋನ್ಮುಖ ನಕ್ಷತ್ರ

  ಭಾರತೀಯ ಚಿತ್ರರಂಗದಲ್ಲಿ ಒಬ್ಬ ಹೊಸ ನಕ್ಷತ್ರ ಉದಯಿಸುತ್ತಿದೆ. ಅವರ ಹೆಸರು ಸಮರ್ಜಿತ್ ಲಂಕೇಶ್. ತಮ್ಮ ಅದ್ಭುತ ಅಭಿನಯ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ಅವರು ಈಗಾಗಲೇ ಅನೇಕರ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ, ಅವರು ಪ್ರತಿಷ್ಠಿತ ಲುಮಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಉತ್ತಮ ಉದಯೋನ್ಮುಖ ನಟ ಪ್ರಶಸ್ತಿಗಾಗಿ ಪಡೆದಿದ್ದಾರೆ. ಇದಲ್ಲದೆ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನು ಕೂಡ ಪಡೆದು ತಮ್ಮ ಪ್ರತಿಭೆಯನ್ನು ಮತ್ತಷ್ಟು ಸಾಬೀತುಪಡಿಸಿದ್ದಾರೆ. ಸಮರ್ಜಿತ್ ಅವರ ನಟನೆಯಷ್ಟೇ ಅವರ ನೃತ್ಯ ಮತ್ತು ಮಾರ್ಷಲ್ ಆರ್ಟ್ಸ್‌ನಲ್ಲಿನ ಕೌಶಲ್ಯಗಳು ಕೂಡ ಅಷ್ಟೇ ಮನಮೋಹಕ. […]

ತರುಣ್ ಸುದೀರ್ ರವರಿಂದ ಅನಾವರಣವಾಯಿತು “31 DAYS” ಚಿತ್ರದ ಎರಡನೇ ಹಾಡು .

ಜಾಲಿಡೇಸ್‌ ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ “31 DAYS” ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದ ಚಿತ್ರಸಂತೆಯಲ್ಲಿ ಅನಾವರಣವಾಯಿತು. “31 DAYS” ಚಿತ್ರಕ್ಕೆ “ಹೈವೋಲ್ಟೇಜ್ ಲವ್ ಸ್ಟೋರಿ” ಎಂಬ ಅಡಿ ಬರಹವಿದ್ದು ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿದೆ.  “ನಾನು ಸಹ ಚಿತ್ರಕಲಾ ಪರಿಷತ್​ನ ವಿದ್ಯಾರ್ಥಿಯಾಗಿದ್ದು, ಚಿತ್ರಸಂತೆಯಲ್ಲಿ ನಮ್ಮ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆಯಾಗಿದ್ದು ಖುಷಿಯಾಗಿದೆ” ಎಂದು ನಾಯಕ ನಿರಂಜನ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದರು. Nstar ಬ್ಯಾನರ್​​ನಲ್ಲಿ […]

ಶ್ರೀಮುರಳಿ ಅವರಿಂದ “ರಾಜು ಜೇಮ್ಸ್ ಬಾಂಡ್” ಚಿತ್ರದ “ಟ್ರೇಲರ್” ಬಿಡುಗಡೆ

    ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಟ್ರೇಲರ್ ಅನಾವರಣ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ನಲ್ಲೇ ಮೋಡಿ ಮಾಡಿರುವ ಈ ಹಾಸ್ಯಪ್ರಧಾನ ಚಿತ್ರ ಫೆಬ್ರವರಿ 14ರಂದು ತೆರೆಗೆ ಬರಲಿದೆ. ಗುರುನಂದನ್ […]

ಜನಪ್ರಿಯ ಗಾಯಕಿ ಕೆ.ಎಸ್.ಚಿತ್ರ ಅವರ ಕಂಠಸಿರಿಯಲ್ಲಿ “1990 s” ಚಿತ್ರದ ಇಂಪಾದ ಗೀತೆ

    ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ “1990s” ಚಿತ್ರಕ್ಕಾಗಿ ಮೋಹಿನಿ ಹಾಗೂ ಮಂಜು ಅವರು ಬರೆದಿರುವ “ಮಳೆ ಹನಿಯೆ” ಎಂಬ ಹಾಡು ಇತ್ತೀಚಿಗೆ ಬಿಡಯಾಗಿದೆ. ಹಿರಿಯ ಕಲಾ ನಿರ್ದೇಶಕ ಕನಕರಾಜ್ ಈ ಹಾಡನ್ನು ಅನಾವರಣ ಮಾಡಿದರು. ಭಾರತದ ಜನಪ್ರಿಯ ಗಾಯಕಿ ಕೆ.ಎಸ್ ಚಿತ್ರ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಸುಮಧುರ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಹಾರಾಜ […]

  • 1
  • 2
Translate »