‘Sky Force’ ಮೂರು ದಿನಗಳಲ್ಲಿ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ಗಳಿಸಿದ್ದೆಷ್ಟು?
ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಹೊಸಬರಾದ ವೀರ್ ಪಹಾರಿಯಾ ನಟನೆಯ ‘ಸ್ಕೈ ಫೋರ್ಸ್’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 92.90 ಕೋಟಿ ರೂ. ಗಳಿಸಿದೆ. ಭಾರತದ ಮೊದಲ ಮತ್ತು ಅತ್ಯಂತ ಮಾರಕ ವೈಮಾನಿಕ ದಾಳಿಯ ಕಥೆಯನ್ನು ಒಳಗೊಂಡಿರುವ ಸ್ಕೈ ಫೋರ್ಸ್ ಚಿತ್ರವು ಶುಕ್ರವಾರ (ಜನವರಿ 24) ದಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರವನ್ನು ಸಂದೀಪ್ ಕೆವ್ಲಾನಿ ಮತ್ತು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದು, ಪ್ರೊಡಕ್ಷನ್ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್ […]