# Tags

ಬಂಜಾರ ಜನಾಂಗದ ಅಳಲನ್ನು ತೆರೆದಿಟ್ಟ `ಗೋರ್ ಗಡ್’ ಟೀಸರ್

ಪ್ರಸ್ತುತ ಚಂದನವನದಲ್ಲಿ ಎಲ್ಲಾ ಕೆಲಸ ಮುಗಿಸಿದ ನಂತರ ಮಾಧ್ಯಮದ ಮುಂದೆ ಬರುವುದು. ಪ್ರಾರಂಭದಿಂದಲೂ ಸದಾ ಸುದ್ದಿಯಲ್ಲಿರುವುದು. ಅದೇ ರೀತಿಯಲ್ಲಿ ’ಗೋರ್ ಗಡ್’ ಎನ್ನುವ ಚಿತ್ರವು ಎರಡನೇ ಸಾಲಿಗೆ ಸೇರಿಕೊಳ್ಳುತ್ತದೆ. ಶೂಟಿಂಗ್‌ಗೆ ಹೋಗುತ್ತಿದ್ದೇವೆಂದು ಹೇಳಿಕೊಳ್ಳಲೆಂದು ಟೀಸರ್ ಬಿಡುಗಡೆ ಸಮಾರಂಭವನ್ನು ಏರ್ಪಾಟು ಮಾಡಿದ್ದರು. ದಾವಣಗೆರೆಯ ಶಶಿಕುಮಾರ್.ಜೆ.ಕೆ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಾಲ್ಕನೇ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಹೊಸೂರುನಲ್ಲಿ ಅಪ್ಪ ಕಾರು ಚಾಲಕರಾಗಿದ್ದರು. ಡಿಎಸ್‌ಕೆ ಗ್ರೂಪ್ ಶುರು ಮಾಡಿ ಉದ್ಯಮದಲ್ಲಿ ಯಶಸ್ಸು ಕಂಡಿದ್ದರಿಂದ ಸಮಾಜ ಸೇವೆಯಲ್ಲಿ ನಿರತನಾಗಿದ್ದೇನೆ. ಇವರುಗಳಿಗೆ ನನ್ನ […]

ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ವರೆಗೆ ಸಂಜು ವೆಡ್ಸ್ ಗೀತಾ ಕಥೆ..

  ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಚಲವಾದಿ ಕುಮಾರ್ ಅವರ ನಿರ್ಮಾಣದ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಜನವರಿ 10ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರ ವಿಷಯವನ್ನಿಟ್ಟುಕೊಂಡು ನವಿರಾದ ಪ್ರೇಮಕಥೆಯನ್ನು ನಿರ್ದೇಶಕ ನಾಗಶೇಖರ್ ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಆನಂದ ಆಡಿಯೋ ಮೂಲಕ ರಿಲೀಸಾಗಿರುವ ಹಾಡುಗಳು ಕೇಳುಗರ ಮನ ಗೆದ್ದಿವೆ. ಇದೀಗ ಈ ಚಿತ್ರದ ಮತ್ತೊಂದು ಹಾಡನ್ನು ಕಿಚ್ಚ ಸುದೀಪ್ ಬಿಡುಗಡೆಗೊಳಿಸಿ ಮಾತನಾಡುತ್ತ ಕಿಟ್ಟಿ ಹಾಗೂ ನಾಗಶೇಖರ್ ಸೇರಿ ಈ ಸಿನಿಮಾ ಮಾಡಿದ್ದಾರೆ. […]

‘ಸಿಂಹದ ಹಾದಿʼ ; ‘ಸಾಹಸ ಸಿಂಹ’ನ ಪ್ರೇರಣೆಯ ಕಥೆಗಳಿಗೆ ದೃಶ್ಯ ರೂಪ

ಇದೇ ಡಿಸೆಂಬರ್‌ 30 ಕನ್ನಡ ಚಿತ್ರರಂಗದ ʼಸಾಹಸ ಸಿಂಹʼ ಖ್ಯಾತಿಯ ನಟ ವಿಷ್ಣುವರ್ಧನ್‌ ಅಭಿಮಾನಿಗಳನ್ನು ಅಗಲಿದ ದಿನ. 2009ರ ಡಿಸೆಂಬರ್‌ 30ರ ಮುಂಜಾನೆ ಬಂದ ಸುದ್ದಿ, ಇಡೀ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದಂತಹ ನೋವನ್ನು ನೀಡಿತು. ಇದೀಗ 2024 ಡಿಸೆಂಬರ್‌ 30ಕ್ಕೆ ವಿಷ್ಣುವರ್ಧನ್ ಇಲ್ಲದೇ 15 ವರ್ಷ ಸಂದಿದೆ. ಆದರೆ ವಿಷ್ಣುವರ್ಧನ್‌ ಕಾಲವಾಗಿ ಹದಿನೈದು ವರ್ಷಗಳಾದರೂ ಅವರ ಅಭಿಮಾನಿಗಳು ಅವರನ್ನು ಎಂದಿಗೂ ಮರೆತಿಲ್ಲ. ವಿಷ್ಣುವರ್ಧನ್‌ ಅಭಿನಯಿಸಿದ ಸಿನೆಮಾಗಳು, ವಿಭಿನ್ನ ಪಾತ್ರಗಳು ಮತ್ತು ಸಮಾಜಮುಖೀ ಕಾರ್ಯಗಳ ಮೂಲಕ ಅಭಿಮಾನಿಗಳು ತಮ್ಮ […]

“ರುದ್ರ ಗರುಡ ಪುರಾಣ” ಜನವರಿ 24ರಂದು ಬಿಡುಗಡೆ

“ಆಪರೇಶನ್ ಅಲಮೇಲ್ಲಮ್ಮ”, ” ಕವಲುದಾರಿ” ಮೂಲಕ ಕನ್ನಡಿಗರ ಮನ ಸೆಳೆದಿರುವ ನಟ ರಿಷಿ, ಈಗ ಕನ್ನಡ ಹಾಗೂ ತೆಲುಗು ಎರಡು ಬಾಷೆಗಳಲ್ಲೂ ಬೇಡಿಕೆ ನಟ. ಪ್ರಸ್ತುತ ರಿಷಿ ನಾಯಕನಾಗಿ ನಟಿಸಿರುವ “ರುದ್ರ ಗರುಡ ಪುರಾಣ” ಚಿತ್ರದ “ಹುಕ್ಕಾ ಹೇಳಿ ಸುಕ್ಕಾ ಹೊಡಿ. ಶೋಕಿ ಮಾಡು ಜೀವನಾನ” ಎಂಬ ಹಾಡು ಬಿಡುಗಡೆಯಾಗಿದೆ. ಹಾಡಿನ ಮುಖಾಂತರ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ವಿಡಂಬನೆ ಮಾಡಿರುವುದು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲೂ ಹಾಡಿನಲ್ಲಿ ಬರುವ. “ಫ್ರೀ ರೈಸ್ ಕೊಟ್ಟಿಲ್ವಾ ಫ್ರೀ ಬಸ್ಸು […]

ಟ್ರೇಲರ್ ನಲ್ಲೇ ಮೋಡಿಮಾಡುತ್ತಿರುವ ಶರಣ್ ಅಭಿನಯದ “ಛೂ ಮಂತರ್” ಚಿತ್ರ ಜನವರಿ 10ರಂದು ಬಿಡುಗಡೆ .

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ, “ಕರ್ವ” ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ಹೆಸರಾಂತ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಛೂ‌ ಮಂತರ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಭಿನ್ನ ಕಂಟೆಂಟ್ ವುಳ್ಳ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಧಿಕ ಸಂಖ್ಯೆಯಲ್ಲಿ ಟ್ರೇಲರ್ ವೀಕ್ಷಣೆಯಾಗುತ್ತಿದ್ದು, ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ.   ಜನವರಿ 10 ರಂದು ಬಹ ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗತ್ತಿದೆ. […]

“ಮುಂಗಾರು ಮಳೆ”ಗೆ ಹದಿನೆಂಟರ ಹರೆಯ ; ಈ ಸವಿನೆನಪಿನಲ್ಲಿ “ಮನದ ಕಡಲಿ” ನಿಂದ ಬಂತು ಮನಮೋಹಕ ಗೀತೆ .

  ಹದಿನೆಂಟು ವರ್ಷಗಳ ಹಿಂದೆ ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ “ಮುಂಗಾರು ಮಳೆ”. ಈ ಯಶಸ್ವಿ ಚಿತ್ರ ಬಿಡುಗಡೆಯಾಗಿ ಇದೇ ಡಿಸೆಂಬರ್ ಗೆ ಹದಿನೆಂಟು ವರ್ಷ ತುಂಬಿದೆ. ಹದಿನೆಂಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ.ಕೃಷ್ಣಪ್ಪ ನಿರ್ಮಾಣದಲ್ಲಿ,‌ ಯೋಗರಾಜ್ ಭಟ್ ನಿರ್ದೇಶನದಲ್ಲಿ “ಮನದ ಕಡಲು” ಮೂಡಿ ಬರುತ್ತಿದೆ. “ಮುಂಗಾರು ಮಳೆ” ಬಿಡುಗಡೆಯಾದ ದಿನವೇ “ಮನದ ಕಡಲು” ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ […]

ಹಿರಿಯ ರಾಜಕೀಯ ಮುಖಂಡರಾದ ಪಿ.ಜಿ.ಆರ್ ಸಿಂಧ್ಯಾ ಅವರಿಂದ ಪ್ರಸಿದ್ಧ್ ನಿರ್ದೇಶನದ “ಶೇರ್” ಚಿತ್ರದ ಟೀಸರ್ ಅನಾವರಣ

ಸುದರ್ಶನ್ ಸುಂದರರಾಜ್ ನಿರ್ಮಾಣದ, ಪ್ರಸಿದ್ಧ್ ನಿರ್ದೇಶನದ ಹಾಗೂ “ಕನ್ನಡತಿ” ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ಶೇರ್” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಹಿರಿಯ ರಾಜಕೀಯ ಮುಖಂಡರಾದ ಪಿ.ಜಿ.ಆರ್ ಸಿಂಧ್ಯಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಚಿತ್ರದ ಮೂಲಕ ನಿರ್ಮಾಪಕ ಸುದರ್ಶನ್ ಸುಂದರರಾಜ್ ಅವರ ಪುತ್ರ ಕ್ರಿಸ್ ಖಳನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ‌.   ಟೀಸರ್ ಬಿಡುಗಡೆ ನಂತರ ಮಾತನಾಡಿದ […]

ಹೊಸವರ್ಷದ ಮೊದಲ ಚಿತ್ರವಾಗಿ ಜನವರಿ 3 ರಂದು ಬಿಡುಗಡೆಯಾಗಲಿದೆ “ಗನ್ಸ್ ಅಂಡ್ ರೋಸಸ್” 

  ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್, ” ಗನ್ಸ್ ಅಂಡ್ ರೋಸಸ್” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇವರ ನಟನೆಯ ಮೊದಲ ಚಿತ್ರ ಇದ್ದಾಗಿದ್ದು, 2025 ರ ಜನವರಿ 3, ಹೊಸವರ್ಷದ ಮೊದಲ ಚಿತ್ರವಾಗಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೆಚ್ ಆರ್ ನಟರಾಜ್ ಅವರು ದ್ರೋಣ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಶ್ರೀನಿವಾಸ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ […]

“ನಾಗವಲ್ಲಿ ಬಂಗಲೆ” ಪ್ರವೇಶಿಸಿದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪ್ರತಿನಿಧಿಗಳು

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕವಿ ರಾಜೇಶ್ ನಿರ್ದೇಶನ . ಕನ್ನಡದಲ್ಲಿ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳೇ ಹೆಚ್ಚಾಗಿ ಜನರನ್ನು ತಲುಪುತ್ತಿದೆ. ಅಂತಹ ಉತ್ತಮ ಹಾಗೂ ವಿಭಿನ್ನ ಕಂಟೆಂಟ್ ಹೊತ್ತು “ನಾಗವಲ್ಲಿ ಬಂಗಲೆ” ನಿರ್ಮಾಣವಾಗಿದೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಹುಡುಗಿಯರು(ಪಾತ್ರಗಳು) “ನಾಗವಲ್ಲಿ ಬಂಗಲೆ”ಯನ್ನು ಪ್ರವೇಶಿಸುತ್ತಾರೆ. ಈ ಆರು ಪಾತ್ರಗಳ ಜೊತೆಗೆ ಮತ್ತೊಂದು ವಿಶೇಷ ಪಾತ್ರ ಸಹ ಇದೆ. ಈ ಆರು ಪಾತ್ರಗಳ ಪ್ರವೇಶದ ನಂತರ […]

Translate »