# Tags

ಟಾಸ್ಕ್‌ ಆಡಲು ಹೋಗಿ ಮನುಷ್ಯತ್ವ ಮರೆತರಾ ಸ್ಪರ್ಧಿಗಳು..?

ಬಿಗ್‌ ಬಾಸ್‌ ಮನೆಯಲ್ಲಿ ಕೆಲವು ದಿನಗಳ ಬಳಿಕ ಟಾಸ್ಕ್‌ ಗಳು ಶುರುವಾಗುತ್ತವೆ. ಅವು ಯಾರೂ ಊಹೆ ಮಾಡಲು ಸಾಧ್ಯವಾಗದಂತ ಟಾಸ್ಕ್‌ಗಳು. ಕೆಲವೊಮ್ಮೆ ಬೇರೆ ಸೀಸನ್‌ನಲ್ಲಿ ಆಡಿಸಿದ ಟಾಸ್ಕ್‌ ಮತ್ತೆ ರಿಪೀಟ್‌ ಆಗಲು ಬಹುದು. ಆದರೆ ಬಿಗ್‌ ಬಾಸ್‌ನಲ್ಲಿ ಟಾಸ್ಕ್‌ಗಳನ್ನು ಕೊಟ್ಟಾಗಲೇ ಮನರಂಜನೆಯೂ ಸಿಗುತ್ತದೆ, ಅಟ್‌ ದಿ ಸೇಮ್‌ ಟೈಮ್‌ ಜಗಳ, ಗುದ್ದಾಟವೂ ನಡೆಯುತ್ತದೆ. ಆದ್ರೆ ಯಾವ ರೀತಿಯಾದ ಟಾಸ್ಕ್ ಕೊಡ್ತಾರೆ, ಅದನ್ನ ಬಿಗ್‌ ಬಾಸ್‌ ಮಂದಿ ಹೇಗೆ ಆಡ್ತಾರೆ ಎಂಬುದೇ ಇಲ್ಲಿ ಬಹಳ ಮುಖ್ಯವಾಗುತ್ತದೆ. ಆಟ ಆಡುವಾಗ […]

ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ “ಮಾರ್ಟಿನ್” ಚಿತ್ರ ಅಕ್ಟೋಬರ್ 11 ರಂದು ತೆರೆಗೆ .

ಉದಯ್ ಕೆ ಮೆಹ್ತಾ ನಿರ್ಮಾಣದ, ಎ.ಪಿ.ಅರ್ಜುನ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಮಾರ್ಟಿನ್” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಬಹು ನಿರೀಕ್ಷಿತ ಈ ಪ್ಯಾನ್ ಇಂಡಿಯಾ ಚಿತ್ರ ಅಕ್ಟೋಬರ್ 11ರಂದು ತೆರೆಗೆ ಬರಲಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. “ಮಾರ್ಟಿನ್”, ನನ್ನ ಸಿನಿಜರ್ನಿಯ ಬಿಗ್ ಬಜೆಟ್ ಚಿತ್ರ. ನಿರ್ಮಾಪಕರು ನನ್ನ […]

`ನಿಮಿತ್ತ ಮಾತ್ರ’ ; ಕನ್ನಡಕ್ಕೆ ಪ್ರಥಮ ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್*

“ನಿಮಿತ್ತ ಮಾತ್ರ” ಕನ್ನಡ ಸಿನಿಮಾಗಳಲ್ಲಿ ಪ್ರಥಮ ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್ ಆಗಿದ್ದು, ಬೆಂಗಳೂರು ಮತ್ತು ಮಂಗಳೂರು ಹಿನ್ನೆಲೆಯೊಂದಿಗೆ ಮೂಡಿ ಬಂದಿದೆ. 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಅತೀವ ಭಯಾನಕ ಘಟನೆಯೆ ಈ ಕಥೆಯ ಆಧಾರ. ತನ್ನ ತಂದೆಯಿಂದ ಬಿಟ್ಟುಹೋಗಿದ್ದ ಸಂಧರ್ಭವನ್ನು ಅರಿಯಲು investigative ಪತ್ರಕರ್ತನೊಬ್ಬ ಈ ಕೇಸ್ ಪರಿಹರಿಸಲು ಹೊರಟಿದ್ದಾನೆ. ಅವನು ಸತ್ಯವನ್ನು ಪತ್ತೆಹಚ್ಚುವನೋ? ಅಪರಾಧಿಯನ್ನು ನ್ಯಾಯದ ಕಟ್ಟೆಗೆ ಸೆಳೆವನೋ? ಈ ಪ್ರಶ್ನೆಗಳು ಚಿತ್ರದಲ್ಲಿ ಮುಂದುವರೆಯುತ್ತ ಹೋಗುತ್ತದೆ. ಚಿತ್ರವನ್ನು ರೋಶನ್ ಡಿ ಸೌಜಾ ಅವರು ಬರೆದಿದ್ದು, ನಿರ್ದೇಶಿಸಿ […]

ನ.22ಕ್ಕೆ ಆರಾಮಾಗಿ ಬರಲಿದ್ದಾನೆ ‘ಆರಾಮ್ ಅರವಿಂದ ಸ್ವಾಮಿ’

ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್ ತೇಜೇಶ್ವರ್ ಆರಾಮ್ ಅರವಿಂದ ಸ್ವಾಮಿ ಸಿನಿಮಾ ಮೂಲಕ ರೋಮ್ಯಾಂಟಿಕ್ ಹೀರೋ ಆಗಿ ನಿಮ್ಮ ಮುಂದೆ ಬರ್ತಿದ್ದಾರೆ. ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರನ್ನು ಗಮನಸೆಳೆಯುತ್ತಿರುವ ಚಿತ್ರತಂಡ ಈಗ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಆರಾಮ್ ಅರವಿಂದ ಸ್ವಾಮಿ ಸಿನಿಮಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು, ನವೆಂಬರ್ 22ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ. ಟೈಟಲ್ ಟ್ರ್ಯಾಕ್ ಮೂಲಕ ಜಬರ್ದಸ್ತ್ ಆಗಿ ಕುಣಿದಿದ್ದ ಅನೀಶ್ ತೇಜೇಶ್ವರ್ ಈಗ ಮುಂದೆ ಹೇಗೋ ಏನೋ ಎನ್ನುತ್ತಾ […]

ಬೇಟೆಗಿಳಿದ ‘ವೆಟ್ಟೈಯಾನ್’.. ಅಮಿತಾಬ್ ಬಚ್ಚನ್ ಎದುರು  ರಜನಿ !

ತಮಿಳು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ವೆಟ್ಟೈಯಾನ್. ಅಕ್ಟೋಬರ್ 10ರಂದು ದಸರಾ ಹಬ್ಬದ ವಿಶೇಷವಾಗಿ ಬಿಡುಗಡೆಯಾಗ್ತಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಖಾಕಿ ತೊಟ್ಟು ತಲೈವಾ ಅಬ್ಬರಿಸಿದ್ದಾರೆ. ಪೊಲೀಸ್ ಎನ್ ಕೌಂಟರ್ ತಪ್ಪಾ? ಸರಿನಾ? ಎಂಬ ಸುತ್ತ ಟ್ರೇಲರ್ ಸಾಗುತ್ತದೆ. ಟ್ರೇಲರ್ ನೋಡಿದ್ದಾಗ ‘ವೆಟ್ಟೈಯಾನ್’ ಇಬ್ಬರು ಮಹಾನ್ ನಟರ ನಡುವಿನ ಸಂಘರ್ಷ ಇದೆ ಎನ್ನುವಂತಿದೆ.   ಜೈ ಭೀಮ್ ಸಿನಿಮಾ ನಿರ್ದೇಶಿಸಿದ್ದ ಟೆ.ಜೆ.ಜ್ಞಾನವೇಲ್ ವೆಟ್ಟೈಯಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಮರ್ಷಿಯಲ್ ಅಂಶಗಳ ಜೊತೆ ಒಂದೊಳ್ಳೆ […]

‘ನಿದ್ರಾದೇವಿ Next Door’ ಸಿನಿಮಾಗೆ ಕುಂಬಳಕಾಯಿ: ಇದು ಪ್ರವೀರ್ ಹೊಸ ಪ್ರವರ

ಸುರಮ್ ಮೂವೀಸ್ ನಿರ್ಮಾಣದ ಯುವ ನಟ ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸಿರುವ ನಿದ್ರಾದೇವಿ Next Door ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ರಾಜರಾಜೇಶ್ವರಿ ನಗರದಲ್ಲಿ ಕೊನೆಯ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿ ಕುಂಬಳಕಾಯಿ ಹೊಡೆಯಲಾಯಿತು. ಈ ವೇಳೆ ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞಾನರು ಹಾಗೂ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಕೂಡ ಭಾಗಿಯಾಗಿದ್ದರು. ಚಿತ್ರದಲ್ಲಿ ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್ ಪ್ರಮುಖ […]

Translate »