ಮಾಡದ ತಪ್ಪಿಗೆ ಜೈಲಿನಲ್ಲಿದ್ದೇನೆ, ಸ್ನೇಹಿತ ರಾಕೇಶ್ ಬಳಿ ಸೋನು ಗೌಡ ಕಣ್ಣೀರು
ಬೆಂಗಳೂರು: ಬಾಲಕಿ ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿರುವ ಸೋನು ಗೌಡ ಅವರನ್ನು ಸ್ನೇಹಿತ ನಟ ರಾಕೇಶ್ ಅಡಿಗ ಅವರು ಭೇಟಿಯಾಗಿ, ನೋವಿನಲ್ಲಿರುವ ಸ್ನೇಹಿತೆಗೆ ದೈರ್ಯ ತುಂಬಿದ್ದಾರೆ.ನಂತರ ಮಾಧ್ಯಮದವರ ಜತೆ ಮಾತನಾಡಿದ ರಾಕೇಶ್ ಅವರು, ಸೋನು ತುಂಬಾ ನೋವಿನಲ್ಲಿದ್ದಾಳೆ. ಅವಳ ಜತೆ ಮಾತನಾಡಿ ದೈರ್ಯತುಂಬಿದ್ದೇನೆ. ‘ಮಾಡದ ತಪ್ಪಿಗೆ ಜೈಲಿನಲ್ಲಿದ್ದೇನೆ. ನಾನು ಮಾಡಿದ ತಪ್ಪೇನು ಎಂದು ಗೊತ್ತಾಗ್ತಿಲ್ಲ’ ಎಂದು ಸೋನು ಕಣ್ಣೀರು ಹಾಕಿದಳು. ಈ ಪ್ರಕರಣ ಇಷ್ಟೊಂದು ಗಂಭೀರವಾಗುತ್ತದೆ ಎಂದು ತಿಳಿದಿರಲಿಲ್ಲ. ಇದರಲ್ಲಿ ಸೋನುದು ಏನು ತಪ್ಪಿಲ್ಲ. ಯಾಕೆಂದರೆ […]