ನಾನು ಮತ್ತು ಗುಂಡ ೨ ಟೈಟಲ್ ಟೀಸರ್ ದ್ರುವಸರ್ಜಾ ಬಿಡುಗಡೆ
ನಾಯಿ ಹಾಗೂ ಅದರ ಮಾಲೀಕ ಗೋವಿಂದೇಗೌಡನ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ‘ನಾನು ಮತ್ತು ಗುಂಡ’ ಚಿತ್ರವು ಎರಡು ವರ್ಷಗಳ ಹಿಂದೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು. ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ಅಭಿನಯಿಸಿದ್ದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾಗಿ “ನಾನು ಮತ್ತು ಗುಂಡ -2” ತಯಾರಾಗುತ್ತಿದ್ದು, ಚಿತ್ರದಲ್ಲಿ ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ.ಮೊದಲ ಭಾಗದಲ್ಲಿ ಮರಣ ಹೊಂದಿದ್ದ ಮಾಲೀಕನಿಗೆ ಇಲ್ಲಿ ಪುನರ್ಜನ್ಮವಾಗಿರುತ್ತದೆ. ಇದನ್ನೂ ಓದಿ ಬಹು […]