‘ರಿಷಾ ಗೌಡ’ ನಟನೆಗಿಳಿದ ರಾಷ್ಟಮಟ್ಟದ ಓಟಗಾರ್ತಿ
• ಒಂದರ ಹಿಂದೆ ಒಂದರಂತೆ ತೆರೆ ಕಾಣಲಿರುವ ಕೊಡಗಿನ ಹುಡುಗಿಯ ಮೂರು ಚಿತ್ರಗಳು, ಚಂದನವನದಲ್ಲಿ ಅನೇಕ ಕೊಡಗಿನ ಸುಂದರಿಯರು ಮಿಂಚಿದ್ದಾರೆ, ಮಿಂಚುತ್ತಿದ್ದಾರೆ ಮತ್ತು ಮಿಂಚಲಿದ್ದಾರೆ. ಯಾಕೆಂದರೇ ಕೊಡಗಿನ ಸೊಬಗೆ ಅಂತಹದ್ದು. ಕ್ರೀಡೆಗೆ ವೀರತ್ವಕ್ಕೆ, ಸೌಂದರ್ಯಕ್ಕೆ ಮತ್ತು ಪ್ರತಿಭೆಗಳಿಗೆ ¨ರವಿಲ್ಲದ ನಾಡು ಕೊಡಗು. ಸದಾ ನಾಡಿಗೆ ಮತ್ತು ದೇಶದ ವಿವಿಧ ರಂಗಗಳಿಗೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ನಮ್ಮ ಕನ್ನಡ ನಾಡಿನ ಜೀವಜಲವಾದ ಕಾವೇರಿ ತಾಯಿಯ ಹುಟ್ಟೂರು ಕೊಡಗು. ಇದೇ ನಾಡಿನಲ್ಲಿ ಹುಟ್ಟಿ ಬೆಳದ ಮತ್ತೊಂದು […]