Sandalwood Leading OnlineMedia

ನಾಳೆಯಿಂದ ಚಿತ್ರಮಂದಿರಗಳಲ್ಲಿ `ಒಂದು ರಾಬರಿ ಕಥೆ’ ರಿವೀಲ್!

ಕನ್ನಡ ನೆಲದಲ್ಲಿ ವಿಭಿನ್ನ ಕಥಾಹಂದರ ಹೊಂದಿದ ಹಲವಾರು ಚಲನಚಿತ್ರಗಳು ಸದ್ದು ಮಾಡುತ್ತಿದ್ದು, ಪ್ರೇಕ್ಷಕ ಕಂಟೆAಟ್&ಕ್ವಾಲಿಟಿ ಇರುವ ಚಿತ್ರಗಳನ್ನು ಯಾವ ಸ್ಟಾರ್ ಕಾಸ್ಟ್ ಇಲ್ಲದೇ ಹೋದರೂ ಮುಗಿಬಿದ್ದು ನೋಡುತ್ತಿದ್ದಾನೆ. ಅಂಥಹ ಚಿತ್ರಗಳ ಸಾಲಿಗೆ ಸೇರಬಹುದಾದ ಡಿಫೆರೆಂಟ್ ಟೈಟಲ್‌ನ ಚಿತ್ರ `ಒಂದು ರಾಬರಿ ಕಥೆ’. ಬೇಲೂರಿನ ಸಂತೋಷ್ ನಾಗನಹಳ್ಳಿ ಅವರು ಸಮನ್ವಿ ಕ್ರಿಯೇಶನ್ಸ್ ಬೇಲೂರು ಬ್ಯಾನರ್‌ನಡಿಯಲ್ಲಿ  ನಿರ್ಮಿಸಿರುವ ಪ್ರಥಮ ಚಿತ್ರ `ಒಂದು ರಾಬರಿ ಕಥೆ’.

Exclusive Photos: `ಬ್ಯಾಡ್ ಮ್ಯಾನರ್ಸ್’ ಚಿತ್ರತಂಡದಿ0ದ ಗುಡ್ ನ್ಯೂಸ್!

ಚಿತ್ರತಂಡ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪೊಡಕ್ಷನ್ ಕೆಲಸದಲ್ಲಿ ತೊಡಗಿರುವ ಚಿತ್ರತಂಡ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಂಥ ಪಕ್ಕಾ ಮಾಸ್ ಕಮರ್ಷಿಯಲ್ ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್, ಸಸ್ಪೆನ್ಸ್-ಥ್ರಿಲ್ಲರ್, ಸೆಂಟಿಮೆAಟ್ ಕಥಾಹಂದರ ಒಳಗೊಂಡಿರುವ `ಒಂದು ರಾಬರಿ ಕಥೆ ಚಿತ್ರಕ್ಕೆ ಗೋಪಾಲ್ ಹಳ್ಳೇರ  ಹೊನ್ನಾವರ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.

 

 

ಬಹುತಾರಾಗಣವನ್ನು ಒಳಗೊಂಡ ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ್ ಗೌಡ ನಾಯಕನಾಗಿ ನಟಿಸಿದರೆ, ಹೊಸ ಪ್ರತಿಭೆ ರಿಷ್ವಿ ಭಟ್ ಅವರು ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ, ನಿರ್ಮಾಪಕ ಬೇಲೂರಿನ ಸಂತೋಷ್ ನಾಗನಹಳ್ಳಿ ಅವರು ಚಿತ್ರದ ನಿರ್ಮಾಣದ ಜೊತೆಗೆ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸುಂದರ್‌ರಾಜ್, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ಶಿವರಾಜ್ ಕೆ.ಆರ್.ಪೇಟೆ, ತಬಲಾನಾಣಿ, ಜಹಾಂಗೀರ್, ಗಿರೀಶ್ ಶಿವಣ್ಣ ಮೂಗ್ ಸುರೇಶ್, ಎಂ.ಕೆ.ಮಠ, ನವೀನ್ ಪಡೀಲ್, ಸಂಜು ಬಸಯ್ಯ ಮತ್ತು ಕಿರುತೆರೆ ಹಾಗೂ ಮಜಾ ಟಾಕೀಸ್‌ನ ಹಲವಾರು ಕಲಾವಿದರು.. ಹೀಗೆ ಈ ಚಿತ್ರದಲ್ಲಿ ಕಲಾವಿದರ ದಂಡೇ ಇದೆ.

 

ಜನಮನ ಗೆದ್ದ’ಕಬ್ಜ’ ಟ್ರೇಲರ್​:  ಆರ್.ಚಂದ್ರು ಮ್ಯಾಜಿಕ್‌ಗೆ ಬಾಲಿವುಡ್ ಫಿದಾ

 

ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ ಮತ್ತು ಸಿಂದನೂರಿನ ನವಕುಂಡದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಪ್ರಕಾಶ್.ಜಿ  ಅವರ ಸಂಭಾಷಣೆ, ಸಂತೋಷ್ ನಾಗೇನಹಳ್ಳಿ, ಪ್ರಕಾಶ್ ಅವರ ಸಾಹಿತ್ಯ, ಡಿರೆಂಟ್ ಡ್ಯಾನಿ ಅವರ ಸಾಹಸ, ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜೀವ ರೆಡ್ಡಿ ಅವರ ಸಂಕಲನ, ಶ್ರೀವತ್ಸ ಅವರ ಸಂಗೀತ ಸಂಯೋಜನೆ ಮತ್ತು ಚಾಮರಾಜ್, ರೋಹಿತ್ ಅರುಣ್ ಅವರ ಕೊರಿಯೋಗ್ರಫಿ ಈ ಚಿತ್ರಕ್ಕಿದೆ. ಈ ಬಹುನಿರೀಕ್ಷಿತ ಚಿತ್ರ ನಾಳೆ ರಾಜ್ಯಾಂದ್ಯAತ ರಿಲೀಸ್ ಆಗಲಿದೆ.

 

Share this post:

Related Posts

To Subscribe to our News Letter.

Translate »