‘ಒನ್ ಲವ್ ಟು ಸ್ಟೋರಿ’ ಖ್ಯಾತಿಯ ವಸಿಷ್ಠ ಬಂಟನೂರು ಸಾರಥ್ಯದ 1975 ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 24ರಂದು ತೆರೆಕಂಡ ಕ್ರೈಂ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಮೊದಲ ವಾರ ಯಶಸ್ವಿಯಾಗಿ ಪ್ರತಿಕ್ರಿಯೆ ಪಡೆದುಕೊಂಡಿದ್ದು ಇದೀಗ ಎರಡನೇ ವಾರದತ್ತ ಹೆಜ್ಜೆ ಇಟ್ಟಿದೆ.
*25 ದಿನದತ್ತ ‘ಹೊಂದಿಸಿ ಬರೆಯಿರಿ’ ಸಕ್ಸಸ್ ಫುಲ್ ಪಯಣ – ಸಂಭ್ರಮ ಹಂಚಿಕೊಂಡ ಚಿತ್ರತಂಡ*
ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ‘1975’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಜೈ ಶೆಟ್ಟಿ, ಮಾನಸ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದಾರೆ. ಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ಕೊಲೆಯ ಸುತ್ತ ಹೆಣೆದ ಕಥಾಹಂದರ 1975. ವಿದ್ಯಾರ್ಥಿಗಳ ಕೊಲೆಗೆ ಕಾರಣವೇನು, ಯಾರು ಕೊಲೆ ಮಾಡಿದ್ದು ಎಂದು ತನಿಖೆಯ ಸುತ್ತ ಸಸ್ಪೆನ್ಸ್ ಹಾದಿಯಲ್ಲಿ ಸಾಗುವ ಕಥೆ ರೋಚಕವಾಗಿ ತೆರೆ ಮೇಲೆ ಮೂಡಿಬಂದಿದೆ. ಕೊಲೆಯ ತನಿಖೆ ಜೊತೆಗೆ ಮಾದಕ ಜಾಲದ ಬಗ್ಗೆಯೂ ಹಲವು ವಿಚಾರಗಳನ್ನು ಹೇಳಿದ್ದು, ಅಷ್ಟೇ ರೋಚಕವಾಗಿ ತೆರೆ ಮೇಲೆ ಕಟ್ಟಿ ಕೊಡಲಾಗಿದೆ. ಪ್ರೇಕ್ಷಕರೂ ಕೂಡ ಸಿನಿಮಾ ನೋಡಿ ಉತ್ತಮ ಪ್ರತಿಕ್ರಿಯೆ ನೀಡುತ್ತಿರೋದು ಸಿನಿಮಾ ತಂಡದ ಸಂತಸ ಹೆಚ್ಚಿಸಿದೆ.
*ರಂಗಭೂಮಿ ಕಲಾವಿದರ ನವಿರಾದ ಪ್ರೇಮಕಥೆ ‘ಒಂದು ಸನ್ನೆ ಒಂದು ಮಾತು’ – ಸಂತೋಷ್ ಬಾಗಲಕೋಟಿ ನಿರ್ದೇಶನದ ಸಿನಿಮಾ*
ನಾಯಕ ಜೈ ಶೆಟ್ಟಿ ಹಾಗೂ ನಾಯಕಿ ಮಾನಸ ಮೊದಲ ಸಿನಿಮಾವಾದರೂ ಅಚ್ಚುಕಟ್ಟಾದ ನಟನೆ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗಮನ ಸೆಳೆದಿದ್ದು, ವೆಂಕಟೇಶ್ ಪ್ರಸಾದ್, ಭೂಷಣ್ ಗೌಡ, ಮುರಳಿ, ಉಮೇಶ್, ಮಧು, ಸಿಂಧು ಲೋಕನಾಥ್ ತಾರಾಗಣ ಸಿನಿಮಾದಲ್ಲಿದೆ. ಶಿವಪ್ರಸಾದ್, ಧನಂಜಯ್ ವರ್ಮಾ, ಸಂದೇಶ್ ಬಾಬಣ್ಣ ಮೂವರ ಸಂಗೀತ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ನಾಗೇಂದ್ರ ಅರಸ್ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ, ಪ್ರಸನ್ನ ಗುರಲಕೆರೆ ಛಾಯಾಗ್ರಹಣ ಚಿತ್ರಕ್ಕಿದೆ.