Sandalwood Leading OnlineMedia

 ‘1975’ ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ರಿಲೀಸ್ – ಫೆಬ್ರವರಿ 24ಕ್ಕೆ ಸಿನಿಮಾ ತೆರೆಗೆ

‘ಒನ್ ಲವ್ ಟು ಸ್ಟೋರಿ’ ಸಿನಿಮಾ ಮೂಲಕ ಪರಿಚಿತರಾಗಿರುವ ವಸಿಷ್ಠ ಬಂಟನೂರು ಸಾರಥ್ಯದ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ‘1975’. ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ನಿರ್ಮಾಣ ಮಾಡಿರುವ ಈ ಚಿತ್ರ ಫೆಬ್ರವರಿ 24ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಜೈ ಶೆಟ್ಟಿ, ಮಾನಸ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದಾರೆ. ಹಾಡುಗಳ ಮೂಲಕ ಗಮನ ಸೆಳೆದ ಚಿತ್ರತಂಡ ಕುತೂಹಲ ಭರಿತ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ. ನಿರ್ದೇಶಕ ವಸಿಷ್ಠ ಬಂಟನೂರು ಮಾತನಾಡಿ ನನ್ನ ಕನಸಿಗೆ ಭರವಸೆಯಾಗಿ ಅವಕಾಶ ನೀಡಿದ್ದು ನಿರ್ಮಾಪಕರು ಅವರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಉಪ ಕಥೆಗಳು ಇದೆ. ‘1975’ ಅಂದ್ರೆ ನಂಬರಾ..? ವರ್ಷನಾ..? ಗಾಡಿ ನಂಬರಾ..? ಅನ್ನೋದಕ್ಕೆ ಸಿನಿಮಾದಲ್ಲಿ ಉತ್ತರ ಸಿಗಲಿದೆ. ಈ ಚಿತ್ರದಲ್ಲಿ ತಂದೆ ಮಗಳ ಅನುಬಂಧವಿದೆ, ಫುಡ್ ಡೆಲಿವರಿ ಬಾಯ್ ನೋವಿನ ಕಥೆಯಿದೆ, ಕಾಲೇಜ್ ಲವ್ ಸ್ಟೋರಿ ಇದೆ ಹೀಗೆ ಎಲ್ಲಾ ಎಲಿಮೆಂಟ್ ಗಳು ಚಿತ್ರದಲ್ಲಿದೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿ ಎಂದು ಮಾಹಿತಿ ಹಂಚಿಕೊಂಡ್ರು.

‘ಮೇರಿ’ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ – ಫೆಬ್ರವರಿ 24 ಅಲ್ಲ ಮಾರ್ಚ್ 10ಕ್ಕೆ ‘ಮೇರಿ’ ರಿಲೀಸ್

ನಾಯಕ ನಟ ಜೈ ಶೆಟ್ಟಿ ಮಾತನಾಡಿ ‘1975’ ನನ್ನ ಮೊದಲ ಸಿನಿಮಾ. ನಟನಾಗಬೇಕು ಎಂದು ತುಂಬಾ ಕನಸಿಟ್ಟುಕೊಂಡು ಕುಂದಾಪುರದ ಪುಟ್ಟ ಹಳ್ಳಿಯಿಂದ ಬಂದವನು ನಾನು. ಚಿತ್ರದಲ್ಲಿ ನನ್ನದು ಫುಡ್ ಡೆಲಿವರಿ ಬಾಯ್ ಪಾತ್ರ. ಆತ ಹೇಗಿರುತ್ತಾನೆ, ಆತನ ಕಷ್ಟ ಸುಖಗಳೇನು, ಯಾರಿಂದ ಹೊಗಳಿಸಿಕೊಳ್ಳುತ್ತಾನೆ, ಬೈಯಿಸಿಕೊಳ್ಳುತ್ತಾನೆ ಎನ್ನೋದನ್ನು ಫುಡ್ ಡೆಲಿವರಿ ಬಾಯ್ ಗಳನ್ನು ಭೇಟಿ ಮಾಡಿ ತಿಳಿದುಕೊಂಡು ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದೇನೆ. ಚಿತ್ರದಲ್ಲಿ ನಾನು ಹಾಗೂ ನಾಯಕಿ ಮಾತ್ರ ಹೊಸಬರು, ಇಡೀ ಚಿತ್ರತಂಡದಲ್ಲಿ ಅನುಭವಿ ಕಲಾವಿದರಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ತಿಳಿಸಿದ್ರು. ನಾಯಕಿ ಮಾನಸ ಮಾತನಾಡಿ ಚಿತ್ರದಲ್ಲಿ ಮಧ್ಯಮ ವರ್ಗದ ಕ್ರಿಶ್ಚಿಯನ್ ಹುಡುಗಿ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದಲ್ಲಿ ಅಪ್ಪನ ಮುದ್ದಿನ ಮಗಳು ನಾನು, ಲವ್ ಸ್ಟೋರಿ ಜೊತೆಗೆ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಕೂಡ ಸಿನಿಮಾದಲ್ಲಿದೆ. ಅಪ್ಪ-ಮಗಳ ಬಾಂದವ್ಯವನ್ನು ತುಂಬಾ ಮುದ್ದಾಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಎಲ್ಲರೂ ಫೆಬ್ರವರಿ 24ರಂದು ಸಿನಿಮಾ ನೋಡಿ ಪ್ರೋತ್ಸಾಹ ನೀಡಿ ಎಂದು ತಿಳಿಸಿದ್ರು.

 

ಶಿಡ್ಲಘಟ್ಟದಲ್ಲಿ ಫೆಬ್ರವರಿ 26 ರಂದು `ಕಬ್ಜ’ ಮೇನಿಯಾ!

ಚಕ್ರವರ್ತಿ ಚಂದ್ರಚೂಡ್, ವೆಂಕಟೇಶ್ ಪ್ರಸಾದ್, ಭೂಷಣ್ ಗೌಡ, ಮುರಳಿ, ಉಮೇಶ್, ಮಧು, ಸಿಂಧು ಲೋಕನಾಥ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶಿವಪ್ರಸಾದ್, ಧನಂಜಯ್ ವರ್ಮಾ, ಸಂದೇಶ್ ಬಾಬಣ್ಣ ಮೂವರ ಸಂಗೀತ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ನಾಗೇಂದ್ರ ಅರಸ್ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ, ಪ್ರಸನ್ನ ಗುರಲಕೆರೆ ಛಾಯಾಗ್ರಹಣ ಚಿತ್ರಕ್ಕಿದೆ.

 

 

Share this post:

Related Posts

To Subscribe to our News Letter.

Translate »