ಮೊಗ್ಗಿನ ಮನಸು, ಈ ಸಿನಿಮಾವನ್ನು ಯಾರೂ ಮರೆಯಲು ಸಾಧ್ಯವಾಗುವುದಿಲ್ಲ. ನಾಲ್ಕು ಜನ ಹುಡುಗಿಯರ ಜೀವನದ ಕಥೆ ಈ ಸಿನಿಮಾ. ಕಾಲೇಜು ದಿನಗಳಲ್ಲಿ ಮನಸಿನ ಭಾವನೆಗಳು ಹೇಗಿರಲಿದೆ, ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದನ್ನ ಈ ಸಿನಿಮಾ ತೋರಿಸಿದೆ. ಇದರಲ್ಲಿ ಯಶ್ ಹಾಗೂ ರಾಧಿಕಾ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಮೂಲಕವೇ ಅವರಿಬ್ಬರ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಇದೀಗ ಜುಲೈ 19ಕ್ಕೆ ಈ ಸಿನಿಮಾ ಬಿಡುಗಡೆಯಾಗಿ 14 ವರ್ಷವಾಗಿದೆ. ಈ ಸಿಹಿ ನೆನಪಿಗಾಗಿ ನಟಿ ರಾಧಿಕಾ ಪಂಡಿತ್ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ.
https://www.instagram.com/p/CgKKOY8P4g9/?hl=en
ರಾಧಿಕಾ ತಮ್ಮ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ವಿಶೇಷ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳಲ್ಲಿ ನೀವು ನೋಡುತ್ತಿರುವ ಈ ಇಬ್ಬರು 14 ವರ್ಷಗಳ ಹಿಂದೆ ಈ ಚಿತ್ರದ ಮೂಲಕ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು. ವೈಯಕ್ತಿಕವಾಗಿ, ಈ ಚಿತ್ರ ನನಗೆ ತುಂಬಾ ನೀಡಿದೆ. ಫಿಲ್ಮ್‌ಫೇರ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ಜೀವನ ಸಂಗಾತಿ ಎಲ್ಲವನ್ನು ನೀಡಿದೆ. ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಾಗಲಿಲ್ಲ.
ಇ.ಕೆ ಸರ್, ಗಂಗಾಧರ್ ಸರ್, ಚಂದ್ರು ಸರ್, ಮನೋ ಸರ್ ಮತ್ತು ವಿಶೇಷವಾಗಿ ಶಶಾಂಕ್ ಸರ್ ನಮ್ಮ ಮೇಲೆ ನಂಬಿಕೆ ಇಟ್ಟು ಈ ಸುಂದರ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ‘ಮೊಗ್ಗಿನ ಮನಸು’ ಸದಾ ವಿಶೇಷವಾಗಿರುತ್ತದೆ ಎಂದು ಬರೆದು ಯಶ್ ಮತ್ತು ಅವರ ಹಳೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
2008ರ ಜುಲೈನಲ್ಲಿ ತೆರೆಕಂಡ ಮೊಗ್ಗಿನ ಮನಸ್ಸು ಸಿನಿಮಾಗೆ ಈಗ 14 ವರ್ಷಗಳು. ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಮೊಗ್ಗಿನ ಮನಸು ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ಮೊಗ್ಗಿನ ಮನಸು ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಯಶ್ ಹಾಗೂ ರಾಧಿಕಾ ಅವರ ಸಿನಿ ಜೀವನಕ್ಕೆ ಸಹ 14 ವರ್ಷ.
ಮೊಗ್ಗಿನ ಮನಸ್ಸು ಸಿನಿಮಾಗೆ ಐದು ವಿಭಾಗಗಳಲ್ಲಿ ಫಿಲಂ ಫೇರ್ ಪ್ರಶಸ್ತಿ ಲಭಿಸಿತ್ತು. ಯಶ್ ಅವರಿಗೆ ಅತ್ಯುತ್ತಮ ಪೋಷಕ ನಟ, ರಾಧಿಕಾ ಅವರಿಗೆ ಅತ್ಯುತ್ತಮ ಬನಟಿ, ಶುಭಾ ಪೂಂಜಾ ಅವರಿಗೆ ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತ್ತು. ಅತ್ಯುತ್ತಮ ನಟಿ ವಿಭಾಗದಲ್ಲಿ 2008-09ನೇ ಸಾಲಿನಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸಹ ರಾಧಿಕಾ ಪಂಡಿತ್ ಅವರಿಗೆ ಲಭಿಸಿತ್ತು.
ಯಶ್ ಹಾಗೂ ರಾಧಿಕಾ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ನವೀನ್ ಗೌಡ ಆಗಿದ್ದ ಯಶ್ ಈಗ ಸ್ಯಾಂಡಲ್ವುಡ್ ರಾಕಿ ಭಾಯ್. ಇನ್ನು ತೆರೆಯ ಮೇಲೆ ಮೋಡಿ ಮಾಡಿದ್ದ ಜೋಡಿ ಈಗ ಮದುವೆಯಾಗಿ ಇಬ್ಬರ ಮಕ್ಕಳ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ.