Rating
ಚಿತ್ರ : 13 (Part-1)
ನಿರ್ದೇಶನ : ಕೆ. ನರೇಂದ್ರ ಬಾಬು
ನಿರ್ಮಾಣ : ಸಂಪತ್ ಮತ್ತು ಮಂಜುನಾಥ್
ತಾರಾಗಣ : ರಾಘವೇಂದ್ರ ರಾಜಕುಮಾರ್, ಶೃತಿ, ದಿಲೀಪ್ ಪೈ, ಪ್ರಮೋದ್ ಶೆಟ್ಟಿ, ಸೂರಜ್, ಲೋಕೇಶ್ ಮುಂತಾದವರು.
ಇದನ್ನೂ ಓದಿ: *ಹೊಸಬರ ’ಲವ್’ ಸಿನಿಮಾದ ಟ್ರೇಲರ್ ರಿಲೀಸ್..ಸಖತ್ ಪ್ರಾಮಿಸಿಂಗ್ ಆಗಿ ಟ್ರೇಲರ್…ಅಕ್ಟೋಬರ್ 6ಕ್ಕೆ ತೆರೆಯಲ್ಲಿ ಲವ್ ಮ್ಯಾಜಿಕ್
`13’ ಸಿನಿಮಾ ತನ್ನ ಟೈಟಲ್‌ನಿಂದಲೇ ಕುತೂಹಲ ಹುಟ್ಟಿಸಿ, trailer ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿದ ಚಿತ್ರ. `13’ ಸಿನಿಮಾ ನೋಡುಗನನ್ನು ತನ್ನ ಕಥೆಯಿಂದಲೇ ಹಿಡಿದಿಡುವ ಸಾಮರ್ಥ್ಯ ಹೊಂದಿರುವ ಚಿತ್ರ, ಹಾಗಿದ್ದರೆ `13’ ಒಳಗಿನ ಅಚ್ಚರಿಗಳೇನು ತಿಳಿದುಕೊಳ್ಳೋಣ ಬನ್ನಿ. ಮೋಹನ್ (ರಾಘವೇಂದ್ರ ರಾಜಕುಮಾರ್) ಮತ್ತು ಸಾಹಿರ ಭಾನು (ಶೃತಿ) ಇಬ್ಬರ ನಡುವೆ ಬಾನೆತ್ತರದ ಪ್ರೀತಿ, ಇದೇ ಕಾರಣಕ್ಕೆ ಧರ್ಮವನ್ನು ಮೀರಿ, ಸಮಾಜ-ಮನೆಯವರನ್ನು ವಿರೋಧಿಸಿ ಬರೋಬ್ಬರಿ ಒಂದು ದಶಕಗಳ ದಾಂಪತ್ಯ ಜೀವನವನ್ನು ನಡೆಸಿರುತ್ತಾರೆ. ಗುಜರಿ ಅಂಗಡಿ ಇಟ್ಟುಕೊಂಡು `ಹೊಸತನ’ದ ಬದುಕನ್ನು ನಿರೀಕ್ಷಿಸುವ ಮೋಹನ್ ಒಂದು ಕಡೆಯಾದರೆ, ಇನ್ನೊಂದು ಕಡೆ ಟೀ ಅಂಗಡಿ ನಡೆಸುತ್ತಿರುತ್ತಾಳೆ ಮೋಹನನ ಮೋಹನಾಂಗಿ ಸಹಿರಾ ಬಾನು. ‘ರಾಮ್-ರಹೀಮ್’ ಎಂಬ ಇವರಿಬ್ಬರ ಅಂಗಡಿಗಳ ಹೇಸರೇ ಚಿತ್ರದ ಆಶಯವನ್ನು ತಿಳಿಸುತ್ತದೆ. ಗುಜಿರಿ-ಟೀ ಜಗತ್ತಿಗೆ ಒಲವಿನ ಲೇಪನ ಕೊಟ್ಟು ನೆಮದಿಯಿಂದ ಬಾಳುತ್ತಿದ್ದ ಈ ಇಬ್ಬರು ಜೋಡಿಗಳ ಮಧ್ಯೆ ಅದೆಲ್ಲಿಂದಲೋ ಕೋಟಿಗಟ್ಟಲೆ ದುಡ್ಡು ಒಕ್ಕರಿಸಿ ಬಿಡುತ್ತದೆ. ಅಲ್ಲಿಂದ ಚಿತ್ರ ತೆರೆದುಕೊಳ್ಳುತ್ತದೆ. ಹಾಗಿದ್ದರೆ ಆ ಸಿಕ್ಕಿದ್ದಾದರೂ ಎಲ್ಲಿ? ಆ ನಗದಿನಿಂದಾಗಿ ಮೋಹನ್-ಸಹಿರಾ ತಮ್ಮ ಬದುಕಿನಲ್ಲಿ ನಗು ಹೇಗೆ ಕಳೆದುಕೊಳ್ಳುತ್ತಾರೆ? ಧಾರ್ಮಿಕ ಬಾಂಧ್ಯವದ ಅಸಲಿಯತ್ತೇನು? ಎಂಬ ಪ್ರಶ್ನೆಗಳಿಗೆ ತೆರೆಯ ಮೇಲೆ ಸಮರ್ಥವಾಗಿ ಉತ್ತರ ಕೊಡುವ ನಿರ್ದೇಶಕ ನರೇಂದ್ರ ಬಾಬು, ಚಿತ್ರದ ಕೊನೆಯಲ್ಲಿ ‘ಭಾಗ 2’ ಬಗ್ಗೆ ಹಿಂಟ್ ಕೊಟ್ಟು ಅಚ್ಚರಿ ಮೂಡಿಸುತ್ತಾರೆ.
ಇದನ್ನೂ ಓದಿ: ಡಾ.ವಿಷ್ಣುವರ್ಧನ್ ಪರಮಾಪ್ತ ವಿ.ಆರ್.ಭಾಸ್ಕರ್ ಅವರ ಬದುಕಿನ ಕರಾಳ ದಿನಗಳು ಹೇಗಿದ್ದವು ಗೊತ್ತಾ? ಹೃದಯ ಕಲಕುವ ಘಟನೆ!
ಧರ್ಮದ ಹೆಸರಿನಲ್ಲಿ ಅಧರ್ಮ ತಾಂಡವವಾಡುತ್ತಿರುವ ಈ ಕಾಲ ಮಾನದಲ್ಲಿ. ಧರ್ಮವನ್ನೂ ಮೀರಿದ ಎರಡು ಮನಸುಗಳ ಪ್ರೇಮ-ಪ್ರಣಯ-ಬದುಕಿನ ಬಗ್ಗೆ ನವಿರಾಗಿ ಹೇಳುವ ಸಿನಿಮಾ `13’. ಜೊತೆಗೆ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಚಿತ್ರವನ್ನು ಸಲೀಸಾಗಿ ನೋಡಿಕೊಂಡು ಹೋಗುವಂತೆ ಮಾಡುತ್ತದೆ. ಸಿನಿಮಾದ ಕಥೆಗೆ ಸಾಕಷ್ಟು ಶಕ್ತಿ ಇದ್ದು, ನಿರ್ದೇಶಕರು ಚಿತ್ರಕಥೆಯ ಬಗ್ಗೆ ಇನ್ನಷ್ಟು ತಲೆಕೆಡಿಸಿಕೊಂಡಿದ್ದರೆ, `13’ ನೋಡುಗನಿಗೆ ಇನ್ನೂ ಹೆಚ್ಚಿನ ಚೇತೋಹಾರಿ ಅನುಭವ ನೀಡುತ್ತಿತ್ತು. ಅಲ್ಲಲ್ಲಿ twist & turnsಳಿಂದ ತನ್ನೊಳಗೆ ಸೆಳೆದುಕೊಳ್ಳುವ ಚಿತ್ರ, ಕೆಲವೊಂದು ಕಡೆ twist & turns ಹಿಂದಿನ ಲಾಜಿಕ್‌ಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಇನ್ನು, ಇಡೀ ಚಿತ್ರದ ಶಕ್ತಿ ಚಿತ್ರದ ಸಂಕಲನ. ಸಂಕಲನಕಾರರಾದ ಕೆ.ಗಿರೀಶ್ ಕುಮಾರ್ ಅವರ `ಕತ್ತರಿ’ ಪ್ರಯೋಗ, ನಿರ್ದೇಶಕ ನರೇಂದ್ರ ಬಾಬು ಅವರ ಉದ್ದೇಶವನ್ನು ಸಮರ್ಥವಾಗಿ ಪೂರೈಸಿದೆ. ಸಂಕಲನದಲ್ಲಿನ ಜಾಣತನ ಸಿನಿಮಾವನ್ನು ಸಾಕಷ್ಟು ಇಂಟ್ರೆಸ್ಟಿAಗ್ ಆಗಿಸಿದೆ. ಶೋಗನ್ ಬಾಬು ಸಂಗೀತ ಕಥೆಗೆ ಪೂರಕವಾಗಿದ್ದು, ಅಜಯ್ ಮಂಜು ಛಾಯಾಗ್ರಹಣದಲ್ಲಿನ ಕತ್ತಲೆ-ಬೆಳಕಿನಾಟ ಚೆನ್ನಾಗಿದೆ.
ಇದನ್ನೂ ಓದಿ: ಸಿನಿಮಾ ಜಾತ್ರೆ ಶುರು, ಗೆಲ್ಲೋ ಸೂಚನೆ ಕೊಡ್ತಾ `ಸಪ್ತ ಸಾಗರಾಚೆ ಎಲ್ಲೋ – ಸೈಡ್ `ಬಿ’!?
`ನಮ್ಮದು ಅನ್ನುವುದು ನಮಗೆ ದಕ್ಕೇ ದಕ್ಕುತ್ತದೆ, ನಮ್ಮದಲ್ಲದ್ದು ಯಾವತ್ತಿಗೂ ನಮ್ಮದಲ್ಲ’ ಅನ್ನುವ ಮೋಹನ್ ಪಾತ್ರದಲ್ಲಿ ರಾಘಣ್ಣ ಮನ ಮೋಹಕ ಅಭಿನಯ ನೀಡಿದ್ದಾರೆ. `ನಮ್ಮದಲ್ಲದನ್ನು ಹೇಗಾದರೂ ನಮ್ಮದಾಗಿಸಿಕೊಳ್ಳಬೇಕು’ ಎನ್ನುವ ಸಾಹಿರಾ ಭಾನು ಆಗಿ ಶೃತಿ ಅಭಿನಯ ಎಂದಿನAತೆ ಸೂಪರ್. ವಿಭಿನ್ನ ಪಾತ್ರದ ಮೂಲಕ ಡಿಫೆರೆಂಟ್ ಸ್ಲಾಂಗ್‌ನಲ್ಲಿ ಡೈಲಾಗ್ ಹೊಡೆಯುವ ಶೃತಿಯವರ ಪಾತ್ರ ತೆರೆಯ ಮೇಲೆ ನೋಡುವುದೇ ಚಂದ. ಹಣ-ಹೆಣದ ಹಿಂದೆ ಬೇತಾಳನಂತೆ ಬೀಳುವ ಸಬ್ ಇನ್ಸ್ಪೆಕ್ಟರ್ ಸಾವಂತ್ ಕುಮಾರ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಅದ್ಭುತವಾಗಿ ನಟಿಸಿ, ಇನ್ನುಮುಂದೆ ಪೋಲೀಸ್ ಪಾತ್ರಗಳೇ ತಮ್ಮನ್ನು ಅರಸಿಕೊಂಡು ಬರುವ ಅಪಾಯವನ್ನು ತಾವೇ ಮೈ ಮೇಲೆ ಎಳೆದುಕೊಂಡಿದ್ದಾರೆ. ಇನ್ನು, ಕಾನ್ಸ್ಟೆಬಲ್ ಮೈಲಾರಿಯಾಗಿ ಲೋಕೇಶ್, ಕುಡುಕ ಸಿದ್ದನ ಪಾತ್ರದಲ್ಲಿ ಸೂರಜ್ ಪಾತ್ರವನ್ನು ನಿರ್ದೇಶಕರು ಕಥೆಗೆ ಹೊಂದಿಕೊAಡೇ ಸೃಷ್ಟಿಸಬಹುದಾಗಿತ್ತು. ಪಂಚರ್ ಶಾಪ್ ಮುಸ್ತಾಫ ಪಾತ್ರದಲ್ಲಿ ನಿರ್ದೇಶಕ ನರೇಂದ್ರ ಬಾಬು, ಜಾನ್ ಆಗಿ ದಿಲೀಪ್ ಪೈ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರಕ್ಕೆ ಕೆ.ಎಸ್.ಜಯಸಿಂಹ ಸಂಭಾಷಣೆ, lakshmi dinesh , ಸಂತೋಷ್ ನಾಯಕ್, ಕಿನ್ನಲ್ ರಾಜ್ ಸಾಹಿತ್ಯ ಮತ್ತು ಶ್ರುತಿಯವರಿಗೆ ವಸ್ತಾçಲಂಕರ ಮಾಡಿದ ಸಾಯಿದಾ ಸೇನಿಯಾ ಅವರ ಶ್ರಮ ಮತ್ತು ಪ್ರತಿಭೆ ಚಿತ್ರದಲ್ಲಿ ಎದ್ದು ಕಾಣುತ್ತದೆ. ಇನ್ನು, ಗುಜುರಿ ಅಂಗಡಿ ವ್ಯಾಪಾರ ಮಾಡುವ ಮೋಹನನ ವಸ್ತಾçಲಂಕರ ಮಾಡಿದ ಪುಣ್ಯತ್ಮಾನಿಗೆ ಒಂದು ದೊಡ್ಡ ನಮಸ್ಕಾರ, ಇಡೀ ಪ್ರಪಂದಲ್ಲಿ ಈ ರೀತಿಯ ಬಟ್ಟೆ ತೊಡುವ `ರಿಚ್’ ಗುಜುರಿ ಅಂಗಡಿಯವ ಸಿಗಲಾರ! ಕೊನೆಯಲ್ಲಿ, ಹಾಗಿದ್ದರೆ ಚಿತ್ರಕ್ಕೆ `13’ ಟೈಟಲ್ ಯಾಕೆ? ಉತ್ತರಕ್ಕೆ ಸಿನಿಮಾ ನೋಡಲೇ ಬೇಕು!
-ಬಿ.ನವೀನ್‌ಕೃಷ್ಣ.ಪುತ್ತೂರು