Sandalwood Leading OnlineMedia

13 ಮ್ಯಾಜಿಕ್ ನಂಬರ್ ಗೆ  ಸೆನ್ಸಾರ್ ಅಸ್ತು.

 

      ಪಲ್ಲಕ್ಕಿ ಖ್ಯಾತಿಯ ಕೆ.ನರೇಂದ್ರಬಾಬು ಅವರ ನಿರ್ದೇಶನದ, ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ, ಪ್ರಮೋದ್ ಶೆಟ್ಟಿ ಪ್ರಮುಖ  ಪಾತ್ರಗಳಲ್ಲಿ ಅಭಿನಯಿಸಿರುವ  ‘13’ ಚಿತ್ರ ಸದ್ಯದಲ್ಲೇ  ಬಿಡುಗಡೆಗೆ ಸಿದ್ದವಾಗಿದೆ.  ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಬರುವ  ಸೆಪ್ಟೆಂಬರ್ ನಲ್ಲಿ ಈ ಚಿತ್ರ ತೆರೆಕಾಣಲಿದೆ.

ಇನ್ನೂ ಓದಿ      ಒಂದು ಪ್ರೀತಿ ಕಥೆ ಹೇಳುವ ಇಬ್ಬರು ಪ್ರೇಮಿಗಳ ಮಾತಿನ ದೂರದ ಅಂತರ ಸಪ್ತ ಸಾಗರ;

  ಯುವಿ ಪ್ರೊಡಕ್ಷನ್ ಅಡಿಯಲ್ಲಿ ಕೆ. ಸಂಪತ್‌ ಕುಮಾರ್‌, ಹೆಚ್.ಎಸ್. ಮಂಜುನಾಥ್‌, ಮಂಜುನಾಥ ಗೌಡ ಹಾಗೂ ಸಿ.ಕೇಶವಮೂರ್ತಿ ಹೀಗೆ  ೪ ಜನ ಸೇರಿ ಈ ಚಿತ್ರವನ್ನು  ನಿರ್ಮಿಸಿದ್ದಾರೆ. ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವರೀತಿ ಕಷ್ಟಪಡುತ್ತಾರೆ ಎಂಬುದನ್ನು  ಥ್ರಿಲ್ಲರ್ ಕಥೆಯ ಮೂಲಕ  ಹೇಳುವ ಚಿತ್ರ ಇದಾಗಿದೆ.

   ಇನ್ನೂ ಓದಿ   *ವೇಗದಿಂದ ಸಾಗುತ್ತಿದೆ ಬಹು ತಾರಾಗಣದ “ದ ಜಡ್ಜ್ ಮೆಂಟ್” ಚಿತ್ರದ ಚಿತ್ರೀಕರಣ*

  ರಾಘವೇಂದ್ರ ರಾಜ್‌ಕುಮಾರ್‌ ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಮತ್ತು  ಟೀ ಅಂಗಡಿ ನಡೆಸುವ ಸಾಯಿರಾಬಾನು  ಎಂಬ ಮುಸ್ಲಿಂ  ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕರು ಈ  ಚಿತ್ರಕಥೆಯನ್ನು ಹೆಣೆದಿದ್ದಾರೆ.ಪ್ರಮೋದ್ ಶೆಟ್ಟಿ ಅವರು  ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಮಂಜುನಾಥ್‌ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್‌ ಬಾಬು ಅವರ  ಸಂಗೀತ ಈ ಚಿತ್ರಕ್ಕಿದೆ.

Share this post:

Related Posts

To Subscribe to our News Letter.

Translate »