Left Ad
ಶೀಘ್ರದಲ್ಲೇ ತೆರೆಗೆ ಬರಲಿರುವ ‘ಕೆಡಿ’: ಧ್ರುವ ಸರ್ಜಾ–ಪ್ರೇಮ್ ತಂಡದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ - Chittara news
# Tags

ಶೀಘ್ರದಲ್ಲೇ ತೆರೆಗೆ ಬರಲಿರುವ ‘ಕೆಡಿ’: ಧ್ರುವ ಸರ್ಜಾ–ಪ್ರೇಮ್ ತಂಡದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯ, ಪ್ರೇಮ್ ನಿರ್ದೇಶನದ ಕೆಡಿ ಚಿತ್ರದ ಶೂಟಿಂಗ್ ಅಧಿಕೃತವಾಗಿ ಪೂರ್ಣಗೊಂಡಿದೆ. ಧ್ರುವ ಸರ್ಜಾ ತಾವು ತಂತ್ರಜ್ಞರೊಂದಿಗೆ ಶೂಟಿಂಗ್ ಸೆಟ್‌ನಿಂದಲೇ ವೀಡಿಯೋ ಮೂಲಕ ಈ ವಿಚಾರ ಹಂಚಿಕೊಂಡಿದ್ದು, ನಿರ್ದೇಶಕ ಪ್ರೇಮ್ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್ ಎಂಟ್ರಿಯನ್ನು ರಿವೀಲ್ ಮಾಡಿದ್ದ ತಂಡ, ಇದೀಗ “ಶೀಘ್ರದಲ್ಲೇ ತೆರೆಗೆ” ಎಂಬ ಘೋಷಣೆಯ ಮೂಲಕ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಡಿಸೆಂಬರ್‌ನಲ್ಲಿ ಬಿಡುಗಡೆಯ ಸಾಧ್ಯತೆ ಇರುವ ಈ ಸಿನಿಮಾ, ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಸರತಿಯಾಗಿ ನಿಂತಿರುವ ದೊಡ್ಡ ಸ್ಟಾರ್ ಸಿನಿಮಾಗಳ ನಡುವೆ ತನ್ನದೇ ಆದ ಸ್ಥಾನವನ್ನು ಪಡೆಯಬಹುದೇ ಎಂಬ ಕುತೂಹಲವನ್ನು ಹುಟ್ಟಿಸಿದೆ.

Spread the love
Translate »
Right Ad