ತವರು ಮನೆಯಲ್ಲಿ ಕಷ್ಟವಿದೆ ಎಂಬುದನ್ನು ಅರಿತ ಭೂಮಿಕಾ ತಾನೂ ಏನಾದರೂ ಸಹಾಯ ಮಾಡಬೇಕೆಂದು ಯೋಚನೆ ಮಾಡುತ್ತಾಳೆ. ಅದರಂತೆ ಗೌತಮ್ ಬಳಿ ಮತ್ತೆ ಕೆಲಸಕ್ಕೆ ಹೋಗುವುದಾಗಿ ಹೇಳುತ್ತಾಳೆ.
ಗೌತಮ್ ಕೂಡ ಒಪ್ಪಿಕೊಳ್ಳುತ್ತಾನೆ. ಆದರೆ ಭೂಮಿಕಾ ಟ್ಯೂಷನ್ ಸಂಸ್ಥೆಗೆ ಹೋದಾಗ ಅಲ್ಲಿ ನಡೆಯುವುದೇ ಬೇರೆ ಆಗುತ್ತೆ. ಶಕುಂತಲಾ ದೇವಿ ಸಂಚು ಸಕ್ಸಸ್ ಆಗಿದೆ.
ಭೂಮಿಕಾ ಟ್ಯೂಷನ್ ಸಂಸ್ಥೆಗೆ ಹೊಸದಾಗಿ ಕೆಲಸಕ್ಕೆ ಆಗಮಿಸಿದಾಗ ಎಲ್ಲರೂ ಸ್ವಾಗತಿಸಲು ನಿಂತಿರುತ್ತಾರೆ. ಈ ಸ್ವಾಗತ ಏಕೆ ಎಂದು ಕೇಳಿದಾಗ “ನೀವೇ ವಿಐಪಿ” ಎಂದು ಹೇಳುತ್ತಾರೆ. ಮೊದಲೆಲ್ಲ ಲೇಟಾಗಿ ಬಂದ್ರೆ ಸ್ಯಾಲರಿ ಕಟ್ ಮಾಡ್ತಿನಿ ಅನ್ನೋರು ಈಗ ಯಾಕೆ ಹೀಗೆ ಮಾಡ್ತಾ ಇದ್ದಾರೆ ಎಂದು ಭೂಮಿಕಾಳಿಗೆ ಆಶ್ಚರ್ಯವಾಗುತ್ತದೆ. ಸಡನ್ ಆಗಿ ಈ ಗೌರವ, ಮರ್ಯಾದೆ ಏಕೆ ಎಂದು ಯೋಚಿಸುತ್ತಾಳೆ. ಭೂಮಿಕಾಗೆ ಟ್ಯೂಷನ್ ಕ್ಲಾಸ್ನಲ್ಲಿ ಎಲ್ಲಿಲ್ಲದ ಮರ್ಯಾದೆ ದೊರಕುತ್ತದೆ.
ಇದನ್ನೂ ಓದಿ :ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಬಿಡುಗಡೆಯಾಯಿತು ರಿಷಿ ಅಭಿನಯದ “ರುದ್ರ ಗರುಡ ಪುರಾಣ” ಚಿತ್ರದ ಫಸ್ಟ್ ಲುಕ್. .
“ನಿಮಗೊಂದು ಗುಡ್ ನ್ಯೂಸ್ ಇದೆ. ಇಷ್ಟು ದಿನ ನೀವು ಟ್ಯೂಟರ್ ಆಗಿದ್ರಿ. ನೀವು ಈ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್” ಎಂದು ಹೇಳಿದಾಗ ಭೂಮಿಕಾಳಿಗೆ ಆಶ್ಚರ್ಯವಾಗುತ್ತದೆ. “ನನ್ನನ್ನು ಯಾವ ಬೇಸಿಸ್ ಮೇಲೆ ಆಯ್ಕೆ ಮಾಡಿದ್ದೀರಿ” ಎಂದು ಕೇಳುತ್ತಾಳೆ. “ನಿಮ್ಮ ಟ್ಯಾಲೆಂಟ್ ಮೇಲೆ, ನಿಮ್ಮಲ್ಲಿ ಆ ಟ್ಯಾಲೆಂಟ್ ಇದೆ” ಎಂದು ಟ್ಯೂಷನ್ ಇನ್ಸ್ಟಿಟ್ಯೂಷನ್ನ ಮುಖ್ಯಸ್ಥರು ಹೇಳುತ್ತಾರೆ. ಆಕೆ ಎಷ್ಟು ಕೇಳಿದರೂ ಒಪ್ಪುವುದಿಲ್ಲ. ತುಂಬಾ ಗೊಂದಲದಲ್ಲಿ ಇರುತ್ತಾರೆ ಭೂಮಿಕಾ.
ಇದನ್ನೂ ಓದಿ :`ಕನ್ನಡ ಮಾಧ್ಯಮ’ ಚಿತ್ರದ ಬೆನ್ನಿಗೆ ನಿಂತರು ಹಿರಿಯ ಚಿತ್ರ ಸಾಹಿತಿ ದೊಡ್ಡರಂಗೇಗೌಡ
ಭೂಮಿಕಾಳಿಗೆ ಟ್ಯೂಷನ್ ಸಂಸ್ಥೆಯಲ್ಲಿ ಆಕೆಯ ಸ್ನೇಹಿತೆಯರಿಂದ ಕೊಂಕಿನ ಮಾತುಗಳು ಕೇಳಿಸುತ್ತವೆ. “ಕೆಲವರಿಗೆ ಅದೃಷ್ಟವಿದ್ದರೆ ಯಾವುದೇ ಹುದ್ದೆ ಸಿಗುತ್ತದೆ” ಎಂಬೆಲ್ಲ ಮಾತುಗಳನ್ನು ಉಳಿದವರು ಹೇಳಿದಾಗ ಭೂಮಿಕಾಳಿಗೆ ಬೇಸರವಾಗುತ್ತದೆ. “ನನಗೆ ನನ್ನ ಐಡೆಂಟೆಟಿ ಇಲ್ವ” ಎಂದು ಭೂಮಿಕಾ ಯೋಚಿಸುತ್ತಾಳೆ.
ಶಕುಂತಲಾದೇವಿ ಮತ್ತು ಆಕೆಯ ತಮ್ಮ ಮಾತನಾಡುತ್ತ ಇರುತ್ತಾರೆ. ಭೂಮಿಕಾ ಯಾಕೆ ಕೆಲಸಕ್ಕೆ ಹೋಗ್ತಾ ಇದ್ದಾಳೆ ಎಂದು ಯೋಚಿಸುತ್ತಾರೆ. “ನಾನು ನನ್ನ ಫ್ರೆಂಡ್ಸ್ ಜತೆ ಮಾತನಾಡಿದ್ದನ್ನು ಕೇಳಿಸಿಕೊಂಡ್ಲ, ಅವಳಿಗೆ ಅವಮಾನ ಆಗಿರಬಹುದಾ” ಎಂದು ಯೋಚಿಸಿರಬಹುದು.
ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಗೋವಾದಲ್ಲಿ ಮೋಜಿನ ಪ್ರವಾಸ ಮಾಡಿದ್ದಾರೆ
“ನನ್ನ ಸೊಸೆಗೆ ಪ್ರಮೋಷನ್ ಕೊಡಿ ಎಂದು ಏಕೆ ಹೇಳಿದೆ” ಎಂದು ತಮ್ಮ ಕೇಳಿದಾಗ “ಕಾರಣ ಇದ್ದೇ ನಾನು ಮಾಡಿದ್ದು. ಭೂಮಿಕಾ ತುಂಬಾ ಸ್ವಾಭಿಮಾನಿ. ಆಕೆಗೆ ಯಾರ ಹಂಗಲ್ಲೂ ಬದುಕಲು ಇಷ್ಟವಿಲ್ಲ. ಅವಳಿಗೆ ಪ್ರಮೋಷನ್ ಪ್ರಮೋಷನ್ ರೀತಿ ಕಾಣಿಸೋಲ್ಲ. ಅದು ಅವಮಾನದಂತೆ ಕಾಣಿಸುತ್ತದೆ. ಮನೆಗೆ ಬಂದು ದೊಡ್ಡ ಸೀನ್ ಮಾಡ್ತಾಳೆ.
ಗೌತಮ್ ಇದಕ್ಕೆ ಕಾರಣ ಎಂದುಕೊಳ್ಳುತ್ತಾಳೆ. ಗೌತಮ್ ಮತ್ತು ಭೂಮಿಕಾ ನಡುವೆ ಮಿಸ್ ಅಂಡರ್ಸ್ಟ್ಯಾಂಡಿಂಗ್ ತರ್ಸೋದೇ ನನ್ನ ಉದ್ದೇಶ” ಎನ್ನುತ್ತಾರೆ ಶಕುಂತಲಾದೇವಿ. ಮನೆಗೆ ಬೇಸರದಿಂದಲೇ ಭೂಮಿಕಾ ಆಗಮಿಸುತ್ತಾಳೆ. ಇದನ್ನು ನೋಡಿ ಇವರಿಬ್ಬರು ಖುಷಿಪಡುತ್ತಾರೆ.
ಇದನ್ನೂ ಓದಿ :“My biggest fear is – rewriting Math exam’’–Sparsha Rekha ; Chittara Exclusive
ಗೌತಮ್ ಗೆ ಇದರ ಬಗ್ಗೆ ಏನು ತಿಳಿದಿಲ್ಲ. ಆದರೆ ಭೂಮಿಕಾ ಬೇಸರ ಮಾಡಿಕೊಂಡು ಗಂಡನ ಮೇಲೆ ಕೂಗಾಡಿದ್ದಾಳೆ. ಏನು ಅರಿಯದೆ ಗೌತಮ್ ಸುಮ್ಮನೆ ಆಗಿದ್ದಾನೆ.