ಖುಷಿ ಸಿನಿಮಾದ ಮೇಲೆ ವಿಜಯ್ ಹಾಗೂ ಸಮಂತಾ ಅಭಿಮಾನಿಗಳಿಗೆ ತುಂಬಾ ಭರವಸೆ ಇದೆ. ಎರಡನೇ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. ‘ಆರಾಧ್ಯ’ ಎಂದು ಪ್ರಾರಂಭವಾಗುವ ಹಾಡು ಮಧುರವಾಗಿದ್ದು, ಜನರಿಗೆ ಇಷ್ಟವಾಗಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿರುವ ನಟ ವಿಜಯ್ ದೇವರಕೊಂಡ, ಒಂದೊಮ್ಮೆ ನಾನು ಮದುವೆಯಾದರೆ ನನ್ನ ವೈವಾಹಿಕ ಜೀವನ ಹೀಗಿರಬೇಕೆಂದು ಉದಾಹರಣೆಯೊಂದನ್ನು ಸಹ ನೀಡಿದ್ದಾರೆ. ಹೊಸದಾಗಿ ಮದುವೆಯಾಗಿರುವ ಜೋಡಿಯ ಮೊದಲ ಒಂದು ವರ್ಷದ ಸಮಯದಲ್ಲಿ ನಡೆಯುವ ಸರಸ, ತುಂಟಾಟ, ರೊಮ್ಯಾನ್ಸ್ ಅನ್ನು ಹಾಡಿನಲ್ಲಿ ತೋರಿಸಲಾಗಿದೆ. ವಿಜಯ್ ದೇವರಕೊಂಡ ಮಾತು ಕೇಳಿದ ಅಭಿಮಾನಿಗಳು ನಟ ಶೀಘ್ರದಲ್ಲೇ ಹಸೆಮಣೆ ಏರುವುದು ಪಕ್ಕಾ ಅಂತಿದ್ದಾರೆ.
ಇನ್ನೂ ಓದಿ
ನನಗೆ ಮದುವೆ ಆಗಿಲ್ಲ, ನನಗೆ ಮದುವೆ ಆಗದೇ ಇರಬಹುದು ಆದರೆ ಆ ಹಾಡಿನಲ್ಲಿ ತೋರಿಸಲಾಗಿರುವ ಹಲವು ದೃಶ್ಯಗಳು ನನ್ನ ನಿಜ ಜೀವನದಲ್ಲಿ ನಡೆದಿರುವಂಥಹದ್ದು ಎನ್ನುವ ಮೂಲಕ ರಿಯಲ್ ಲವ್ ಸ್ಟೋರಿ ಬಗ್ಗೆ ಸುಳಿವು ನೀಡಿದ್ದಾರೆ. ನಾನು ಅನುಭವಿಸಿರುವ ದೃಶ್ಯಗಳನ್ನೇ ಸೇರಿಸಿ ಆ ಹಾಡು ಮಾಡಲಾಗಿದೆ ಎಂದಿದ್ದಾರೆ. ವಿಜಯ್ ಮದುವೆ ಆಗಿಲ್ಲ ಸರಸ, ವಿರಸ, ತುಂಟಾಟ ಇತರೆಗಳನ್ನು ಹೇಗೆ ಅನುಭವಿಸಿದರು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಇನ್ನೂ ಓದಿ
ನಟಿ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಸೌತ್ನ ಕ್ಯೂಟ್ ಜೋಡಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಆದ್ರೆ ಈ ಬಗ್ಗೆ ನಟ-ನಟಿಯರು ಮಾತಾಡಿಲ್ಲ.ವಿಜಯ್ ದೇವರಕೊಂಡ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟ್ಯಾಲೆಂಟೆಡ್ ಯಂಗ್ ಹೀರೋ. ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ರಾತ್ರಿ ಬೆಳಗಾಗುವುದರಲ್ಲಿ ಸೂಪರ್ ಸ್ಟಾರ್ ಆದ ಲೈಗರ್ ನಟ ರಶ್ಮಿಕಾ ಜೊತೆಗೆ ಗೀತ ಗೋವಿಂದಂ ಸಿನಿಮಾ ಮಾಡಿ ಮಿಂಚಿದ್ದರು.