ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28ರಂದು ಸಂಜೆ 6.30ಕ್ಕೆ ಅದ್ದೂರಿಯಾಗಿ ಆರಂಭವಾಗುತ್ತಿದೆ. ಸ್ಪರ್ಧಿಗಳ ಆಯ್ಕೆ ಈಗಾಗಲೇ ಅಂತಿಮಗೊಂಡಿದ್ದು, ಪ್ರೋಮೋಗಳ ಮೂಲಕ ಕಾರ್ಯಕ್ರಮದ ವೈಶಿಷ್ಟ್ಯತೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ ಹೊಸ ಪ್ರೋಮೋದಲ್ಲಿ ನಿರೂಪಕ ಕಿಚ್ಚ ಸುದೀಪ್ ಕಾಗೆ–ನರಿಯ ಪುರಾತನ ಕಥೆಯನ್ನು ಹೇಳುವ ಮೂಲಕ ವಿಶೇಷ ಸಂದೇಶ ನೀಡಿದ್ದಾರೆ. ಸಾಮಾನ್ಯವಾಗಿ ನಮಗೆ ತಿಳಿದಿರುವ ಕಥೆಯಲ್ಲಿ ಕಾಗೆಯ ಬಾಯಿಂದ ವಡೆ ಜಾರಿ ನರಿಯ ಪಾಲಾಗುತ್ತದೆ. ಆದರೆ ಸುದೀಪ್ ಈ ಕಥೆಗೆ ಹೊಸ ಟ್ವಿಸ್ಟ್ ನೀಡಿದ್ದಾರೆ.ಅವರ ಕಥನದಲ್ಲಿ, ನರಿ ಹಾಡು ಹಾಡು ಎಂದಾಗ, ಕಾಗೆ ಬಾಯಲ್ಲಿ ಹಿಡಿದಿದ್ದ ವಡೆಯನ್ನು ಕೆಳಗೆ ಇಟ್ಟುಕೊಂಡು ಕಾಲಲ್ಲಿ ಅಟ್ಟಿಕೊಂಡು ಹಾಡುತ್ತದಂತೆ. ಹೀಗಾಗಿ ನರಿಯ ಯೋಜನೆ ವಿಫಲವಾಗುತ್ತದೆ ಮತ್ತು ನರಿ ಖಾಲಿಹಸ್ತದಿಂದ ಹೊರಟುಹೋಗುತ್ತದೆ.
https://www.instagram.com/reel/DOiuXb3AZRk/?utm_source=ig_web_copy_link
ಸುದೀಪ್ ಈ ಬದಲಾದ ಕಥೆ ಮೂಲಕ ಬಿಗ್ ಬಾಸ್ ಸೀಸನ್ 12 ಹಿಂದಿನ ಎಲ್ಲ ಸೀಸನ್‌ಗಳಿಗಿಂತ ವಿಭಿನ್ನವಾಗಿರಲಿದೆ ಎಂಬ ಸಂದೇಶ ನೀಡಿದ್ದಾರೆ. “ಈ ಬಾರಿ ನಡೆಯುವುದೇ ನಮ್ಮ ನಿರೀಕ್ಷೆಯ ವಿರುದ್ಧವಾಗಿರುತ್ತದೆ. ನಮಗೆ ಗೊತ್ತೆಂದುಕೊಂಡದ್ದೇ ಶಾಕ್ ಕೊಡುತ್ತದೆ” ಎಂದು ಅವರು ಹೇಳಿದ್ದಾರೆ.ಬಿಗ್ ಬಾಸ್ ಸೀಸನ್ 12 ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 28ರಂದು ಸಂಜೆ 6:30ಕ್ಕೆ ಪ್ರಸಾರವಾಗಲಿದ್ದು, ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9:30ರಿಂದ 10:30ರವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ.
