ಎಲ್ಲಾ ಕ್ಷೇತ್ರಗಳಲ್ಲೂ ಈ ಆಧುನಿಕ ಕಾಲದಲ್ಲಿ ಒಂದು ಬಗೆ. ಈ ಹಿಂದೆ ಇಲ್ಲದ ನಾವೀನ್ಯತೆಯನ್ನು ಕೆಲವರು ತರುತ್ತಿದ್ದಾರೆ. ಪಾರಂಪರಿಕ ಚೌಕಟ್ಟಿನಿಂದ ಹೊರ ಬಂದು ಹೊಸತನ ನೀಡುತ್ತಿದ್ದಾರೆ. ಒಂದು ಪ್ಲಸ್ ಒಂದು ಎಮ್ಟಿ ಫಾರ್ಮುಲಾ ತೊರೆದು ನಾವೀನ್ಯತೆಯ, ನವ್ಯ ಧಾಟಿಯ ಹಾದಿಯನ್ನು ತುಳಿಯುವ ಮೂಲಕ ಹೊಸದೊಂದು ಬಗೆಗೆ ನಾಂದಿಯನ್ನು ಹಾಡಿದ್ದಾರೆ. ಇಂಗ್ಲಿಷ್‌ನಲ್ಲಿ ಇಂಥ ಲವಲವಿಕೆಯನ್ನು `ಸ್ಟಾçಮ್ ಇನ್ ದ ಟೀ ಕಪ್’ ಎಂದು ಕರೆಯುತ್ತಾರೆ. `ಸ್ಟಾçಮ್ ಇನ್ ದ ಟೀ ಕಪ್’ ಎಂಬ ಮಾತಿಗೆ ಇದೆ ಅರ್ಥ. ಚೌಕಟ್ಟು ದಾಟಿ, ನಮೋನೇಫ ಶಾಲಿನಿ ಆಗುವುದು. ಅದೇ ಪ್ರಕ್ರಿಯೆ.

ಯಾವುದೇ ಕ್ಷೇತ್ರ ಕೂಡ ನಿಂತ ನೀರಾಗಬಾರದು. ಇಲ್ಲದೆ ಹೋದರೆ ಮಲೆತು ಕ್ರಿಮಿ ಕೀಟಗಳ ತಾಣವಾಗುತ್ತದೆ. ಅಪಸ್ವರ ಎದ್ದಾಗ ಅದಕ್ಕೆ ಕಾಯಕಲ್ಪ ಮಾಡಬೇಕು. ಆ ಕೆಲಸವನ್ನು ರೋಹಿಣಿ ಮೋಹನ್ ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಹೊಸ ಹೊಸ ಗೀತೆಗೆ ಅವರು ನಿರಂತರ ಚಡಪಡಿಸಿದ್ದಾರೆ. ಅಂಥ ಹೊಸ ದನಿಗಳಿಗೆ ಸ್ವರಪ್ರಸ್ತಾರ ಹಾಕಿ, ನಾವೀನ್ಯತೆಯ ನವ್ಯ ಸಂಯೋಜನೆ ಮಾಡಿದ್ದಾರೆ. ತನ್ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ. ಇದು ಕಡಿಮೆ ಕಾಯಕವೇನಲ್ಲ. ಶ್ರಮದ ಕೆಲಸವೇ ಸರಿ. ನೂರಾರು ಗೀತೆಗಳು ಪ್ರಚಲಿತದಲ್ಲಿರುವಾಗ ಎಲ್ಲಾ ಬಿಟ್ಟು ಬೇರೊಂದು ಧಾಟಿ ಬೆನ್ನು ಹತ್ತಿ ಹೋಗುವುದು, ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವುದೇ ಜೀವನ ಎಂಬ ಕವಿವಾಣಿಯಂತೆ ಈ ಕಾರ್ಯ ಕ್ಷಮತೆ.