ಹೊಸತನ, ಹೊಸಬರ ತಂಡವನ್ನೊಳಗೊoಡ, ಮಾದಕ ಜಗತ್ತಿನ ಮಾಯಾಲೋಕ “ಕಾಲಾಂತಕ” ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್ ಪಡೆದು ಬಿಡುಗಡೆಯ ಮುಹೂರ್ತವನ್ನು ಎದುರು ನೋಡುತ್ತಿದೆ. ಇಷ್ಟರ ಮಧ್ಯ ಇನ್ನೊಂದು ಪ್ರಯೋಗಕ್ಕೆ ಮುಂದಾಗುತ್ತಿರುವ ಚಿತ್ರತಂಡ ತೆಲುಗಿನಲ್ಲಿಯೂ ಬಿಡುಗಡೆ ತಯಾರಿ ನಡೆಸುತ್ತಿದೆ.
ಕೊರೋನಾ, ಲಾಕ್‌ಡೌನ್ ಕಾರಣದಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುತ್ತಿದೆ. ಜೊತೆಗೆ ಚಿತ್ರ ಮಂದಿರದತ್ತ ಜನರು ಬರಬೇಕಿದೆ. ಇದೊಂದು ಗಟ್ಟಿ ಕಂಟೆAಟ್ ಹಾಗೂ ಮೇಕಿಂಗ್ ಇರುವ ಚಿತ್ರವಾಗಿದ್ದು, ಜನರಿಗೆ ಮುಟ್ಟಬೇಕೆಂದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಬೇಕಿದೆ. ಈ ನಿಟ್ಟಿನಲ್ಲಿ ಬಿಡುಗಡೆಗೆ ಅವಸರ ಮಾಡುತ್ತಿಲ್ಲ. ಈ ಮಧ್ಯೆ ಸಿನಿಮಾ ರಂಗದಲ್ಲಿಯೇ ದೊಡ್ಡ ಸ್ಪೇಸ್ ಹೊಂದಿರುವ ತೆಲುಗು ಭಾಷೆಯಲ್ಲಿಯೂ ಏಕೆ ಕಾಲಾಂತಕವನ್ನು ಬಿಡುಗಡೆ ಮಾಡಬಾರದು? ಡಬ್ ಮಾಡುವುದಕ್ಕಿಂತ ಅಲ್ಲಿಯ ನೇಟಿವಿಟಿಗೆ ತಕ್ಕಂತೆ ಕೆಲವು ದೃಶ್ಯ ಹಾಗೂ ಹಾಡುಗಳನ್ನು ಚಿತ್ರೀಕರಣ ಮಾಡಬಾರದು ಎಂಬ ಯೋಚನೆ ಬಂದಿದ್ದು, ಮಾತುಕತೆಗಳು ನಡೆಯುತ್ತಿವೆ. ಎಲ್ಲವೂ ಅಂದುಕೊoಡoತಾದರೆ ಅಲ್ಲೂ ಸಹ ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ನಿರ್ಮಾಪಕರಾದ ಶಾಂತಕುಮಾರ್ ಹೇಳುತ್ತಾರೆ.
ಹಿಂದಿ, ಮಲೆಯಾಳಂನಲ್ಲಿ ಡಬ್..!
ಕಾಲಾಂತಕ ಚಿತ್ರವು ಬಿಡುಗಡೆಗೆ ಮುನ್ನವೇ ಸದ್ದಿಲ್ಲದೆ ಪ್ರಸಿದ್ಧಿ ಪಡೆಯುತ್ತಿದ್ದು, ಈಗಾಗಲೇ ಹಿಂದಿ ಮತ್ತು ಮಲೆಯಾಳಂನಲ್ಲಿ ಡಬ್ಬಿಂಗ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನೂ ಹಲವು ಭಾಷೆಗಳಲ್ಲಿ ಡಬ್ಬಿಂಗ್ ಮಾಡುವ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎನ್ನುತ್ತಾರೆ ನಿರ್ಮಾಪಕರಾದ ಶಾಂತಕುಮಾರ್.
ಒಟಿಟಿ ಕೇಳೋಕಷ್ಟೇ ಸುಲಭ..!
ತಂತ್ರಜ್ಞಾನ ಯುಗ, ಮೊಬೈಲ್ ಯುಗ ಎಂದೆಲ್ಲ ಹೇಳುತ್ತೇವೆ. ಈಗಿರುವ ಪ್ಯಾಂಡಮಿಕ್ ಪರಿಸ್ಥಿತಿಯಲ್ಲಿ ಜನ ಮನೆಯಿಂದ ಹೊರಬರಲ್ಲ, ಒಟಿಟಿಗೆ ಹೆಚ್ಚು ಸ್ಕೋಪ್ ಸಿಗುತ್ತೆ ಅಂತೆಲ್ಲ ಹೇಳುವುದು, ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡಿಬಿಡುತ್ತೇವೆಂದು ಹೊರಡುವುದೂ ಸುಲಭ. ಆದರೆ, ಅಸಲಿ ಕಷ್ಟವೇ ಬೇರೆ ಇದೆ. ಕಾರಣ, ಒಟಿಟಿ ಸಂಸ್ಥೆಗಳು ಸ್ಟಾರ್ ನಟರ ಸಿನಿಮಾಗಳಿಗೆ ಮಾತ್ರ ಹೆಚ್ಚಿನ ಆದ್ಯತೆಯನ್ನು ಕೊಡುತ್ತವೆ. ಅಲ್ಲದೆ, ನಮ್ಮ ಬಜೆಟ್‌ಗೂ ಕೆಲವೊಮ್ಮೆ ಸರಿಹೊಂದುವುದಿಲ್ಲ. ಸಿನಿಮಾ ಬಿಡುಗಡೆಯಾಗಿ ತಿಂಗಳಾಗಲಿ ನೋಡೋಣ ಎಂಬ ಮಾತೂ ಬರುತ್ತದೆ. ಹೀಗಾಗಿ ಇವೆಲ್ಲವೂ ಅಂದುಕೊoಡಷ್ಟು ಸುಲಭವಲ್ಲ ಎಂದು “ಚಿತ್ತಾರ” ಬಳಿ ಹೇಳಿಕೊಂಡಿದ್ದಾರೆ ಶಾಂತಕುಮಾರ್.
“ಕಾಲಾoತಕ” ಕಹಾನಿ…
ಮಾದಕ ಜಗತ್ತು, ಡ್ರಗ್ ಪೆಡ್ಲರ್‌ಗಳ ಸುತ್ತ ನಡೆಯುವ “ಕಾಲಾಂತಕ”ವು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಮಿಸ್ಟರಿಯೇ ಈ ಚಿತ್ರದ ಜೀವಾಳವಾಗಿದ್ದು, ಕರಾಳ ಜಗತ್ತಿನ ಅನಾವರಣ ಮಾಡಲಾಗಿದೆ. ಅಬಚೂರು ಎಂಬ ಕಾಲ್ಪನಿಕ ಗ್ರಾಮದ ಸುತ್ತ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಅಕ್ರಮ ಚಟುವಟಿಕೆ ಹಿನ್ನೆಲೆ ಇರುವುದರಿಂದ ರಾತ್ರಿ ಹೊತ್ತು ಹೆಚ್ಚು ಶೂಟಿಂಗ್ ನಡೆದಿದೆ.
ಚಿತ್ರ ತಂಡದಲ್ಲಿವರು..
ಭಾಸ್ಕರ್ ಮೂವಿಲೈನ್ ಪ್ರೊಡಕ್ಷನ್ ಮಾಲೀಕರಾದ ಶಾಂತಕುಮಾರ್ ನಿರ್ಮಾಪಕರು. ಎಂ.ಅoಬರೀಷ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಯಶವಂತ್ ಶೆಟ್ಟಿ ಮುಖ್ಯ ವಿಲನ್ ಪಾತ್ರಧಾರಿಯಾಗಿದ್ದಾರೆ. ಕೆಜಿಎಫ್ ಚಿತ್ರ ಖ್ಯಾತಿಯ ಅರ್ಚನಾ ಜೋಯಿಸ್ ಬರಹಗಾರ್ತಿಯಾಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಾರ್ತಿಕ್ ಸಾಮಗ, ಕೆ.ಎಸ್. ಶ್ರೀಧರ್, ಸುಷ್ಮಿತಾ ಜೋಷಿ, ಧರ್ಮೇಂದ್ರ ಅರಸ್ ಮುಖ್ಯ ತಾರಾಗಣದಲ್ಲಿದ್ದಾರೆ. ಟೀಸರ್‌ನಲ್ಲಿ ಕೆ.ಎಸ್.ಶ್ರೀಧರ್ ಅವರ ಹಿನ್ನೆಲೆ ಧ್ವನಿಗೆ ಈಗಾಗಲೇ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹರೀಶ್ ಗೊಂಬೆ ಸಂಕಲನವಿದ್ದರೆ, ಜಯಂತ್ ಕಾಯ್ಕಿಣಿ, ಕಿನ್ನಲ್ ರಾಜ್ ಅವರ ಸಾಹಿತ್ಯವಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶಕರಾಗಿದ್ದಾರೆ.
ಕ್ಯಾಮೆರಾ ಕಮಾಲ್
ಕರಾಳ ದಂಧೆ, ಮಾದಕ ವಸ್ತುಗಳು, ಅಕ್ರಮ ಚಟುವಟಿಕೆಯ ಸುತ್ತ ಸಾಗಬೇಕಿದ್ದರಿಂದ ಚಿತ್ರದ ಬಹುಪಾಲನ್ನು ರಾತ್ರಿ ಹೊತ್ತಿನಲ್ಲಿ ಚಿತ್ರೀಕರಿಸಲಾಗಿದೆ. ಹೀಗಾಗಿ ಕತ್ತಲಿನಲ್ಲಿ ಲೈಟಿಂಗ್ಸ್ ಸೇರಿದಂತೆ ವಿಷುವಾಲಿಟಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕಾಗುತ್ತದೆ. ಆ ಕೆಲಸವನ್ನು ಇಲ್ಲಿ ಕ್ಯಾಮೆರಾಮನ್ ಎಸ್. ಹಾಲೇಶ್ ಹಾಗೂ ನಿರ್ದೇಶಕರಾದ ಅಂಬರೀಷ್ ಮಾಡಿದ್ದಾರೆ. ರಾತ್ರಿಯ ಸಹಜತೆಗೆ ಎಲ್ಲಿಯೂ ಧಕ್ಕೆ ಬರದಂತೆ ಚಿತ್ರೀಕರಣ ಮಾಡಲಾಗಿದೆ ಎನ್ನುತ್ತದೆ ಚಿತ್ರತಂಡ.