Sandalwood Leading OnlineMedia

‘ಡಂಕಿ’ ಡೈರೆಕ್ಟರ್ ಗಿಂದು ಹುಟ್ಟುಹಬ್ಬದ ಸಂಭ್ರಮ….ರಾಜ್ ಕುಮಾರ್ ಹಿರಾನಿ ಜನ್ಮದಿನಕ್ಕೆ ಹರಿದು ಬಂದ ಶುಭಾಶಯಗಳ ಮಹಾಪೂರ

ಬಾಲಿವುಡ್ ಕಂಡ ಅಪರೂಪದ ಸಿನಿಮಾ ಮೇಕರ್ಸ್..ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿಗಿಂದು ಜನ್ಮದಿನದ ಶುಭಾಶಯ. ಮುನ್ನಾ ಬಾಯ್ ಎಂಬಿಬಿಎಸ್, ತ್ರಿ ಇಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವು ಹಿರಾನಿ ಡಂಕಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ ನವೆಂಬರ್ 22 ರಂದು ಪ್ರಜ್ವಲ್ ದೇವರಾಜ್ ಅಭಿನಯದ “ಮಾಫಿಯಾ” ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್. .

ಸಾಮಾನ್ಯವಾಗಿ ರಾಜ್ ಕುಮಾರ್ ಹಿರಾನಿ ಚಿತ್ರಗಳು ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶಗಳನ್ನು ಒಳಗೊಂಡಿರುತ್ತದೆ. ಫ್ಯಾಮಿಲಿ ಕುಳಿತು ನೋಡುವ ಸಿನಿಮಾಗಳಾಗಿರುತ್ತವೆ. ಇಂತಹ ಸ್ಟಾರ್ ಡೈರೆಕ್ಟರ್ ಶಾರುಖ್ ಖಾನ್ ಗೆ ಡಂಕಿ ಎಂಬ ಸಿನಿಮಾ ಅನೌನ್ಸ್ ಮಾಡಿರುವುದು ಗೊತ್ತೇ ಇದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ ನೀಲಿ ತೀರವಲ್ಲ ರಕ್ತದ ಹೊಳೆ, ಕೆಂಪಾಯಿತು ಪ್ರೇಮಕಥೆ! ಸಪ್ತ ಸಾಗರದಾಚೆ ಎಲ್ಲೋ ಸೈಡ್‌ B ವಿಮರ್ಶೆ

ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ.

ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ನಾಯಕನಾಗಿ ಶಾರುಖ್ ಖಾನ್ ನಟಿಸಿದ್ದು, ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಅತೀ ದೊಡ್ಡ ತಾರಾಬಳಗದ `ಡಂಕಿ’ ಸಿನಿಮಾ ವಿಶ್ವದಾದ್ಯಂತ ಕಣಕ್ಕಿಳಿಯಲು ಸಜ್ಜಾಗಿದ್ದು, `ಸಲಾರ್’ ಎದುರು ಸ್ಪರ್ಧಿಸಲು ಸಿದ್ದವಾಗಿದೆ. ಇದೇ ಡಿಸೆಂಬರ್ 22ರಂದು ಮೋಸ್ಟ್ ಅವೈಟೆಡ್ ಡಂಕಿ ತೆರೆಗಪ್ಪಳಿಸಲಿದೆ.

Share this post:

Related Posts

To Subscribe to our News Letter.

Translate »