ಸ್ಯಾಂಡಲ್‌ವುಡ್‌ನಲ್ಲೀಗ ʻಕಾಟೇರʼ ಸದ್ದು ಜೋರಾಗಿದೆ. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯದಲ್ಲೂ ಕಾಟೇರ ಸಿನಿಮಾ ಅಬ್ಬರಿಸುತ್ತಿದೆ. ಇದರ ನಡುವೆ ಜೆಟ್ ಲ್ಯಾಗ್ ಪಬ್ ಕೂಡ ಸದ್ದು ಮಾಡುತ್ತಿದೆ. ʻಕಾಟೇರʼ ಸಿನಿಮಾ ಸಕ್ಸಸ್ ಪಾರ್ಟಿಯ ದಿನವೇ ದರ್ಶನ್ ಮತ್ತು ಸ್ನೇಹಿತರು ಜೆಟ್ ಲ್ಯಾಗ್ ಪಬ್ ಗೆ ಭೇಟಿ ನೀಡಿದ್ದರು. ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದ ಆರೋಪದ ಮೇಲೆ ದರ್ಶನ್, ರಾಕ್‌ಲೈನ್, ಪ್ರಜ್ವಲ್, ಚಿಕ್ಕಣ್ಣ ಸೇರಿದಂತೆ ಹಲವರಿಗೆ ಪೊಲೀಸರು ನೋಟೀಸ್ ನೀಡಿದ್ದರು. ಈ ಸಂಬಂಧ ನಟರು ವಿಚಾರಣೆಗೆ ಹಾಜರಾಗಿ ಮಾಹಿತಿಯನ್ನ ನೀಡಿದ್ದಾರೆ. ಈ ಬೆನ್ನಲ್ಲೇ ಜೆಟ್ ಲ್ಯಾಗ್ ಗೆ ಸಂಕಷ್ಟ ಬಂದಿಎ.
ಪೊಲೀಸ್ ವಿಚಾರಣೆಯ ಬಳಿಕ ʻನಾವೂ ಪಾರ್ಟಿ ಮಾಡಿಲ್ಲ. ಬರೀ ಊಟ ಮಾಡಿದ್ದೆವು ಅಷ್ಟೆʼ ಎಂದು ಎಲ್ಲರು ಹೇಳಿದ್ದರು. ಆದರೆ ಪಬ್ ನಿಯಮ ಮೀರಿ ಮಧ್ಯರಾತ್ರಿ ತನಕ ಪಬ್ ಓಪನ್ ಇದ್ದ ಕಾರಣಕ್ಕೆ ಈಗ ಕಠಿಣ ಕ್ರಮಗಳನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಪಬ್‌ನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.
ಮುಂದಿನ 25 ದಿನಗಳ ಕಾಲ ಮದ್ಯ ಮಾರಾಟ ಮಾಡದಂತೆ ನಿಷೇಧ ಹೇರಲಾಗಿದೆ. ಡಿಸಿ ಆದೇಶ ನೀಡಿದ್ದಾರೆ. ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿರುವುದ ಎಫ್‌ಐಆರ್ ನಲ್ಲಿ ದಾಖಲಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಶಾಕ್ ನೀಡಿದ್ದಾರೆ. ಜೆಟ್ ಲ್ಯಾಗ್ ಮೇಲ ಇದೇ ಮೊದಲ ಬಾರಿಗೆ ಈ ರೀತಿಯಾದಂತ ದೂರು ದಾಖಲಾಗಿದೆ. ಇನ್ನು ಎಡರು ಬಾರಿ ದೂರು ದಾಖಲಾದರೆ ಪರವಾನಗಿಯನ್ನು ರದ್ದು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.