Sandalwood Leading OnlineMedia

ಕೋವಿಡ್ ಸಂಕಷ್ಟದಲ್ಲಿ ನಲುಗಿದ ಭಿಕ್ಷುಕನ ಕಥೆ

ಕೊರೋನಾ ಎನ್ನುವ ಮಹಾಮಾರಿ ಸಾಮಾನ್ಯ ಜನರ ಬದುಕನ್ನು ಮೂರಾಬಟ್ಟೆ ಮಾಡಿತ್ತು. ಆ ಸಮಯದಲ್ಲಿ ನೊಂದುಬೆಂದ ಜೀವಗಳೆಷ್ಟೋ. ಅದರಲ್ಲೂ ಪ್ರತಿದಿನ ಸಾರ್ವಜನಿಕರು ನೀಡುವ ಭಿಕ್ಷೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಭಿಕ್ಷುಕರ ಜೀವನ ಏನಾಗಿರಬೇಡ, ಇದೇ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ಮಾಣವಾದ ಚಿತ್ರ ಭಿಕ್ಷುಕ. ಯುವ ನಿರ್ದೇಶಕ ಜಿ.ಶಿವಮಣಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಹಾಗೂ ಹಾಡುಗಳ ಪ್ರದರ್ಶನ ಈಚೆಗೆ ನಡೆಯಿತು.
ಬುಲೆಟ್ ರಾಜ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಕೂಡ. ಜ್ಯೋತಿ ಮರೂರು ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಕಿರಣ್ ವಾಘ ಅವರ ಸಂಗೀತ ಸಂಯೋಜನೆ ಹಾಗೂ ನಾಗ್ ಶೆಟ್ಟಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ನಿರ್ದೇಶಕ ಶಿವಮಣಿ ಮಾತನಾಡುತ್ತ ಕೀಚಕರು ನಂತರ ನನ್ನ ೨ನೇ ಚಿತ್ರವಿದು. ಕೊರೋನಾ ಲಾಕ್ ಡೌನ್ ಟೈಮ್ ನಲ್ಲಿ ಹುಟ್ಟಿದ ಕಥೆಯಿದು. ಆ ಸಮಯದಲ್ಲಿ ಭಿಕ್ಷುಕರು ಏನೆಲ್ಲ ತೊಂದರೆ ತಾಪತ್ರಯಗಳನ್ನು ಅನುಭವಿಸಿದರು ಎಂಬುದನ್ನು ಹೇಳುವ ಚಿತ್ರ. ಮೊದಲು ಷಾರ್ಟ್ ಫಿಲಂ ಮಾಡೋಣ ಎಂದುಕೊಂಡು ಆರಂಭಿಸಿದೆವು, ನಂತರ ಅದು ಚಲನಚಿತ್ರವೇ ಆಯಿತು. ಚಿತ್ರದ ಟೈಟಲ್ ಸಾಂಗನ್ನು ಬಿ.ಆರ್.ಲಕ್ಷ್ಮಣರಾವ್ ಬರೆದಿದ್ದಾರೆ. ಮಕ್ಕಳಾಗಿ ಅನಂದ್ ಗಣೇಶ್, ಪೂಜಾ ನಟಿಸಿದ್ದಾರೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.
ನಂತರ ಮಾತನಾಡಿದ ಬುಲೆಟ್ ರಾಜು ಈಗಿನ ಕಾಲಘಟ್ಟಕ್ಕೆ ಈ ಸಿನಿಮಾ ಬೇಕು ಎನಿಸಿತು. ಎಲ್ಲರೂ ಸೇರಿ ಪ್ರೇಕ್ಷಕರ ಮನಮುಟ್ಟುವಂತೆ ಸಿನಿಮಾ ಮಾಡಿದ್ದೇವೆ. ವೆಂಕಿ ಅಲ್ಲದೆ ೨ ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದು ಮೊದಲಬಾರಿಗೆ ನಿರ್ಮಾಪಕನಾಗಿದ್ದೇನೆ ಎಂದು ಹೇಳಿದರು. ನಟಿ ಜ್ಯೋತಿ ಮರೂರು ಮಾತನಾಡಿ ಚಿತ್ರ ಕಳೆದವರ್ಷವೇ ಆರಂಬವಾಗಿತ್ತು. ಲಾಕ್ ಡೌನ್ ಆಗಿ ಚಿತ್ರರಂಗವೆ ಬಂದ್ ಆಗಿದ್ದಾಗ ನಿರ್ಮಾಪಕರು ಕೆಲಸ ಕೊಟ್ಟು ಹಣವನ್ನೂ ನೀಡಿದ್ದರು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಹಿರಿಯನಟ ಬಿರಾದಾರ್ ಮಾತನಾಡಿ ಚಿತ್ರದಲ್ಲಿ‌ ನಾನೂ ಚಿಕ್ಕಪಾತ್ರ ಮಾಡಿದ್ದೇನೆ. ಕಷ್ಟಕಾಲದಲ್ಲಿದ್ದಾಗ ಅನ್ನ ನೀಡಿದ ನಿರ್ಮಾಪಕರಿವರು ಎಂದರು. ಚಿತ್ರಕ್ಕೆ ಸಂಭಾಷಣೆ ರಚಿಸಿದ್ದ ಎಸ್.ಕೆ.ಸಾಲಿ ಮಾತನಾಡಿ ಡೈಲಾಗ್ ಬಗ್ಗೆ ಹೇಳಿಕೊಂಡರು. ಸಂಗೀತ ನಿರ್ದೇಶಕ ಕಿರಣ್ ವಾಘ ಮಾತನಾಡಿ ನಿರ್ಮಾಪಕರು ಹಾಡುಗಳನ್ನು ಮಾಡಲು ತುಂಬಾ ಸ್ವಾತಂತ್ರ್ಯ ಕೊಟ್ಟಿದ್ದರು ಎಂದರು. ಚಿತ್ರದ ಉಳಿದ ತಾರಾಗಣದಲ್ಲಿ ತಬಲಾನಾಣಿ, ಯತಿರಾಜ್, ಶೋಭರಾಜ್, ಶರತ್ ಲೋಹಿತಾಶ್ವ, ಶಂಖನಾದ ಅರವಿಂದ್ ನಟಿಸಿದ್ದಾರೆ.

Share this post:

Related Posts

To Subscribe to our News Letter.

Translate »