Sandalwood Leading OnlineMedia

 ಕೆ.ಆರ್.ಜಿ ತೆಕ್ಕೆಗೆ  ‘ಪೆಪೆ’ ವಿತರಣೆ ಹಕ್ಕು

 

ವಿನಯ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಪೆಪೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಪಾಸಾಗಿರುವ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಕ್ಲಾಸ್ ಹೀರೊ ಆಗಿ ಸೈ ಎನಿಸಿಕೊಂಡಿರುವ ವಿನಯ್ ಪೆಪೆ ಚಿತ್ರಕ್ಕಾಗಿ ಮಾಸ್ ಅವತಾರವೆತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇದೆ. ಸದ್ಯ ‘ಪೆಪೆ ಪ್ರಿಸೆಟ್’ ಟೈಟಲ್ ನಡಿ ಬಂದ ಸಾಂಗ್ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಚಿತ್ರದ ವಿತರಣೆ ಹಕ್ಕು ಕೆಆರ್ ಜಿ ತೆಕ್ಕೆಗೆ ಸೇರಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ‘ಪೆಪೆ’ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗಳ ವಿತರಣೆಯಲ್ಲಿ  ಒಳ್ಳೆ ಹೆಸರು ಗಳಿಸಿರುವ ಆ ಸಂಸ್ಥೆ  ‘ಪೆಪೆ’ ತಂಡಕ್ಕೆ ಸಾಥ್ ಕೊಟ್ಟಿದೆ. ಕೆಆರ್ ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರ ವಿತರಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ವಿನಯ್ ರಾಜ್‌ಕುಮಾರ್ ಇಲ್ಲಿವರೆಗೂ ಸಾಫ್ಟ್ ಚಿತ್ರಗಳನ್ನೆ ಮಾಡಿದ್ದಾರೆ. ಆದರೆ ಪೆಪೆ ಚಿತ್ರ ವಿಭಿನ್ನವಾಗಿಯೇ ಇವೆ. ಪೆಪೆ ಚಿತ್ರದಲ್ಲಿ ವಿನಯ್ ರಗಡ್ ಲುಕ್ ನಲ್ಲಿ‌ ಕಾಣಿಸಿಕೊಂಡಿದ್ದಾರೆ. ಕ್ಲಾಸ್ ಹೀರೋನಿಂದ ಮಾಸ್ ಲುಕ್ ಆಗಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಶ್ರೀಲೇಶ್ ಎಸ್ ನಾಯರ್ ಚೊಚ್ಚಲ ನಿರ್ದೇಶನದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ  ಒಂದು ರೀತಿ ಪರಿಪೂರ್ಣ ವಿಭಿನ್ನ ಕಥೆ ಹೊತ್ತು ಬರುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

 

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.


Share this post:

Related Posts

To Subscribe to our News Letter.

Translate »