ಸ್ಯಾಂಡಲ್ ವುಡ್ ಬಾದ್ ಶಾ, ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಸೆಪ್ಟೆಂಬರ್ 2ರಂದು 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಕಳೆದ ರಾತ್ರಿಯಿಂದಲೇ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಹುಟ್ಟುಹಬ್ಬದ ಶುಭಕೋರಲು ಬೆಂಗಳೂರಿಗೆ ಬಂದಿದ್ದರು. ಈ ಬಾರಿ ಕಿಚ್ಚ ಸುದೀಪ್ ತಮ್ಮ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳೊಂದಿಗೆ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ಅದ್ದೂರಿ ಸಮಾರಂಭದ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ನಿನ್ನೆ ಶುಕ್ರವಾರ ರಾತ್ರಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು ಸಂಭ್ರಮದಲ್ಲಿ ಭಾಗಿಯಾಗಿದರು. ಸುದೀಪ್ ಪತ್ನಿ ಪ್ರಿಯಾ, ಪುತ್ರಿ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಭಾಗಿಯಾಗಿ ಕೇಕ್ ತಿನ್ನಿಸಿ, ಶುಭಕೋರಿದರು. ಡ್ರೋಣ್ ಲೈಟಿಂಗ್ ಮೂಲಕ ಪತ್ನಿ ಪ್ರಿಯಾ ಸ್ಪೆಷಲ್ ವಿಶ್ ಮಾಡಿದರು. ಆ ಸಂದರ್ಭದ ಅಪರೂಪದ ಫೋಟೋಗಳು ಇಲ್ಲಿವೆ..