ತುಪ್ಪ ಬೇಕಾ ತುಪ್ಪ ಎಂಬ ಐಟಂ ಸಾಂಗ್ ನಿಂದ ಜನಪ್ರಿಯವಾದ ನಟಿ ರಾಗಿಣಿ ದ್ವಿವೇದಿ ಮೊಟ್ಟ ಮೊದಲ ಬಾರಿಗೆ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಾಡಿನ ಮೊದಲ ಲುಕ್ ಶೇರ್ ರಾಗಿಣಿ ಶೇರ್ ಮಾಡಿದ್ದಾರೆ. ರಾಗಿಣಿ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ನನ್ನ ಮೊದಲ ಆಲ್ಬಂ ಸಾಂಗ್, ಗ್ಲಾಮರಸ್ ಆಗಿದೆ, ಪ್ರೇಕ್ಷಕರಿಗೆ ಎನರ್ಜಿ ಬೂಸ್ಟರ್ ಆಗಲಿದೆ ಎಂದು ರಾಗಿಣಿ ತಿಳಿಸಿದ್ದಾರೆ.
ಸ್ಪೆಷಲ್ ಸಾಂಗ್ಸ್ ನ ಕ್ವೀನ್ ನಾನು, ಸಿನಿಮಾಗಳ ಹಾಡಿನ ಜೊತೆಗೆ ಆಲ್ಬಂ ಸಾಂಗ್ ನಲ್ಲಿ ಸ್ವತಂತ್ರ್ಯವಾಗಿ ಕಾಣಿಸಿಕೊಂಡಿದ್ದೇನೆ, ಸೌತ್ ಇಂಡಿಯಾದಲ್ಲಿ ಇದೊಂದು ಟ್ರೆಂಡ್ ಸೃಷ್ಟಿಸಲಿದೆ, ಅನೇಕ ದಿನಗಳ ನಂತಕ ನಾನು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದು ಕಾತುರದಿಂದ ಕಾಯುತ್ತಿದ್ದೇನೆ ಎಂದು ರಾಗಿಣಿ ತಿಳಿಸಿದ್ದಾರೆ.
