ನವೀನ್ ಶಂಕರ್.. ರಗಡ್ ಮತ್ತು ಖಡಕ್ ಸಿನಿಮಾಗಳಿಗೆ ಸಖತ್ ಫೇಮಸ್. ಕಂಟೆಂಟ್ ಇರುವ ಸಿನಿಮಾಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ನಟ ಇವರು. ನವೀನ್ ಶಂಕರ್ ಮೂಲತಃ ಬಾಲಗಕೋಟೆ ಜಿಲ್ಲೆಯ ಇಳಕಲ್ ಮೂಲದವರು. ಆರಂಭದಲ್ಲಿ ಪತ್ರಿಕೋದ್ಯಮದ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ನವೀನ್, ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ರಿಪೋರ್ಟ್ ಕೂಡ ಆಗಿದ್ದರು. ಬಳಿಕ ರಾಜಮಾರ್ಗ್ ಕಲೆ, ಸಂಸ್ಕೃತಿ ಮತ್ತು ನಾಟಕ ಅಕಾಡೆಮಿ ಅಡಿಯಲ್ಲಿ ೨೦೧೦ರಿಂದ ಮೂರು ವರ್ಷಗಳ ಕಾಲ ರಂಗಭೂಮಿಯಲ್ಲಿದ್ದರು.
ಈ ಮೂರು ವರ್ಷಗಳಲ್ಲಿ ೪೫ಕ್ಕೂ ಹೆಚ್ಚು ಸ್ಟೇಜ್ ಶೋಗಳಲ್ಲಿ ಮತ್ತು ಎಂಟು ವಿಭಿನ್ನ ನಿರ್ಮಾಣ ಬ್ಯಾನರ್ಗಳನ್ನೊಳಗೊಂಡ ಸಾಮಾಜಿಕ ಜಾಗೃತಿಯ ೨೦೦ ಬೀದಿ ನಾಟಕಗಳಲ್ಲಿ ಮಾಡಿದ್ದಾರೆ.
ಹೀಗೆ ಕಲೆ ಮೇಲೆ ಆಸಕ್ತಿ ಹೊಂದಿದ್ದ ನವೀನ್ ಶಂಕರ್ ಅವರನ್ನು ಸೆಳೆದಿದ್ದು ಸಿನಿಮಾರಂಗ. ೨೦೧೮ರಲ್ಲಿ ರಿಲೀಸ್ ಆದ `ಗುಲ್ಟು’ ಸಿನಿಮಾ ಮೂಲಕ ಒಳ್ಳೆ ನಟರಾಗಿ ಗುರುತಿಸಿಕೊಂಡರು.
ಗುಳ್ಟು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡರು. ಬಳಿಕ ಬಂದ ಸಿನಿಮಾಗಳು ಕೂಡ ಕಂಟೆAಟ್ ಒರಿಯೆಂಟೆಡ್ ಮೇಲೆಯೇ ಆಯ್ಕೆ ಮಾಡಿಕೊಂಡಿದ್ದರಿಂದ ಭರವಸೆಯ ನಟರಾಗಿ ಬೆಳೆದರು.
ಹೊಯ್ಸಳ ಸಿನಿಮಾದಲ್ಲಿ ಧನಂಜಯ್ ಎದುರು ಖಡಕ್ ವಿಲನ್ ಆಗಿ ಅಬ್ಬರಿಸಿ ಗಮನ ಸೆಳೆದರು. ಜೊತೆಗೆ ರೈತ ಹಾಗೂ ಇಂಜಿನಿಯರ್ ಇಬ್ಬರ ಹೋರಾಟದ ಕಥೆ ಹೊಂದಿದ್ದಂತ ʼಕ್ಷೇತ್ರಪತಿʼಯಲ್ಲಿ ಎಲ್ಲರ ಗಮನ ಸೆಳೆದವರು. ಈಗಾಗಲೇ ಉತ್ತಮ ಕಂಟೆಂಟ್ ಇರುವಂತ ಸಿನಿಮಾಗಳನ್ನು ಮಾಡಿರುವ ನವೀನ್ ಶಂಕರ್ ಮುಂದೆ ಆಯ್ಕೆ ಮಾಡಿಕೊಳ್ಳಬೇಕಾದ ಪಾತ್ರಗಳು ಕೂಡ ಬಹಳ ಮುಖ್ಯವಾಗುತ್ತದೆ.
ಹೀಗಾಗಿ ಒಂದೆರಡು ಸಿನಿಮಾದ ಕಥೆಯನ್ನು ಕೇಳಿರುವ ನವೀನ್, ಆಯ್ಕೆಯಲ್ಲಿ ಬಹಳಷ್ಟು ಯೋಚನೆ ಮಾಡುತ್ತಿದ್ದಾರೆ. ಜೊತೆಗೆ `ನೋಡಿದವರು ಏನಂತಾರೆ’ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಜೂನ್ ಅಥವಾ ಜುಲೈನಲ್ಲಿ ಸಿನಿಮಾ ತೆರೆಗೆ ಬರಲಿದೆ.