Sandalwood Leading OnlineMedia

ಅರ್ಜುನನ ಸಮಾಧಿ ನಿರ್ಮಾಣ ಯಾವಾಗ ಮಾಡುತ್ತೀರಾ..? ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಶ್ನೆ

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೈಸೂರು ದಸರಾದಲ್ಲಿ ಎಂಟು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರ್ಮರಣಕ್ಕೀಡಾಗಿತ್ತು. ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯುವಾಗ ಒಂಟಿ ಸಲಗದೊಂದಿಗೆ ನಡೆದ ಸಂಘರ್ಷದಲ್ಲಿ ತಿವಿತಕ್ಕೊಳಗಾಗಿ ಮೃತಪಟ್ಟಿತ್ತು. ಅರ್ಜುನನ ಸಾವಿಗೆ ಇಡೀ ರಾಜ್ಯ ಮಂದಿ ಕಂಬನಿ ಮಿಡಿದಿದ್ದರು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಾಧಿ ಬಗ್ಗೆ ಧ್ವನಿ ಎತ್ತಿದ್ದಾರೆ.

 

ಇದನ್ನೂ ಓದಿ:‘ಅರ್ಜುನ’ನ ಸಮಾಧಿಗೆ ಯಾರು ದಿಕ್ಕು ದೆಸೆ ಇಲ್ಲ : ಅರ್ಜುನನ ಆಸರೆಗೆ ‘ಡಿ’ ಬಾಸ್ ಮನವಿ

ಕಳೆದ ವರ್ಷ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿಗೆ ದಿಕ್ಕು ದೆಸೆ ಇಲ್ಲದೆಂತೆ ಭಾಸವಾಗುತ್ತಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮಳೆಗಾಲ ಶುರುವಾಗುವ ಮುನ್ನ ಸಮಾಧಿ ನಿರ್ಮಾಣ ಕೆಲಸ ಆರಂಭವಾಗಲಿ ಎನ್ನುವುದು ನನ್ನ ಕೋರಿಕೆ.

ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ.

 

ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು” ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

 

Actor Darshan's appeal triggers fund flow for zoo animals

ಇದನ್ನೂ ಓದಿ :ನನ್ನ ಶಕ್ತಿ – ಕನ್ನಡ , ನನ್ನ ದೌರ್ಬಲ್ಯ – ಕನ್ನಡಿ ! -ಮಾಸ್ತಿ (ಖ್ಯಾತ ಸಂಭಾಷಣೆಗಾರ) ; Chittara Exclusive

ದರ್ಶನ್ ಪೋಸ್ಟ್ಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಈ ಸಾಮಾಜಿಕ ಕಳಕಳಿಗೆ ಈ ನಿಮ್ಮ ಸೆಲೆಬ್ರಿಟಿಗಳು ಸದಾ ಸಿದ್ದ. ಪುಣ್ಯಾತ್ಮ ಕಣಯ್ಯ ನೀನು” “ಇದೇ ಕಾರಣಕ್ಕೇ ಬಾಸ್ ನಿಮ್ಮನ್ನ ಇಷ್ಟ ಪಡೋದು” “ಕೆಲವರು ತಾವು ತಮ್ಮ ಹೆಂಡ್ತಿ ಮಕ್ಕು ಚೆನ್ನಾಗಿದ್ರೆ ಸಾಕು ಅಂಥ ಯೋಚೆ ಮಾಡ್ತಿದ್ರೆ, ಅಲ್ಲೊಬ್ಬನ ಹೃದಯ ಮೂಕ ಪ್ರಾಣಿಗೆ ನ್ಯಾಯ ಕೊಡ್ಸೋಕೆ ಮಿಡಿತಿತ್ತು,, ನಿಜ್ವಾಗ್ಲೂ ನೀವು ದೇವ್ರು ಕಣಯ್ಯಾ ” “ಎಲ್ಲಾ ಇರೋವರೆಗೂ ಅಷ್ಟೇ… ಸತ್ತಮೇಲೆ ಬೆಲೆನೆ ಇಲ್ಲ.. ಅರ್ಜುನನ ಮರೆತೇ ಬಿಟ್ರು.. ಅರಣ್ಯ ಇಲಾಖೆ ಮತ್ತು ಸರ್ಕಾರ.. ಅರ್ಜುನ ನಿಗೆ ಒಂದು ಗೂಡು ಕಟ್ಟುವ ಕೆಲಸ ಮಾಡಿ… ನೀವು ಮಾಡಿರುವ ತಪ್ಪಿಗೆ ಪ್ರಾಯಶ್ಚಿತವಾದ್ರು ಸಿಗುತ್ತೆ” “ಮೂಕ ಪ್ರಾಣಿಗಳ ಪಾಲಿನ ಪುಣ್ಯಾತ್ಮ ಡಿ ಬಾಸ್” ಎಂದೆಲ್ಲ ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

Share this post:

Related Posts

To Subscribe to our News Letter.

Translate »